ಸ್ವಾತಂತ್ರ್ಯೋತ್ಸವ- 2022: ತ್ರಿವರ್ಣ ಧ್ವಜಕ್ಕೆ ಆರತಿ ಮಾಡುವ ಮಹಿಳೆಯ ವೀಡಿಯೊ ವೈರಲ್

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಪ್ರವೇಶದ್ವಾರದಲ್ಲಿ ನಿಲ್ಲಿಸಿದ್ದ ರಾಷ್ಟ್ರ ಧ್ವಜಕ್ಕೆ ಆರತಿ (ಪ್ರಾರ್ಥನೆ) ಮಾಡಿ ಪ್ರಾರ್ಥಿಸಿ ಗೌರವ” ಸಲ್ಲಿಸಿದ ವೀಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಅವನೀಶ್ ಶರಣ್ ಅವರು ಈ ವೀಡಿಯೊ ಟ್ವಿಟ್ಟರ್‌ನಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು ಹರ್ ಘರ್ ತಿರಂಗ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸಹ ಬಳಸಿದ್ದಾರೆ.

ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗಾ’ ಅಭಿಯಾನದ ಅಡಿಯಲ್ಲಿ ಆಗಸ್ಟ್ 13 ರಿಂದ 15 ರವರೆಗೆ ದೇಶಾದ್ಯಂತ 20 ಕೋಟಿಗೂ ಹೆಚ್ಚು ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.
ಕಾಮೆಂಟ್‌ಗಳ ವಿಭಾಗದಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ರಾಷ್ಟ್ರಧ್ವಜವನ್ನು ಪೂಜಿಸಿದ್ದಕ್ಕಾಗಿ ಮಹಿಳೆಯನ್ನು ಹೊಗಳಿದ್ದಾರೆ ಮತ್ತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು “ಹರ್ ಘರ್ ತಿರಂಗ” ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರಕ್ಕೆ ಕರೆ ನೀಡಿದ ನಂತರ, ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು ಮತ್ತು ಪ್ರತಿ ಮನೆಯ ಮೇಲ್ಛಾವಣಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.

ಪ್ರಮುಖ ಸುದ್ದಿ :-   ಯುದ್ಧ ನಿಲ್ಲಿಸುವಂತೆ ಅಮೆರಿಕಕ್ಕೆ ಪಾಕಿಸ್ತಾನ ಗೋಗರೆದಿದ್ದೇಕೆ..? ಭಾರತದ ಬ್ರಹ್ಮೋಸ್‌ ಶಕ್ತಿಗೆ ಪಾಕ್‌ ಪರಮಾಣು ಶಸ್ತ್ರಾಗಾರದ ಬಳಿಯ ಮಿಲಿಟರಿ ನೆಲೆಗಳು ಧ್ವಂಸ ; ಪಾಕ್‌ ಕಂಗಾಲು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement