ಅಟಲ್​ ಪಿಂಚಣಿ ಯೋಜನೆಯಲ್ಲಿ ಬದಲಾವಣೆ: ಅಕ್ಟೋಬರ್‌ 1ರಿಂದ ಇವರಿಗೆ ಈ ಯೋಜನೆಗೆ ಸೇರಲು ಸಾಧ್ಯವಾಗುವುದಿಲ್ಲ

ನವದೆಹಲಿ: ಯೋಜನೆಯ ಪ್ರಯೋಜನಗಳು ಬಡವರು ಮತ್ತು ಹಿಂದುಳಿದವರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಆದಾಯ ತೆರಿಗೆದಾರರು ಈ ವರ್ಷದ ಅಕ್ಟೋಬರ್ 1ರಿಂದ ಅಟಲ್ ಪಿಂಚಣಿ ಯೋಜನೆ (ಎಪಿವೈ) ಪಡೆದುಕೊಳ್ಳುವುದನ್ನು ಕೇಂದ್ರ ಸರ್ಕಾರವು ನಿರ್ಬಂಧಿಸುತ್ತದೆ.
ಆದಾಯ ತೆರಿಗೆ ಪಾವತಿಸುವ ವ್ಯಕ್ತಿಯು ಅಕ್ಟೋಬರ್ 1, 2022 ರಿಂದ ಅಟಲ್ ಪಿಂಚಣಿ ಯೋಜನೆ (ಎಪಿವೈ) ಖಾತೆಯನ್ನು ತೆರೆಯಲು ಅರ್ಹರಾಗಿರುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಟಲ್ ಪಿಂಚಣಿ ಯೋಜನೆಯು 2015 ರಲ್ಲಿ ಪ್ರಾರಂಭವಾಯಿತು, ಇದು 18 ರಿಂದ 40 ವರ್ಷ ವಯಸ್ಸಿನ ನಾಗರಿಕರಿಗೆ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಚಂದಾದಾರರು, ಅವರ ಕೊಡುಗೆಗಳ ಆಧಾರದ ಮೇಲೆ, 60 ವರ್ಷವಾದಾಗ ಪ್ರತಿ ತಿಂಗಳಿಗೆ 1,000 ರೂ.ಗಳಿಂದ 5,000 ರೂ.ಗಳ ವರೆಗೆ ಖಾತರಿಪಡಿಸುವ ಪಿಂಚಣಿ ಪಡೆಯುತ್ತಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಸರ್ಕಾರಿ ಪಿಂಚಣಿ ಪಡೆಯಲು ಸಾಧ್ಯವಾಗದ ಜನರಿಗಾಗಿ ಅದರಲ್ಲಿಯೂ ವಿಶೇಷವಾಗಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈವರೆಗೆ 4 ಕೋಟಿಗೂ ಹೆಚ್ಚು ಜನರು ಈ ಯೋಜನೆಗೆ ಸೇರಿದ್ದಾರೆ. 99 ಲಕ್ಷ ಜನರು 2022 ರ ಆರ್ಥಿಕ ವರ್ಷದಲ್ಲಿಯೇ ಸೇರಿರುವುದು ವಿಶೇಷ. 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಇದನ್ನು ಪಡೆಯಬಹುದು ಮತ್ತು 60 ವರ್ಷಗಳ ನಂತರದಿಂದ ಪಿಂಚಣಿ ಪ್ರಾರಂಭವಾಗುತ್ತದೆ.
APY ಅನ್ನು ‘ಸರ್ಕಾರಿ ಖಾತರಿ ಯೋಜನೆ’ ಎಂದು ಪರಿಗಣಿಸಲಾಗಿದೆ, ಜೊತೆಗೆ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಒದಗಿಸುತ್ತದೆ. ಯೋಜನೆಗೆ ಕೊಡುಗೆ ನೀಡುವವರು ಸೆಕ್ಷನ್ 80 CCC ಮತ್ತು 80CCD ಅಡಿಯಲ್ಲಿ ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

ಇಂದಿನ ಪ್ರಮುಖ ಸುದ್ದಿ :-   ಬ್ಯಾಂಕಿನಿಂದ 12 ಕೋಟಿ ದೋಚಿದ್ದ ವ್ಯಕ್ತಿ ಹೊಸ ರೂಪದಲ್ಲಿ ಓಡಾಟ, ಮೂರು ತಿಂಗಳ ನಂತರ ಸಿಕ್ಕಿಬಿದ್ದ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (PFRDA) ಪ್ರಕಾರ, 2022 ರ ಆರ್ಥಿಕ ವರ್ಷದ ಕೊನೆಯಲ್ಲಿ ಪಿಂಚಣಿ ಯೋಜನೆಯು 4.01 ಕೋಟಿ ಚಂದಾದಾರರನ್ನು ಹೊಂದಿದೆ. ಅಂಕಿಅಂಶಗಳ ಪ್ರಕಾರ, ಅವರಲ್ಲಿ 44 ಪ್ರತಿಶತ ಮಹಿಳೆಯರಾಗಿದ್ದಾರೆ, ಅಲ್ಲದೆ ಸುಮಾರು 45 ಪ್ರತಿಶತದಷ್ಟು ಅಟಲ್ ಪಿಂಚಣಿ ಯೋಜನೆ ಚಂದಾದಾರರು 18-25 ವಯಸ್ಸಿನವರಾಗಿದ್ದಾರೆ.
ಆದರೆ ಸರ್ಕಾರ ಈಗ ಬದಲಾವಣೆ ಮಾಡಿದ್ದು, ತೆರಿಗೆದಾರರಾಗಿರುವ ಹೂಡಿಕೆದಾರರು ಅಕ್ಟೋಬರ್ 1, 2022 ರಂದು ಅಥವಾ ನಂತರ ಅಟಲ್‌ ಪಿಂಚಣಿ ಯೋಜನೆಗೆ ಸೇರಿದರೆ, ಅವನ ಅಥವಾ ಅವಳ ಅಟಲ್‌ ಪಿಂಚಣಿ ಯೋಜನೆ ಖಾತೆ ಕ್ಲೋಸ್‌ ಆಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
“ಅಕ್ಟೋಬರ್ 1, 2022 ರಂದು ಅಥವಾ ನಂತರ ಸೇರ್ಪಡೆಗೊಂಡ ಚಂದಾದಾರರು, ಅರ್ಜಿ ಸಲ್ಲಿಸಿದ ದಿನಾಂಕದಂದು ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಅಟಲ್‌ ಪಿಂಚಣಿ ಯೋಜನೆ ಖಾತೆಯನ್ನು ಮುಚ್ಚಲಾಗುತ್ತದೆ ಮತ್ತು ಇಲ್ಲಿಯವರೆಗೆ ಸಂಗ್ರಹವಾದ ಪಿಂಚಣಿ ಸಂಪತ್ತನ್ನು ಚಂದಾದಾರರಿಗೆ ನೀಡಲಾಗುತ್ತದೆ” ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಚಂದಾದಾರರ ಮರಣದ ನಂತರ ಅದೇ ಪಿಂಚಣಿಯನ್ನು ಚಂದಾದಾರರ ಸಂಗಾತಿಗೆ ಪಾವತಿಸಲಾಗುವುದು ಮತ್ತು ಚಂದಾದಾರರು ಮತ್ತು ಸಂಗಾತಿಯ ಮರಣದ ನಂತರ, ಚಂದಾದಾರರ 60 ವರ್ಷ ವಯಸ್ಸಿನವರೆಗೆ ಸಂಗ್ರಹಿಸಿದ ಪಿಂಚಣಿ ಸಂಪತ್ತನ್ನು ನಾಮಿನಿಗೆ ನೀಡಲಾಗುತ್ತದೆ.

ಇಂದಿನ ಪ್ರಮುಖ ಸುದ್ದಿ :-   ನಟ ಧನುಷ್-ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ರದ್ದುಗೊಳಿಸಲು ನಿರ್ಧಾರ..?

ಯೋಜನೆಗೆ ಕೊಡುಗೆಯನ್ನು ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ ಆಧಾರದ ಮೇಲೆ ಮಾಡಬಹುದು. ವ್ಯಕ್ತಿಯ ಮರಣದ ಸಂದರ್ಭದಲ್ಲಿ, ಸಂಗಾತಿಯು ಪಿಂಚಣಿ ಪಡೆಯುತ್ತಾನೆ; ಇಬ್ಬರ ಮರಣದ ನಂತರ, ಪಿಂಚಣಿ ಕಾರ್ಪಸ್ ಅನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ.
ಸ್ಕೀಮ್‌ಗೆ ದಾಖಲಾದ ಸಮಯದಲ್ಲಿ ಒಬ್ಬರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಯೋಜನೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 40 ವರ್ಷಗಳು.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ, 18 ವರ್ಷ ವಯಸ್ಸಿನವರು ಯೋಜನೆಗೆ ಸೇರ್ಪಡೆಗೊಂಡರೆ ಮತ್ತು ಮುಂದಿನ 42 ವರ್ಷಗಳವರೆಗೆ (60 ವರ್ಷ ತುಂಬುವವರೆಗೆ) ಪ್ರತಿ ತಿಂಗಳು 210 ರೂ.ಗಳನ್ನು ಠೇವಣಿ ಮಾಡಲು ಪ್ರಾರಂಭಿಸಿದರೆ, ಅವರು 60 ವರ್ಷಗಳ ನಂತರ 5,000 (ಸ್ಥಿರ) ಮಾಸಿಕ ಪಿಂಚಣಿಗೆ ಅರ್ಹರಾಗಿರುತ್ತಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement