ಕಾಣೆಯಾಗಿ 20 ವರ್ಷಗಳ ನಂತರ ಅಮ್ಮ-ಮಗಳ ಸೇರಿಸಿದ ಸಾಮಾಜಿಕ ಮಾಧ್ಯಮ…! ಇಷ್ಟೊಂದು ದೀರ್ಘಕಾಲ ನಾಪತ್ತೆಯಾಗಿದ್ದ ಮಹಿಳೆ ಪಾಕಿಸ್ತಾನದಲ್ಲಿ ಪತ್ತೆ

ಮುಂಬೈ: 20 ವರ್ಷಗಳಿಂದ ನಾಪತ್ತೆಯಾಗಿದ್ದ ತನ್ನ ತಾಯಿಯನ್ನು ಪಾಕಿಸ್ತಾನದಲ್ಲಿ ಪತ್ತೆ ಹಚ್ಚಲು ಮುಂಬೈ ಮೂಲದ ಮಹಿಳೆಗೆ ಸಹಾಯ ಮಾಡುವ ಮೂಲಕ ಸಾಮಾಜಿಕ ಮಾಧ್ಯಮವು ಆ ಮಹಿಳೆಗೆ ವರದಾನವಾಗಿದೆ…!
ಮುಂಬೈನ ನಿವಾಸಿ ಯಾಸ್ಮಿನ್ ಶೇಖ್ ಅವರು ತಮ್ಮ ತಾಯಿ ಅಡುಗೆ ಕೆಲಸಕ್ಕಾಗಿ ದುಬೈಗೆ ಹೋಗಿದ್ದಳು. ಆದರೆ ಅವಳು ಮತ್ತೆ ಹಿಂತಿರುಗಿರಲಿಲ್ಲ ಎಂದು ಹೇಳಿದ್ದಾರೆದ್ದಾರೆ.
20 ವರ್ಷಗಳ ನಂತರ ನನ್ನ ತಾಯಿ ಹಮೀದಾ ಬಾನು ಪಾಕಿಸ್ತಾನದಲ್ಲಿರುವ ಬಗ್ಗೆ ಅಲ್ಲಿಯ ಸಾಮಾಜಿಕ ಮಾಧ್ಯಮ ಖಾತೆಯೊಂದರ ಮೂಲಕ ನನಗೆ ತಿಳಿಯಿತು. ಅದು ವೀಡಿಯೊವನ್ನು ಪೋಸ್ಟ್ ಮಾಡಿದೆ ಎಂದು ಯಾಸ್ಮಿನ್ ಶೇಖ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ತಾಯಿ ಕೆಲಸಕ್ಕಾಗಿ ಆಗಾಗ್ಗೆ ಕತಾರ್‌ಗೆ ಹೋಗುತ್ತಿದ್ದಳು. ಆದರೆ ಆ ಸಲ ಅವಳು ಏಜೆಂಟರ ಸಹಾಯದಿಂದ ಹೋಗಿದ್ದಳು ಮತ್ತು ಹೋದವಳು ಮತ್ತೆ ಹಿಂತಿರುಗಿ ಬರಲಿಲ್ಲ. ನಾವು ಅವಳನ್ನು ಹುಡುಕಲು ಪ್ರಯತ್ನಿಸಿದ್ದೇವೆ ಆದರೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲದ ಕಾರಣ, ನಮಗೆ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
ನನ್ನ ತಾಯಿ ಹಮೀದಾ ಬಾನು ದುಬೈಗೆ ಅಡುಗೆ ಕೆಲಸ ಮಾಡಲು ಹೋಗಿದ್ದಳು ಮತ್ತು ಹೋದ ನಂತರ ಅವರು ಮತ್ತೆ ತನ್ನ ಕುಟುಂಬವನ್ನು ಸಂಪರ್ಕಿಸಲಿಲ್ಲ ಎಂದು ಯಾಸಿನ್‌ ಶೇಖ್ ಹೇಳಿದರು.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

ನನ್ನ ತಾಯಿ ಇರುವಿಕೆಯ ಬಗ್ಗೆ ತಿಳಿದುಕೊಳ್ಳಲು ನಾವು ಏಜೆಂಟಳನ್ನು ಭೇಟಿ ಮಾಡಲು ಹೋದಾಗ, ಅವಳು (ಏಜೆಂಟ್) ನನ್ನ ತಾಯಿ ನಮ್ಮನ್ನು ಭೇಟಿಯಾಗಲು ಅಥವಾ ಮಾತನಾಡಲು ಬಯಸುವುದಿಲ್ಲ ಎಂದು ಹೇಳುತ್ತಿದ್ದರು ಮತ್ತು ಅವರು ಚೆನ್ನಾಗಿದ್ದಾರೆ ಎಂದು ನಮಗೆ ಹೇಳುತ್ತಿದ್ದರು ಬಿಟ್ಟರೆ ತಾಯಿ ಸಿಕ್ಕಿರಲಿಲ್ಲ ಎಂದು ಯಾಸ್ಮಿನ್‌ ಹೇಳಿದರು.
“ಆದರೆ ಯೂ ಟ್ಯೂಬ್‌ ವೀಡಿಯೊ ಬಂದು ನಮ್ಮನ್ನು ತಲುಪಿದ ನಂತರವೇ ಅವಳು ಪಾಕಿಸ್ತಾನದಲ್ಲಿರುವ ಬಗ್ಗೆ ನಮಗೆ ತಿಳಿದುಬಂದಿತು, ಇಲ್ಲದಿದ್ದರೆ ಅವಳು ಎಲ್ಲಿದ್ದಾಳೆ ಎಂಬುದು ನಮಗೆ ತಿಳಿಯುತ್ತಿರಲಿಲ್ಲ ಎಂದು ಅವರು ಹೇಳಿದರು.
ವೀಡಿಯೊ ನಮ್ಮನ್ನು ತಲುಪಿದ ನಂತರವೇ ಅವಳು ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಬಗ್ಗೆ ನಮಗೆ ತಿಳಿದುಬಂದಿತು. ಪಾಕಿಸ್ತಾನದಲ್ಲಿ ಮಾಡಿದ YouTube ವೀಡಿಯೊ ಕಾರ್ಯಕರ್ತ ವಲಿಯುಲ್ಲಾ ಮರೂಫ್ ಮೂಲಕ ತನ್ನ ಕುಟುಂಬದೊಂದಿಗೆ ಮತ್ತೆ ಸೇರುವ ಪ್ರಯತ್ನದಲ್ಲಿ ಬಾನೊ ತನ್ನ ಅನುಭವವನ್ನು ಬಹಿರಂಗಪಡಿಸಿದರು. ಮರೂಫ್ ಮುಂಬೈ ಮೂಲದ ಕಾರ್ಯಕರ್ತ ಖಾಫ್ಲಾನ್ ಶೇಖ್ ಅವರೊಂದಿಗೆ ಸಂಪರ್ಕ ಸಾಧಿಸಿದರು.

ಇಪ್ಪತ್ತು ವರ್ಷಗಳ ನಂತರ ಶೇಖ್ ಅಂತಿಮವಾಗಿ ತನ್ನ ತಾಯಿಯೊಂದಿಗೆ ಮಾತನಾಡಿದರು. ಬಾನೊ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮತ್ತು ಅವರ ಮನೆಗೆ ಹಿಂದಿರುಗಿಸಲು ಕುಟುಂಬವು ಪಾಕಿಸ್ತಾನದ ಹೈಕಮಿಷನ್‌ನೊಂದಿಗೆ ಮಾತನಾಡಲು ತಯಾರಿ ನಡೆಸುತ್ತಿದೆ.
ತಾವು ಕಂಡ ವೀಡಿಯೋವನ್ನು ಬಹಿರಂಗಪಡಿಸಿದ ಶ್ರೀಮತಿ ಬಾನು ಅವರ ಸಹೋದರಿ ಶಾಹಿದಾ ಅವರು ತಮ್ಮ ಪತಿ, ಒಡಹುಟ್ಟಿದವರ ಹೆಸರು ಮತ್ತು ನಿವಾಸವನ್ನು ಸರಿಯಾಗಿ ಹೇಳಿದ ನಂತರ ಬಾನು ಅವರು ತನ್ನನ್ನು ಗುರುತಿಸಿದ್ದಾರೆ ಎಂದು ಹೇಳಿದರು.
ಶಾಹಿದಾ ಅವರು ತಮ್ಮ ಸಹೋದರಿಯನ್ನು ಹುಡುಕಲು ಎಲ್ಲವನ್ನೂ ಪ್ರಯತ್ನಿಸಿದರು, ಆದರೆ ಸಾಧ್ಯವಾಗಿರಲಿಲ್ಲ. ಶೇಖ್ ಅವರ ಸಹೋದರಿ ಮತ್ತು ಮಗಳು ಹಲವು ವರ್ಷಗಳ ನಂತರ ಅವರನ್ನು ಭೇಟಿಯಾಗಿರುವುದು ಪವಾಡವೆಂದು ಭಾವಿಸಿದ್ದಾರೆ ಮತ್ತು ಸಾಧ್ಯವಾದಷ್ಟು ಬೇಗ ಅವರನ್ನು ಮರಳಿ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement