ಭಾರತೀಯ ಮೂಲದ ಖ್ಯಾತ ಲೇಖಕ ಸಲ್ಮಾನ್ ರಶ್ದಿಗೆ 10-15 ಬಾರಿ ಇರಿದ ದಾಳಿಕೋರ: ಪ್ರತ್ಯಕ್ಷದರ್ಶಿ

ನ್ಯೂಯಾರ್ಕ್‌ (ಅಮೆರಿಕ): ಶುಕ್ರವಾರ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಸಂಜಾತ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಹಲವು ಬಾರಿ ಇರಿದಿದ್ದಾರೆ. ರಶ್ದಿ ಅವರ ಕುತ್ತಿಗೆಗೆ ಇರಿತದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಯಾರ್ಕಿನ ಚೌಟೌಕ್ವಾ ಇನ್‌ಸ್ಟಿಟ್ಯೂಷನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಲ್ಮಾನ್ ರಶ್ದಿಯ ಮೇಲೆ ದಾಳಿ ನಡೆದ ನಂತರ ಜನರು ಅವರ ಸಹಾಯಕ್ಕೆ ಧಾವಿಸುತ್ತಿರುವುದನ್ನು ಘಟನೆಯ ವೀಡಿಯೊ ತುಣುಕಿನಲ್ಲಿ ತೋರಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ಪಶ್ಚಿಮ ನ್ಯೂಯಾರ್ಕ್ ರಾಜ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಓಡಿ ಸಲ್ಮಾನ್ ರಶ್ದಿಯ ಮೇಲೆ ದಾಳಿ ಮಾಡಿದ್ದಾನೆ.
ಶಂಕಿತ ಪುರುಷನೊಬ್ಬ ಬೆಳಿಗ್ಗೆ 11 ಗಂಟೆ ಸುಮಾರಿಗೆ ಇಂದು, ಶನಿವಾರ ಚೌಟೌಕ್ವಾ ಇನ್‌ಸ್ಟಿಟ್ಯೂಷನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಓಡಿ ಸಲ್ಮಾನ್ ರಶ್ದಿ ಮತ್ತು ಸಂದರ್ಶಕರ ಮೇಲೆ ಹಲ್ಲೆ ನಡೆಸಿದ್ದಾನೆ. ರಶ್ದಿ ಅವರ ಕುತ್ತಿಗೆಗೆ ಇರಿತದ ಗಾಯವಾಗಿತ್ತು ಮತ್ತು ಅವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು” ಎಂದು ದಾಳಿಯ ನಂತರ ನ್ಯೂಯಾರ್ಕ್ ಸ್ಟೇಟ್ ಪೊಲೀಸರು ತಿಳಿಸಿದ್ದಾರೆ.

ಅಸೋಸಿಯೇಟೆಡ್ ಪ್ರೆಸ್‌ನ ವರದಿಯ ಪ್ರಕಾರ, ಚೌಟಕ್ವಾ ಇನ್‌ಸ್ಟಿಟ್ಯೂಷನ್‌ನಲ್ಲಿ ವೇದಿಕೆಯ ಮೇಲೆ ವೇದಿಕೆಯಲ್ಲಿ ಸಲ್ಮಾನ್‌ ರಶ್ದಿ ಅವರನ್ನು ಪರಿಚಯಸುತ್ತಿದ್ದಾಗ ವ್ಯಕ್ತಿಯೊಬ್ಬ ರಶ್ದಿ ವೇದಿಕೆಗೆ ನುಗ್ಗಿ 10 ರಿಂದ 15 ಬಾರಿ ಇರಿದಿದ್ದಾನೆ. ನಂತರ 75 ವರ್ಷ ವಯಸ್ಸಿನ ಲೇಖಕ ರಶ್ದಿ ಕೆಳಕ್ಕೆ ಬಿದ್ದರು ಎಂದು ಪ್ರತಯ್ಕಷದರ್ಶಿಗಳು ತಿಳಿಸಿದ್ದಾರೆ.
ಅವರನ್ನು ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಶ್ದಿ ಅವರ ಕುತ್ತಿಗೆ ಹಾಗೂ ತಲೆ ಬಳಿ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.
ನ್ಯೂಯಾರ್ಕ್ ರಾಜ್ಯದ ಗವರ್ನರ್ ಕ್ಯಾಥಿ ಹೊಚುಲ್ ಅವರು, “ರಶ್ದಿ ಜೀವಂತವಾಗಿದ್ದಾರೆ ಮತ್ತು ಅವರನ್ನು ಸುರಕ್ಷಿತವಾಗಿ ಸಾಗಿಸಲಾಗಿದೆ, ಏರ್ಲಿಫ್ಟ್ ಮಾಡಲಾಗಿದೆ . ವೆಂಟ್ ಮಾಡರೇಟರ್ ಮೇಲೆ ದಾಳಿ ಮಾಡಲಾಗಿದೆ; ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಅವರಿಗೆ ಅಗತ್ಯವಿರುವ ಆರೈಕೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.ದಾಳಿ ನಡೆದ ಚೌಟಕ್ವಾ ಸಂಸ್ಥೆಯು ನ್ಯೂಯಾರ್ಕ್‌ನ ಗ್ರಾಮೀಣ ಮೂಲೆಯಲ್ಲಿ ಬಫಲೋದಿಂದ ನೈಋತ್ಯಕ್ಕೆ 55 ಮೈಲುಗಳಷ್ಟು ದೂರದಲ್ಲಿದೆ.

ಸಲ್ಮಾನ್ ರಶ್ದಿಯವರು 1981 ರಲ್ಲಿ ಅವರ ಎರಡನೇ ಕಾದಂಬರಿ ಮಿಡ್‌ನೈಟ್ಸ್ ಚಿಲ್ಡ್ರನ್‌ ಮೂಲಕ ಗಮನ ಸೆಳೆದರು. ಅವರು ಮಿಡ್‌ನೈಟ್ಸ್ ಚಿಲ್ಡ್ರನ್‌ನಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಚಿತ್ರಣಕ್ಕಾಗಿ ಅಂತಾರಾಷ್ಟ್ರೀಯ ಪ್ರಶಂಸೆ ಬಂತು ಮತ್ತು ನಂತರ ಅವರು ಇದಕ್ಕೆ ಬ್ರಿಟನ್‌ನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ನೀಡಲಾಯಿತು.
ಆದರೆ ಬೂಕರ್ ಪ್ರಶಸ್ತಿ ವಿಜೇತರು ಶೀಘ್ರದಲ್ಲೇ ತಮ್ಮ ಪುಸ್ತಕ ದಿ ಸೈಟಾನಿಕ್ ವರ್ಸಸ್‌ ಬರೆದ ನಂತರ ಜೀವ ಬೆದರಿಕೆಗಳನ್ನು ಎದರಿಸಬೇಕಾಯಿತು. ಅನೇಕ ಮುಸ್ಲಿಮರು ಧರ್ಮನಿಂದೆಯೆಂದು ಪರಿಗಣಿಸುವ ಪುಸ್ತಕವನ್ನು ಇರಾನ್‌ನಲ್ಲಿ ನಿಷೇಧಿಸಲಾಯಿತು ಹಾಗೂ ಅಲ್ಲಿನ ಅಯತೊಲ್ಲಾ ರುಹೊಲ್ಲಾ ಖೊಮೇನಿ 1989 ರ ಫತ್ವಾ ಹೊರಡಿಸಿ ರಶ್ದಿಯ ಸಾವಿಗೆ ಕರೆ ನೀಡಿದರು. ರಶ್ದಿಯನ್ನು ಕೊಂದ ಯಾರಿಗಾದರೂ $3 ಮಿಲಿಯನ್‌ಗಿಂತಲೂ ಹೆಚ್ಚಿನ ಬಹುಮಾನವನ್ನು ನೀಡಲಾಗುತ್ತದೆ ಎಂದು ಪ್ರಕಟಿಸಿದರು.
ಕೊಲೆ ಬೆದರಿಕೆಗಳು ಮತ್ತು ಫತ್ವಾ ಸಲ್ಮಾನ್ ರಶ್ದಿಯನ್ನು ತಲೆಮರೆಸಿಕೊಳ್ಳುವಂತೆ ಮಾಡಿತು. ಅವರು ಸುಮಾರು ಒಂದು ದಶಕವನ್ನು ಗೌಪ್ಯವಾಗಿ ಕಳೆದರು, ಪದೇ ಪದೇ ಮನೆಗಳನ್ನು ಬದಲಾಯಿಸಿದರು ಮತ್ತು ಅವರು ಎಲ್ಲಿ ವಾಸಿಸುತ್ತಿದ್ದಾರೆಂದು ಅವರ ಮಕ್ಕಳಿಗೆ ಸಹ ಹೇಳಲು ಸಾಧ್ಯವಾಗಲಿಲ್ಲ. ಖೊಮೇಣಿ ಮರಣಾನಂತರ 1998 ರಲ್ಲಿ ಇರಾನ್ ಹತ್ಯೆಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ ನಂತರ 1990 ರ ದಶಕದ ಉತ್ತರಾರ್ಧದಲ್ಲಿ ಸಲ್ಮಾನ್ ರಶ್ದಿ ಈ ಬಲವಂತದ ಏಕಾಂತದಿಂದ ಹೊರಬರಲು ಪ್ರಾರಂಭಿಸಿದರು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement