ಪಾದಚಾರಿ ಮಾರ್ಗದಲ್ಲಿ ನಡೆಯುತ್ತಿದ್ದಾಗ ಫುಟ್‌ಪಾತ್‌ ಕುಸಿದು ಕೆಳಗೆ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ | ವೀಕ್ಷಿಸಿ

ನವದೆಹಲಿ: ಫುಟ್‌ಪಾತ್‌ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಮುಂದೆ ಹೆಜ್ಜೆ ಇಟ್ಟ ಕೆಲವೇ ಸೆಕೆಂಡುಗಳಲ್ಲಿ ಆ ಚರಂಡಿ ಕುಸಿದು ಬಿದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಸ್ತೆ ಬದಿಯ ಅಂಗಡಿಯತ್ತ ತಿರುಗುವ ಮೊದಲು ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆತ ಫುಟ್‌ಪಾತ್‌ ಮೇಲೆ ಹೆಜ್ಜೆ ಹಾಕುತ್ತಾನೆ ಮತ್ತು ಅಂಗಡಿಯ ಕಡೆಗೆ ಮುಂದಿನ ಹೆಜ್ಜೆ ಇಡುತ್ತಾನೆ, ಆಗ ಇದ್ದಕ್ಕಿದ್ದಂತೆ ಪಾದಚಾರಿ ಮಾರ್ಗವು ಚರಂಡಿಗೆ ಕುಸಿದು ಬೀಳುತ್ತದೆ. ದಿಗ್ಭ್ರಮೆಗೊಂಡ ವ್ಯಕ್ತಿ ಗರಬಡಿದವನಂತೆ ನಿಲ್ಲುತ್ತಾನೆ.

advertisement

ನಂತರ ಅಂಗಡಿಯಲ್ಲಿದ್ದವರು ಸಹ ಗಾಬರಿಯಿಂದ ಹೊರಬರುತ್ತಾರೆ. ಎಲ್ಲರೂ ಗಾಬರಿಯಿಂದ ನೋಡುತ್ತಾರೆ. ಈ ಮನುಷ್ಯನಿಗೆ ಯೂನಿವರ್ಸ್ ಯಾವ ಸಂದೇಶವನ್ನು ಕಳುಹಿಸುತ್ತಿದೆ ಎಂದು ಲೆಕ್ಕಾಚಾರ ಮಾಡಲು ನಾನು ವಾರಾಂತ್ಯವನ್ನು ಕಳೆಯಲಿದ್ದೇನೆ. ನೀವು ಅವನಾಗಿದ್ದರೆ ನೀವು ಏನು ಯೋಚಿಸುತ್ತೀರಿ” ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಶುಕ್ರವಾರ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

30 ಸೆಕೆಂಡ್‌ಗಳ ವೀಡಿಯೊವನ್ನು ಅಂಗಡಿಯೊಂದರ ಹೊರಗಿನ ಸಿಸಿಟಿವಿಯಿಂದ ಪಡೆಯಲಾಗಿದೆ.
ಮೂಲಸೌಕರ್ಯವನ್ನು ಸುಧಾರಿಸಲು ನಾಗರಿಕರು ಸರ್ಕಾರವನ್ನು ಒತ್ತಾಯಿಸಬೇಕು ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಬಿಹಾರ: ಆಗಸ್ಟ್‌ 24ರಂದು ನಿತೀಶಕುಮಾರ್ ವಿಶ್ವಾಸ ಮತ ಯಾಚನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement