ಇಟ್‌ ಹ್ಯಾಪನ್ಸ್‌ ಓನ್ಲಿ ಇನ್‌ ಇಂಡಿಯಾ..: ಸಚಿವರು, ಅವರ ಪರಿವಾರದ ವಾಹನಗಳು ಹಾದು ಹೋಗುವವರೆಗೆ ಆಂಬ್ಯುಲೆನ್ಸ್ ಅನ್ನೇ ತಡೆದು ನಿಲ್ಲಿಸಿದ ಪೊಲೀಸರು…! ವೀಕ್ಷಿಸಿ

ಚೆನ್ನೈ: ತಮಿಳುನಾಡಿನ ತಂಜಾವೂರಿನಲ್ಲಿ ವಿವಿಐಪಿ ಸಂಸ್ಕೃತಿಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಚಿವರು ಹಾಗೂ ಅವರ ಪರಿವಾರದ ಕಾರುಗಳ ಗುಂಪು ರಸ್ತೆಯ ಮೂಲಕ ಹಾದುಹೋಗುವವರೆಗೆ ಆಂಬ್ಯುಲೆನ್ಸ್ ಅನ್ನು ಪೊಲೀಸರು ತಡೆಹಿಡಿದ ಆಘಾತಕಾರಿ ಹಾಗೂ ವಿಲಕ್ಷಣ ಘಟನೆಯ ಮೊಬೈಲ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.
ಶುಕ್ರವಾರ, ಆಗಸ್ಟ್ 5 ರಂದು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರು ತಂಜಾವೂರು ಜಿಲ್ಲೆಯ ತಿರುವಿಡೈಮರುತ್ತೂರು ತಾಲೂಕಿನ ಕೋಲಿಡಂ ನದಿಯ ದಡದಲ್ಲಿ ಪ್ರವಾಹ ತಡೆ ಕಾಮಗಾರಿ ಪರಿಶೀಲಿಸಲು ಹೋಗುತ್ತಿದ್ದಾಗಿನ ಈ ಘಟನೆ ವೀಡಿಯೊ ವೈರಲ್ ಆಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಅನೈಕರೈ ಸೇತುವೆಯ ಒಂದು ತುದಿಯಲ್ಲಿ ಸಚಿವರ ಬೆಂಗಾವಲು ಪಡೆ ಸೇತುವೆಯ ಮೂಲಕ ಹಾದುಹೋಗುವವರೆಗೆ ಆಂಬ್ಯುಲೆನ್ಸ್‌ ಕಾಯಬೇಕಾಯಿತು. ಸಚಿವರು ಹಾಗೂ ಅವರ ಪರಿವಾರದ ಇಪ್ಪತ್ತೈದು ಕಾರುಗಳು ಹೋಗುವ ವರೆಗೆ ಆಂಬುಲೆನ್ಸ್‌ ಅನ್ನು ತಡೆ ಹಿಡಿಯಲಾಗಿತ್ತು ಎಂದು ಹೇಳಲಾಗಿದೆ.
ಸಚಿವರ ಕಾರು ಮತ್ತು ಅವರ ಬೆಂಗಾವಲು ವಾಹನಗಳು ಅನೈಕರೈ ಸೇತುವೆಯ ಇನ್ನೊಂದು ತುದಿಯಲ್ಲಿ ಬಂದ ತಕ್ಷಣದಿಂದ ಸಚಿವರ ಕಾರು ಮತ್ತು ಅವರ ಜೊತೆಗಿನ ವಾಹನಗಳು ಹಾದುಹೋಗುವವರೆಗೆ ಸೇತುವೆಯ ಮೂಲಕ ಆಂಬುಲೆನ್ಸ್‌ಗೆ ಹಾದುಹೋಗಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಲಾಗಿದೆ.

ಓದಿರಿ :-   ಪ್ರಧಾನಿ ಮೋದಿ ಭೇಟಿ: ವರದಿಗಾರರ "ಕ್ಯಾರೆಕ್ಟರ್ ಸರ್ಟಿಫಿಕೇಟ್" ಕೇಳಿದ ಪೊಲೀಸರು..! ವ್ಯಾಪಕ ಟೀಕೆ ನಂತರ ಆದೇಶ ವಾಪಸ್

ವೀಡಿಯೊದಲ್ಲಿ ಸಚಿವರು ಹಾಗೂ ಅವರ ಪರಿವಾರದ ವಾಹನಗಳು ಹಾದು ಹೋಗುವ ವರೆಗೂ ಅಲ್ಲಿದ್ದ ಪೊಲೀಸ್‌ ಅಧಿಕಾರಿ ತಡೆದಿರುವುದು ಹಾಗೂ ಸಚಿವರು ಹಾದು ಹೋಗುವಾಗ ಅವರಿಗೆ ಸೆಲ್ಯೂಟ್‌ ಹೊಡೆಯುತ್ತಿರುವುದನ್ನು ನೋಡಬಹುದು.
ಪ್ರತಿಪಕ್ಷ ಎಐಎಡಿಎಂಕೆಯ ಪದಾಧಿಕಾರಿಗಳು ಈ ವಿಡಿಯೋವನ್ನು ಉಲ್ಲೇಖಿಸಿ ಆಡಳಿತಾರೂಢ ಡಿಎಂಕೆಯನ್ನು ಟೀಕಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement