ಚಾತುರ್ಮಾಸದಲ್ಲಿ ಶಿಷ್ಯರಿಗೆ ಹಸಿರು ಪ್ರೀತಿ ಬಿತ್ತುತ್ತಿರುವ ಸ್ವರ್ಣವಲ್ಲೀ ಸ್ವಾಮೀಜಿ : ಶಿಷ್ಯರಿಗೆ ವೃಕ್ಷ ಮಂತ್ರಾಕ್ಷತೆ, ಈವರೆಗೆ 75 ಸಹಸ್ರಕ್ಕೂ ಅಧಿಕ ಸಸಿಗಳ ವಿತರಣೆ

ಶಿರಸಿ: ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣೆಗೆ ಕಂಕಣ ಕಟ್ಟಿಕೊಂಡ ಪರಿಸರ ಪ್ರಿಯ ಸ್ವಾಮೀಜಿ ಎಂದೇ ಹೆಸರಾದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಸೋಂದಾ‌ ಸ್ವರ್ಣವಲ್ಲೀ‌ ಮಠಾಧೀಶರು‌ ಶಿಷ್ಯರಲ್ಲಿ ಪರಿಸರ ಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ವನಸ್ಪತಿ ಗಿಡಗಳ‌ ಮಹತ್ವ, ಅವುಗಳ ಸಂರಕ್ಷಣೆಗೆ ಶಿಷ್ಯರು ಹಾಗೂ ಮಠದ ಭಕ್ತರಲ್ಲಿ ಮುತವರ್ಜಿ ವಹಿಸಲು ಸೂಚಿಸುತ್ತಿದ್ದಾರೆ. ಪವಿತ್ರ ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಗಳು ಶಿಷ್ಯರಿಗೆ ಗಿಡಗಳನ್ನು ನೀಡುವ ಮೂಲಕ ಸಸ್ಯ ಪ್ರೀತಿ ನೀಡುತ್ತಿದ್ದಾರೆ. ಹಾಗೂ ತಾವು ಕೈಗೊಂಡ ಪರಿಸರ ‌ಸಂರಕ್ಷಣೆಯ ಯಜ್ಞದ ವಿಸ್ತಾರಗೊಳಿಸುತ್ತಿದ್ದಾರೆ.

advertisement

ಏನಿದು ವೃಕ್ಷ ಮಂತ್ರಾಕ್ಷತೆ…?
ಚಾತುರ್ಮಾಸ್ಯ ಸಂಕಲ್ಪದ ಬಳಿಕ ಶ್ರೀಮಠಕ್ಕೆ ಶಿಷ್ಯರು ಅವರವರ ಸೀಮಾ, ಭಾಗಿಯ ಆಧಾರದಲ್ಲಿ ಬಂದು ಪಾದಪೂಜೆ, ಕುಂಕುಮಾರ್ಚನೆ ಹಾಗೂ ಇತರ ಸೇವೆ ಸಲ್ಲಿಸುತ್ತಾರೆ. ಹೀಗೆ ಸೇವೆ ಸಲ್ಲಿಸಿದ ಶಿಷ್ಯರಿಗೆ‌ ಗುರುಗಳು ಪವಿತ್ರ‌ ಸಂದೇಶ ಕೂಡ ನೀಡುತ್ತಾರೆ. ಸಂದೇಶ ಪಡೆದ ಶಿಷ್ಯರು ಮಂತ್ರಾಕ್ಷತೆ ಪಡೆಯುವಾಗ ಶ್ರೀಗಳು ವೃಕ್ಷ ಮಂತ್ರಾಕ್ಷತೆ ಕೂಡ ನೀಡುತ್ತಾರೆ. ಶಿಷ್ಯರಿಗೆ ಮಂತ್ರಾಕ್ಷತೆಯ ರೂಪದಲ್ಲಿ ನೀಡಲಾದ ಗಿಡವನ್ನು ಬೆಳಸಿ ರಕ್ಷಿಸಲು ಅವರಿಗೆ ಶ್ರೀಗಳು ಸೂಚಿಸುತ್ತಾರೆ.

ಓದಿರಿ :-   1984ರ ಆಪರೇಷನ್ ಮೇಘದೂತದ ವೇಳೆ ಹಿಮಕುಸಿತದಲ್ಲಿ ಹೂತು ಹೋಗಿದ್ದ ಸಿಯಾಚಿನ್ ವೀರನ ಪಾರ್ಥಿವ ಶರೀರ 38 ವರ್ಷಗಳ ನಂತರ ಪತ್ತೆ...!

ಶಿಷ್ಯರಲ್ಲಿ ವನಸ್ಪತಿ ಸಸ್ಯಗಳ ಕುರಿತು ಜಾಗೃತಿ‌ ಮೂಡಿಸಲು ಈ ವೃಕ್ಷ ಮಂತ್ರಾಕ್ಷತೆ ಆರಂಭಿಸಿದ್ದು, ಕೊಟ್ಟ ಸಸಿಯನ್ನು ಶಿಷ್ಯರು ಪ್ರತೀ ವರ್ಷ ನೆಟ್ಟು ಬಳಸುತ್ತಿದ್ದಾರೆ. ಅದೇ‌ ನಮಗೆ ಖುಷಿ.
– ಸ್ವರ್ಣವಲ್ಲೀ ಶ್ರೀ ಗಂಘಾಧರೇಂದ್ರ ಸರಸ್ವತೀ ಸ್ವಾಮೀಜಿ

ಸ್ವರ್ಣವಲ್ಲೀ ಪೀಠವೇ ಪರಿಸರ ಸಂರಕ್ಷಣಾ ಪೀಠ. ಹಿಂದಿನ ಯತಿಗಳಾದ ಶ್ರೀ ಸರ್ವಜ್ಞೇಂದ್ರ‌ ಸರಸ್ವತೀ ಶ್ರೀಗಳೂ ಪರಿಸರ ಕಾಳಜಿ ಹೊಂದಿದ್ದರು. 32 ವರ್ಷಗಳ ಹಿಂದೆ ಪೀಠಾರೋಹಣರಾದ ಈಗಿನ ಶ್ರೀಗಂಗಾಧರೇಂದ್ರ‌ ಸರಸ್ವತೀ ಶ್ರೀಗಳಿಗೆ ‘ಹಸಿರು’ ಎಂದರೆ ತುಂಬಾ ಕಾಳಜಿ. ಹಸಿರು ರಕ್ಷಣೆಯ ಅನೇಕ ಹೋರಾಟಕ್ಕೂ ಅವರು ನೇತೃತ್ವ ನೀಡಿದ್ದಾರೆ.

ಪೀಠವು ಶಿಷ್ಯರಲ್ಲಿ ಇಂತಹ ವೃಕ್ಣ ಮಂತ್ರಾಕ್ಷತೆ ಅಭಿಯಾನ ಮೂಲಕ ಪರಿಸರ ಜಾಗೃತಿ‌ ಮಾಡುತ್ತಿರುವುದು ಶ್ರೀಗಳ ಪರಿಸರ ಕಾಳಜಿಯ ಬಿಂಬವೂ ಹೌದು.
– ನಾರಾಯಣ ಹೆಗಡೆ ಗಡೀಕೈ, ಪ್ರಮುಖ

ಇಲ್ಲಿ ವೃಕ್ಷಾರೋಪಣ, ಸಸ್ಯ ‌ಲೋಕ ಸೃಷ್ಟಿಯ‌ ಜೊತೆಗೆ 2006ರಿಂದ ಶ್ರೀಗಳು ವೃಕ್ಷ ಮಂತ್ರಾಕ್ಷತೆಯನ್ನೂ ನೀಡುತ್ತಿದ್ದಾರೆ. ಪ್ರತೀ ವರ್ಷ ಚಾತುರ್ಮಾಸ್ಯದಲ್ಲಿ ಶಿಷ್ಯರಿಗೆ ಬಿಡದೇ ವನಸ್ಪತಿ ವೃಕ್ಷ ಕೊಟ್ಟು ಆಶೀರ್ವಾದ ಮಾಡುತ್ತಿದ್ದಾರೆ.

ಓದಿರಿ :-   ಹರ್ ಘರ್ ತಿರಂಗಾ: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಜಮ್ಮು-ಕಾಶ್ಮೀರದ ಭಯೋತ್ಪಾದಕರ ಕುಟುಂಬಗಳು...!

25 ಸಾವಿರಕ್ಕೂ ಹೆಚ್ಚು ಸಸ್ಯಗಳ ವಿತರಣೆ..!
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಶ್ರೀಗಳು ಚಾತುರ್ಮಾಸ್ಯ ಅವಧಿಯಲ್ಲಿ ಹಾಗೂ ಪೀಠಾರೋಹಣದ 25, 30 ವರ್ಷದ ಕಾಲಘಟ್ಟದಲ್ಲೂ ವೃಕ್ಷಾರೋಪಣವನ್ನು ಅಭಿಯಾನದ ಮಾದರಿಯಲ್ಲಿ ನಡೆಸಲಾಗಿತ್ತು. ಪ್ರತೀ ವರ್ಷದ ಚಾತುರ್ಮಾಸ್ಯದಲ್ಲೂ ಕನಿಷ್ಠ 5 ಸಾವಿರ ವನಸ್ಪತಿ ಗಿಡಗಳನ್ನು ನೀಡಲಾಗುತ್ತದೆ. ಬಸವನಪಾದ, ಅಶೋಕ, ಹಲಸು, ಮಾವು, ರಕ್ತ ಚಂದನ ಸೇರಿದಂತೆ ಉತ್ತಮ ಜಾತಿಯ, ಉತ್ತಮ ತಳಿಯ ಸಸಿಗಳನ್ನು ಮಠದ ಸಸ್ಯ‌ಲೋಕದಲ್ಲಿ ಬೆಳೆಸಿ, ಕಡಿಮೆ‌ ಬಿದ್ದರೆ ಅರಣ್ಯ ಇಲಾಖೆಯಿಂದಲೂ ಪಡೆದು ಅದನ್ನು ವೃಕ್ಷ ಮಂತ್ರಾಕ್ಷತೆಯಾಗಿ ನೀಡಲಾಗುತ್ತಿದೆ ಎಂದು ಸಸ್ಯ ಲೋಕದ ಉಸ್ತುವಾರಿ ಹೊತ್ತ ಮಹಾಬಲೇಶ್ವರ ಗುಮ್ಮಾನಿ ಹೇಳುತ್ತಾರೆ.

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement