ಉದ್ಧವ್ ಠಾಕ್ರೆಗೆ ದೊಡ್ಡ ಹಿನ್ನಡೆ: ಏಕನಾಥ್ ಶಿಂಧೆಗೆ ಬೆಂಬಲ ಘೋಷಿಸಿದ ಹಿರಿಯಣ್ಣನ ಮಗ ನಿಹಾರ್‌ ಠಾಕ್ರೆ

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಂಡ ನಂತರ ಶಿವಸೇನೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಹೆಣಗಾಡುತ್ತಿರುವ ಉದ್ಧವ್ ಠಾಕ್ರೆ ಇಂದು, ಶುಕ್ರವಾರ ಮತ್ತೊಂದು ಹಿನ್ನಡೆಯನ್ನು ಅನುಭವಿಸಿದ್ದಾರೆ. ಅವರ ಅಣ್ಣನ ಮಗ ನಿಹಾರ್ ಠಾಕ್ರೆ, ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಪರಂಪರೆಯನ್ನು ಪ್ರತಿಪಾದಿಸುತ್ತಿರುವ ಬಂಡಾಯ ಸೇನಾ ನಾಯಕ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
1996 ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದ ನಿಹಾರ್ ಠಾಕ್ರೆಯವರ ತಂದೆ ಬಿಂದುಮಾಧವ್ ಠಾಕ್ರೆ ಅವರು ಬಾಳ್ ಠಾಕ್ರೆಯವರ ಮೂವರು ಪುತ್ರರಲ್ಲಿ ಹಿರಿಯರಾಗಿದ್ದರು; ಉಳಿದ ಇಬ್ಬರು ಜೈದೇವ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ. ಸಿನಿಮಾ ನಿರ್ಮಾಪಕರಾಗಿದ್ದ ಬಿಂದುಮಾಧವ ಅವರು ರಾಜಕೀಯದಲ್ಲಿ ಸಕ್ರಿಯರಾಗಿರಲಿಲ್ಲ. ಇದೀಗ ಏಕನಾಥ್ ಶಿಂಧೆ ಅವರ ಜೊತೆ ಉದ್ಧವ್‌ ಠಾಕ್ರೆ ಅಣ್ಣ ಬಿಂದುಮಾಧವ್ ಠಾಕ್ರೆ ಮಗನ ಭೇಟಿಯನ್ನು ಕೇವಲ ಸಾಂಕೇತಿಕ ಕ್ರಮವಾಗಿ ನೋಡಲಾಗುತ್ತಿದೆ.
ಈ ಬೆಳವಣಿಗೆಯು ನಿಜವಾದ ಶಿವಸೇನೆ ಎಂದು ಮಾನ್ಯತೆ ಕೋರಿ ಚುನಾವಣಾ ಆಯೋಗವನ್ನು ಸಂಪರ್ಕಿಸಿದ ಶಿಂಧೆ ಪಾಳೆಯಕ್ಕೆ ಪ್ರಮುಖ ಉತ್ತೇಜನವಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ನಿಹಾರ್ ಠಾಕ್ರೆ ಅವರು ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆಯವರ ಮೊಮ್ಮಗ ಮತ್ತು 1996 ರಲ್ಲಿ ಅಪಘಾತದಲ್ಲಿ ನಿಧನರಾದ ದಿವಂಗತ ಬಿಂದುಮಾಧವ್ ಠಾಕ್ರೆ ಅವರ ಪುತ್ರ.
ನಿಹಾರ್ ಮುಂಬೈನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ ಅವರ ಪುತ್ರಿ ಅಂಕಿತಾ ಅವರನ್ನು ವಿವಾಹವಾಗಿದ್ದಾರೆ.
ಏತನ್ಮಧ್ಯೆ, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಅವರು ಶಿವಸೇನೆಯಲ್ಲಿ ಬಹುಮತವನ್ನು ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲು ದಾಖಲೆ ಸಲ್ಲಿಸುವಂತೆ ಚುನಾವಣಾ ಆಯೋಗವು ಕೇಳಿದೆ. ಎರಡೂ ಗುಂಪುಗಳಿಗೆ ಆಗಸ್ಟ್ 8 ರಂದು ಮಧ್ಯಾಹ್ನ 1 ಗಂಟೆಯೊಳಗೆ ಉತ್ತರವನ್ನು ಸಲ್ಲಿಸಲು ತಿಳಿಸಲಾಗಿದೆ, ನಂತರ ಶಿವಸೇನೆಯ ಎರಡೂ ಬಣಗಳ ನಡುವಿನ ಹಕ್ಕೊತ್ತಾಯಗಳು ಮತ್ತು ವಿವಾದಗಳ ಬಗ್ಗೆ ಚುನಾವಣಾ ಆಯೋಗ ವಿಚಾರಣೆಯನ್ನು ನಡೆಸುತ್ತದೆ.

ಇಂದಿನ ಪ್ರಮುಖ ಸುದ್ದಿ :-   ಲೋಕಸಭಾ ಸದಸ್ಯತ್ವದ ಅನರ್ಹತೆಯಿಂದ ಪಾರಾಗಲು ರಾಹುಲ್ ಗಾಂಧಿಗೆ ಇರುವ ಮುಂದಿನ ದಾರಿ..?

“ನಿಜವಾದ ಶಿವಸೇನೆ”ಯ ಬಗ್ಗೆ ಶಿವಸೇನಯ ಎರಡು ಬಣಗಳಲ್ಲಿ ನಡೆಯುತ್ತಿರುವ ಜಗಳ ಈಗ ಚುನಾವಣಾ ಆಯೋಗದ ಮುಂದಿದೆ. ಉದ್ಧವ್ ಬಣ ಮತ್ತು ಶಿಂಧೆ ಬಣ ಎರಡೂಬಣಗಳು ತಾವೇ ನಿಜವಾದ ಶಿವಸೇನೆ ಎಂದು ಹಕ್ಕು ಸಾಧಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿವೆ.
ಪಕ್ಷದ ಕೆಲವು ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಉದ್ಧವ್ ಠಾಕ್ರೆ ಅವರ ಪಾಳದ ಅನಿಲ್ ದೇಸಾಯಿ ಅವರು ಚುನಾವಣಾ ಆಯೋಗಕ್ಕೆ ಹಲವು ಬಾರಿ ಪತ್ರ ಬರೆದಿದ್ದರು. ಶಿಂಧೆ ಬಣವು ‘ಶಿವಸೇನೆ’ ಅಥವಾ ‘ಬಾಳಾ ಸಾಹೇಬ್’ ಹೆಸರನ್ನು ಬಳಸಿಕೊಂಡು ಯಾವುದೇ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಬಗ್ಗೆಯೂ ಅವರು ಆಕ್ಷೇಪ ಎತ್ತಿದ್ದರು.
ಏತನ್ಮಧ್ಯೆ, ಏಕನಾಥ್ ಶಿಂಧೆ ಶಿಬಿರವು ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968 ಅನ್ನು ಉಲ್ಲೇಖಿಸಿ, ತಮ್ಮ ಗುಂಪನ್ನು ಶಿವಸೇನೆ ಎಂದು ಘೋಷಿಸಲು ಮತ್ತು ಗುಂಪಿಗೆ ಪಕ್ಷದ ಚಿಹ್ನೆ “ಬಿಲ್ಲು ಮತ್ತು ಬಾಣ” ವನ್ನು ನೀಡುವಂತೆ ಚುನಾವಣಾ ಆಯೋಗವನ್ನು ಕೋರಿದೆ. 55 ಶಾಸಕರಲ್ಲಿ 40 ಮಂದಿ, ವಿವಿಧ ಎಂಎಲ್‌ಸಿಗಳು ಮತ್ತು 18 ರಲ್ಲಿ 12 ಸಂಸದರು ತಮ್ಮೊಂದಿಗೆ ಇದ್ದಾರೆ ಎಂದು ಶಿಂಧೆ ಬಣ ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಇಂದಿನ ಪ್ರಮುಖ ಸುದ್ದಿ :-   ಭಾರತದ ಧ್ವನಿಗಾಗಿ ಹೋರಾಡ್ತೇನೆ, ಅದಕ್ಕಾಗಿ ಯಾವುದೇ ಬೆಲೆ ತೆರಲು ಸಿದ್ಧ: ಅನರ್ಹಗೊಂಡ ನಂತರ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement