ಅಪರೂಪದಲ್ಲಿ ಅಪರೂಪದ ಘಟನೆ…ತನ್ನ ಮರಿ ರಕ್ಷಿಸಲು ದೊಡ್ಡ ಹಾವಿನ ಜೊತೆಯೇ ಹೋರಾಡಿ ಗೆಲುವು ಸಾಧಿಸಿದ ಇಲಿ | ವೀಕ್ಷಿಸಿ

ಅಪಾಯಕಾರಿ ಹಾವನ್ನೇ ಇಲಿ ಸೋಲಿಸುವುದೆಂದರೆ….! ಅದನ್ನು ನಂಬುವುದೇ ಕಷ್ಟ. ಆದರೆ ನಂಬಲೇಬೇಕಾದ ಘಟನೆಯೊಂದು ವೈರಲ್‌ ಆಗಿದೆ. ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ದೊಡ್ಡ ಹಾವಿನ ಮೇಲೆ ಇಲಿಯೊಂದು ದಾಳಿ ಮಾಡಿ ಹಾವಿನ ಬಾಯಲ್ಲಿದ್ದ ತನ್ನ ಮರಿಯನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ ವೀಡಿಯೊವೊಂದು ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಇಲಿಯೊಂದು ತನ್ನ ಮರಿಯ ಸಲುವಾಗಿ ಹಾವಿನ ಜೊತೆ ಕಾದಾಟ ನಡೆಸಿ ಅದರಲ್ಲಿ ಗೆಲುವು ಸಾಧಿಸಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಲಿ ಮತ್ತು ಹಾವಿನ ಕಾದಾಟದ ಈ ವಿಡಿಯೋವನ್ನು ಕಳೆದ ಕೆಲವು ದಿನಗಳಲ್ಲಿ ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಲಕ್ಷಾಂತರ ಬಾರಿ ನೋಡಲಾಗಿದೆ. ಕೆಲವೇ ಸೆಕೆಂಡುಗಳ ವಿಡಿಯೋದಲ್ಲಿ ನಾಗರ ಹಾವೊಂದು ಇಲಿಯ ಮರಿಯನ್ನು ಬಾಯಿಯಲ್ಲಿ ಹಿಡಿದು ನುಂಗಲು ಆರಂಭಿಸಿರುವುದು ಕಂಡು ಬರುತ್ತಿದೆ. ಆದರೆ ಆಗ ಇಲಿ ತನ್ನ ಪುಟ್ಟ ಮರಿಯನ್ನು ಉಳಿಸಲು ಅಲ್ಲಿಗೆ ಧಾವಿಸುತ್ತದೆ. ತನ್ನ ಪ್ರಾಣದ ಬಗ್ಗೆ ತಲೆಕೆಡಿಸಿಕೊಳ್ಳದ ತಾಯಿ ಇಲಿ ಸುಮಾರು ಐದು ಅಡಿ ಉದ್ದದ ಹಾವಿನ ಮೇಲೆ ದಾಳಿ ಪ್ರತಿದಾಳಿ ಮಾಡುತ್ತದೆ.
ತನ್ನ ಚೂಪಾದ ಹಲ್ಲುಗಳಿಂದ ಹಾವಿನ ಬಾಲವನ್ನು ಪದೇ ಪದೇ ಕಚ್ಚುತ್ತದೆ. ಪದೇ ಪದೇ ತನ್ನ ಮೇಲೆ ದಾಳಿ ಮಾಡುವುದನ್ನು ತಡೆದುಕೊಳ್ಳಲಾರದ ಹಾವು ಕೂಡ ಹತ್ತು ಸೆಕೆಂಡ್‌ಗಳಲ್ಲಿ ಪುಟ್ಟ ಇಲಿಯನ್ನು ಬಿಟ್ಟು ಓಡಿಹೋಗುತ್ತದೆ.

ಅನಂತರ ತಾಯಿ ಇಲಿ ಅಷ್ಟಕ್ಕೆ ಬಿಡದೆ ಹಾವನ್ನು ಅಟ್ಟಿಸಿಕೊಂಡು ಹೋಗುತ್ತದೆ. ಓಡಿಹೋದ ಹಾವಿಗಾಗಿ ಹುಡುಕಾಟ ನಡೆಸುತ್ತದೆ. ಸ್ವಲ್ಪ ಸಮಯದ ನಂತರ ವಾಪಸ್‌ ಬಂದು ತನ್ನ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಗೂಡಿಗೆ ಒಯ್ಯುವುದು ವೀಡಿಯೊದಲ್ಲಿ ಕಂಡುಬರುತ್ತದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement