ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಲೇಖಕ ಸಲ್ಮಾನ್‌ ರಶ್ದಿಗೆ ವೆಂಟಿಲೇಟರ್‌ ತೆಗೆದಿದ್ದಾರೆ, ಈಗ ಮಾತನಾಡುತ್ತಿದ್ದಾರೆ

ನ್ಯೂಯಾರ್ಕ್‌: ಲೇಖಕ ಸಲ್ಮಾನ್ ರಶ್ದಿ ಅವರಿಗೆ ವೆಂಟಿಲೇಟರ್‌ ತೆಗೆಯಲಾಗಿದೆ ಮತ್ತು ಈಗ ಮಾತನಾಡಲು ಸಮರ್ಥರಾಗಿದ್ದಾರೆ.
75 ವರ್ಷದ ರಶ್ದಿ ಅವರಿಗೆ ಇರಿತದ ನಂತರ ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಸಹ ಲೇಖಕ ಆತಿಶ್ ತಸೀರ್ ಅವರು “ಭಾನುವಾರ ಅವರಿಗೆ ವೆಂಟಿಲೇಟರ್‌ ತೆಗೆಯಲಾಗಿದೆ ಮತ್ತು ಈಗ ಅವರು ಮಾತನಾಡುತ್ತಿದ್ದಾರೆ (ತಮಾಷೆ ಮಾಡುತ್ತಿದ್ದಾರೆ) ಎಂದು ಟ್ವೀಟ್ ಮಾಡಿದ್ದಾರೆ.
ರಶ್ದಿ ಅವರ ಏಜೆಂಟ್ ಆಂಡ್ರ್ಯೂ ವೈಲಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಅವರಿಗೆ ಈಗ ವೆಂಟಿಲೇಟರ್‌ ತೆಗೆದಿದ್ದಾರೆ. ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ವೈಲಿ ಹೇಳಿದರು. “ಇದು ದೀರ್ಘವಾಗಿರುತ್ತದೆ; ಗಾಯಗಳು ತೀವ್ರವಾಗಿವೆ, ಆದರೆ ಅವರ ಸ್ಥಿತಿಯು ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ.
ಚೌಟೌಕ್ವಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ತನ್ನ ಮೇಲೆ ದಾಳಿ ಮಾಡಿದ ಆರೋಪಿ ವ್ಯಕ್ತಿ “ಪೂರ್ವಯೋಜಿತ” ಅಪರಾಧ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ, ಆದರೆ ಈ ಮೊದಲು ಈತನ ಮೇಲೆ ಆಕ್ರಮಣದ ಆರೋಪಗಳಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ನ್ಯೂಯಾರ್ಕ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಶಂಕಿತ ಹದಿ ಮಾತರ್ ಪರ ವಕೀಲರು ಆತನ ಪರವಾಗಿ ಮನವಿ ಸಲ್ಲಿಸಿದರು.
24ರ ಹರೆಯದ ಆರೋಪಿ ರಶ್ದಿಯವರಿಗೆ ಹಾನಿ ಮಾಡಲು ಕಾರ್ಯಕ್ರಮಕ್ಕೆ ಮುಂಗಡ ಪಾಸ್ ಪಡೆದು ಒಂದು ದಿನ ಮುಂಚಿತವಾಗಿ ಆಗಮಿಸಿದರು ಎಂದು ಜಿಲ್ಲಾ ಅಟಾರ್ನಿ ಜೇಸನ್ ಸ್ಮಿತ್ ಅವರು ಹೇಳಿದ ನಂತರ ನ್ಯಾಯಾಧೀಶರು ಆತನನ್ನು ಜಾಮೀನು ರಹಿತವಾಗಿ ಬಂಧಿಸಲು ಆದೇಶಿಸಿದರು. ಆತ ನಕಲಿ ಗುರುತಿನ ಚೀಟಿ ಹೊಂದಿದ್ದಾನೆ ಎಂದು ಹೇಳಲಾಗಿದೆ.
ಇದು ರಶ್ದಿಯವರ ಮೇಲೆ ಉದ್ದೇಶಿತ, ಅಪ್ರಚೋದಿತ, ಪೂರ್ವಯೋಜಿತ ದಾಳಿಯಾಗಿದೆ” ಎಂದು ಸ್ಮಿತ್ ಹೇಳಿದರು.
ರಶ್ದಿ – 30 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಪುಸ್ತಕ ದಿ ಸೈಟಾನಿಕ್ ವರ್ಸಸ್‌ಗಾಗಿ ಕೊಲೆ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಹಾಗೂ ಆರೋಪಿ 10 ಬಾರಿ ಇರಿದಿದ್ದಾನೆ ಎಂದು ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಟರ್‌ಗಳು ಹೇಳಿದರು.
ರಶ್ದಿ ಅವರ ಯಕೃತ್ತಿಗೆ ಹಾನಿಯಾಗಿದೆ ಮತ್ತು ತೋಳು ಹಾಗೂ ಕಣ್ಣಿನಲ್ಲಿ ನರಗಳು ತುಂಡಾಗಿವೆ ಗಾಯಗೊಂಡ ಅವರು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆ ಇತ್ತು ಎಂದು ವೈಲಿ ಹೇಳಿದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ನೂತನ ಬಾಹ್ಯಾಕಾಶ ತಂತ್ರಜ್ಞಾನದಿಂದ ಕೇವಲ 5 ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಬಹುದು ಎಂದ ನಾಸಾ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement