ಮೂಡ್ ಆಫ್ ನೇಷನ್ ಸಮೀಕ್ಷೆ: 2024ರಲ್ಲಿಯೂ ಮೋದಿಯೇ ಪ್ರಧಾನಿಯಾಗಬೇಕೆಂದು ಅರ್ಧಕ್ಕಿಂತ ಹೆಚ್ಚು ಜನರ ಒಲವು; ಸಿಎಂಗಳಲ್ಲಿ ನವೀನ್‌ ಪಟ್ನಾಯಕ್‌ ಬೆಸ್ಟ್‌

ನವದೆಹಲಿ: ಹಣದುಬ್ಬರ, ಕೋವಿಡ್ -19 ಸಾಂಕ್ರಾಮಿಕ, ತೈಲ ಬೆಲೆಗಳು ಮತ್ತು ಕಳೆದ ಎರಡು ವರ್ಷಗಳಿಂದ ಎನ್‌ಡಿಎ ನೇತೃತ್ವದ ಸರ್ಕಾರವನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತ್ಯಂತ ಜನಪ್ರಿಯ ಮತ್ತು ಎತ್ತರದ ರಾಜಕೀಯ ನಾಯಕರಾಗಿ ಉಳಿದಿದ್ದಾರೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಆಗಸ್ಟ್ ಆವೃತ್ತಿ ಹೇಳುತ್ತದೆ.
ರಾಷ್ಟ್ರದ ಜನರ ಅಭಿಪ್ರಾಯ ತಿಳಿಯಲು ಸಿ-ವೋಟರ್ ಸಹಯೋಗದೊಂದಿಗೆ ಇಂಡಿಯಾ ಟುಡೇ ಈ ಸಮೀಕ್ಷೆಯನ್ನು ನಡೆಸಿದೆ.
ಎಂಟು ವರ್ಷಗಳ ಅಧಿಕಾರದ ನಂತರವೂ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯು ಅವರ ರಾಜಕೀಯ ಪ್ರತಿಸ್ಪರ್ಧಿಗಳಿಗಿಂತ ಬಹಳ ಮುಂದಿದೆ. ಅವರ ಹತ್ತಿರ ಕೂಡ ಯಾರೂ ಇಲ್ಲ ಎಂದು ಸಮೀಕ್ಷೆ ಹೇಳಿದೆ.
ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಸುಮಾರು 53%ರಷ್ಟು ಜನರು ನರೇಂದ್ರ ಮೋದಿ ಅವರನ್ನು ಮುಂದಿನ ಪ್ರಧಾನಿಯಾಗಿ ನೋಡಲು ಒಲವು ತೋರಿದ್ದಾರೆ. 9% ರಷ್ಟು ಜನರು ಮಾತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬೆಂಬಲಿಸಿದರೆ, ಮತ್ತು 7% ರಷ್ಟು ಜನರು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಉನ್ನತ ಹುದ್ದೆಗೆ ಬೆಂಬಲಿಸಿದ್ದಾರೆ.
ಅದೇ ರೀತಿ ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ 286 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 146 ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಇತರರು 111 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆ ಪ್ರಕಾರ, ಆಗಸ್ಟ್ 1ರ ವರೆಗೆ ಲೋಕಸಭೆ ಚುನಾವಣೆ ನಡೆದಿದ್ದರೆ 543 ಸ್ಥಾನಗಳಲ್ಲಿ ಎನ್‌ಡಿಎ 307 ಸ್ಥಾನ, ಯುಪಿಎ 125 ಸ್ಥಾನಗಳನ್ನು ಹಾಗೂ ಇತರೆ ಪಕ್ಷಗಳು 111 ಸ್ಥಾನಗಳನ್ನು ಗೆಲ್ಲಲಿವೆ. ಆದರೆ ಬಿಹಾರದಲ್ಲಿ ಸರ್ಕಾರ ಬದಲಾದ ನಂತರ ಚುನಾವಣೆ ನಡೆದರೆ ಎನ್‌ಡಿಎ ನೇರವಾಗಿ 21 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಎನ್‌ಡಿಎ 286 ಸ್ಥಾನಗಳನ್ನು ಪಡೆಯಲಿದ್ದು, ಯುಪಿಎ 146 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಮುಖ ಸುದ್ದಿ :-   ಪ್ರತಿವರ್ಷ ಜೂನ್ 25ರಂದು ʼಸಂವಿಧಾನ ಹತ್ಯಾ ದಿವಸʼ ಆಚರಣೆ; ಅಮಿತ್ ಶಾ ಘೋಷಣೆ

ವಿರೋಧ ಪಕ್ಷವಾಗಿ ಜನರು ಕಾಂಗ್ರೆಸ್ ಬಗ್ಗೆ ಏನು ಹೇಳುತ್ತಾರೆ ?
ಪ್ರತಿಕ್ರಿಯೆ ನೀಡಿದ ಶೇಕಡಾ 40 ರಷ್ಟು ಜನರು ಕಾಂಗ್ರೆಸ್‌ನ ಪ್ರತಿಪಕ್ಷದ ಪಾತ್ರವನ್ನು ‘ಒಳ್ಳೆಯದು’ ಎಂದು ರೇಟ್ ಮಾಡಿದರೆ, 34%ರಷ್ಟು ಜನರು ಅದನ್ನು ‘ಕಳಪೆ’ ಎಂದು ರೇಟ್ ಮಾಡಿದ್ದಾರೆ.
23% ಜನರು ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸಲು ರಾಹುಲ್ ಗಾಂಧಿ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಆದರೆ 16%ರಷ್ಟು ಜನರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಬೆಂಬಲಿಸಿದ್ದಾರೆ. ಸಮೀಕ್ಷೆಗೆ ಒಳಗಾದವರಲ್ಲಿ ಶೇಕಡಾ 14%ರಷ್ಟು ಜನರು ಸಚಿನ್ ಪೈಲಟ್ ಅವರಿಂದ ಕಾಂಗ್ರೆಸ್‌ ಪುನರುಜ್ಜೀವನಗೊಳಿಸಲು ಸಾಧ್ಯವಾಗುತ್ತದೆ ಎಂದು ನಂಬಿದರೆ, ಕೇವಲ 9%ರಷ್ಟು ಜನರು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುನರುಜ್ಜೀವನಗೊಳಿಸಬಹುದು ಎಂದು ಹೇಳಿದ್ದಾರೆ.

ನವೀನ್‌ ಪಟ್ನಾಯಕ್‌ ಜನಪ್ರಿಯ ಮುಖ್ಯಮಂತ್ರಿ…
ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಎಲ್ಲರಿಗಿಂತ ಮುಂದಿದ್ದಾರೆ ಎಂದು ಇಂಡಿಯಾ ಟುಡೇ ಮೂಡ್ ಆಫ್ ನ್ಯಾಶನಲ್ ಪೋಲ್ ಸಮೀಕ್ಷೆ ಹೇಳಿದೆ. ಸಮೀಕ್ಷೆ ಪ್ರಕಾರ, ನವೀನ್‌ ಪಟ್ನಾಯಕ್ 78% ಜನಪ್ರಿಯತೆಯೊಂದಿಗೆ ಒಡಿಶಾ ರಾಜ್ಯದಲ್ಲಿ ನಂ 1 ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮುಂದುವರಿದಿದ್ದಾರೆ.
ಸಮೀಕ್ಷೆಯ ಪ್ರಕಾರ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 63% ಜನಪ್ರಿಯತೆಯೊಂದಿಗೆ ನಂತರದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ತಮಿಳುನಾಡಿನ ಎಂಕೆ ಸ್ಟಾಲಿನ್ 61% ಜನಪ್ರಿಯತೆಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಇಂಡಿಯಾ ಟುಡೇ ಮತ್ತು ಸಿ-ವೋಟರ್ ಫೆಬ್ರವರಿ 2022 ಮತ್ತು ಆಗಸ್ಟ್ 2022 ರ ನಡುವೆ ಸಮೀಕ್ಷೆಯನ್ನು ನಡೆಸಿತು. ರಾಷ್ಟ್ರದ ಮನಸ್ಥಿತಿಯನ್ನು ಅಳೆಯಲು ಒಟ್ಟು 1,22,016 ಪ್ರತಿಸ್ಪಂದಕರನ್ನು ಸಂದರ್ಶಿಸಲಾಗಿದೆ ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ 11ರಲ್ಲಿ 9 ಸ್ಥಾನ ಗೆದ್ದು ಬೀಗಿದ ಬಿಜೆಪಿ-ಮಿತ್ರಪಕ್ಷಗಳು

 

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement