ಹೊನ್ನಾವರ: ಸೊಳ್ಳೆ ನಾಶಕ ಲಿಕ್ವಿಡ್‌ ಕುಡಿದು ಎರಡು ವರ್ಷದ ಮಗು ಸಾವು

ಹೊನ್ನಾವರ: ಸೊಳ್ಳೆ ನಾಶಕ ಲಿಕ್ವಿಡ್‌ ಕುಡಿದು ಎರಡು ವರ್ಷದ ಮಗು ಸಾವು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಕಾವೂರು ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಆರವ್ ಮಹೇಶ ನಾಯ್ಕ(2) ಮೃತ ದುರ್ದೈವಿ ಮಗು ಎಂದು ಗುರುತಿಸಲಾಗಿದೆ. ಸೊಳ್ಳೆ ನಿವಾರಣೆಗೆಂದು ತಂದಿದ್ದ ಸೊಳ್ಳೆ ನಾಶಕ ಲಿಕ್ವಿಡ್‌ ಅನ್ನು ಮನೆಯಲ್ಲಿ ನೆಲಕ್ಕೆ ಇಟ್ಟಿದ್ದರು. ಆಟವಾಡುತ್ತಿದ್ದ ಮಗುವಿನ ಕೈಗೆ ಇದು ಸಿಕ್ಕಿದೆ. ಏನೂ ಗೊತ್ತಿಲ್ಲದ ಮಗು ಸೊಳ್ಳೆ ನಿವಾರಕ ಲಿಕ್ವಿಡ್ ಅನ್ನು ಕುಡಿದ ಅಸ್ವಸ್ಥಗೊಂಡಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಒಯ್ಯಲಾಗಿತ್ತು. ಆದರೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವು ಮೃತಪಟ್ಟಿದೆ ಎಂದು ವರದಿಯಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಯಲ್ಲಾಪುರ : ಗಂಗಾಧರ ಕೊಳಗಿ ಸೇರಿ ಮೂವರಿಗೆ 'ವನರಾಗ ಪುಸ್ತಕ ಪ್ರಶಸ್ತಿ' ಪ್ರದಾನ

ನಿಮ್ಮ ಕಾಮೆಂಟ್ ಬರೆಯಿರಿ

advertisement