ಮುಂಬೈನಲ್ಲಿ ಹಣ ಉಳಿಯಲ್ಲ ಎಂಬ ಹೇಳಿಕೆಗೆ ಕ್ಷಮೆಯಾಚಿಸಿದ ಮಹಾರಾಷ್ಟ್ರ ರಾಜ್ಯಪಾಲರು

ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಈ ವಾರದ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಗೆ ಸೋಮವಾರ ಕ್ಷಮೆಯಾಚಿಸಿದ್ದಾರೆ. ಅವರ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು.
ಜುಲೈ 29 ರಂದು ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಂಬೈನ ಅಭಿವೃದ್ಧಿಗೆ ಕೆಲವು ಸಮುದಾಯಗಳ ಕೊಡುಗೆಯನ್ನು ಶ್ಲಾಘಿಸುವ ಭರದಲ್ಲಿ ನಾನು ತಪ್ಪು ಮಾತಾಡಿದೆ. ಮಹಾರಾಷ್ಟ್ರ ಮಾತ್ರವಲ್ಲ, ಇಡೀ ಭಾರತದ ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ವಿಶೇಷವಾಗಿದೆ. ಇಂದು, ವಿಶೇಷವಾಗಿ ಸಂಬಂಧಪಟ್ಟ ರಾಜ್ಯದ ಉದಾರತೆ ಮತ್ತು ಎಲ್ಲರನ್ನೂ ಕರೆದುಕೊಂಡು ಹೋಗುವ ಉಜ್ವಲ ಸಂಪ್ರದಾಯದಿಂದಾಗಿದೇಶವು ಪ್ರಗತಿಯತ್ತ ಸಾಗುತ್ತಿದೆ ಎಂದು ಕೋಶಿಯಾರಿ ಹೇಳಿದ್ದಾರೆ.

ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಹೊರಹಾಕಿದರೆ, ರಾಜ್ಯದಲ್ಲಿ ಯಾವುದೇ ಹಣ ಉಳಿಯುವುದಿಲ್ಲ ಮತ್ತು ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ ಎಂದು ಕೋಶೀಯಾರಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ವಿರೋಧ ಪಕ್ಷದ ನಾಯಕರು ಮಹಾರಾಷ್ಟ್ರ ರಾಜ್ಯಪಾಲರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಮತ್ತು ಅವರಿಂದ ಕ್ಷಮೆಯಾಚನೆಗೆ ಒತ್ತಾಯಿಸಿದ್ದರು.

ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಕೋಶಿಯಾರಿ ಅವರು ‘ಮರಾಠಿಗರನ್ನು ಅವಮಾನಿಸಿದ್ದಾರೆ’ ಮತ್ತು ‘ಎಲ್ಲ ಮಿತಿಯನ್ನು ದಾಟಿದ್ದಾರೆ’ ಎಂದು ಟೀಕಿಸಿದ್ದರು.
“ರಾಜ್ಯಪಾಲರ ಹುದ್ದೆಯಲ್ಲಿರುವವರನ್ನು ಅವಮಾನಿಸಲು ನಾನು ಬಯಸುವುದಿಲ್ಲ. ನಾನು ಕುರ್ಚಿಯನ್ನು ಗೌರವಿಸುತ್ತೇನೆ ಆದರೆ ಭಗತ್ ಸಿಂಗ್ ಕೋಶಿಯಾರಿ ಮರಾಠಿಗರನ್ನು ಅವಮಾನಿಸಿದ್ದಾರೆ ಮತ್ತು ಜನರಲ್ಲಿ ಹೇಳಿಕೆ ಬಗ್ಗೆ ಕೋಪವಿದೆ. ರಾಜ್ಯಪಾಲರು ಎಲ್ಲ ಮಿತಿಗಳನ್ನು ದಾಟುತ್ತಿದ್ದಾರೆ ಎಂದು ಠಾಕ್ರೆ ಹೇಳಿದ್ದರು.
ಇದೇ ವೇಳೆ, ರಾಜ್ಯಪಾಲರ ಹೇಳಿಕೆಗೆ ಕಾಂಗ್ರೆಸ್ ಕೂಡ ಟೀಕಿಸಿದೆ. ” ರಾಜ್ಯಪಾಲರಾಗಿ ಅವರು ಹೇಳುವುದರಲ್ಲಿ ಅಥವಾ ಮಾಡುವಲ್ಲಿ ಬುದ್ಧಿವಂತಿಕೆ ಇಲ್ಲ, ಅವರು ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುವ ಕಾರಣದಿಂದ ಅವರು ಕುರ್ಚಿಯ ಮೇಲೆ ಕುಳಿತಿದ್ದಾರೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement