ಬೆಳಗಾವಿ ಚಿರತೆ ಸೆರೆ ಕಾರ್ಯಾಚರಣೆಗೆ ಶಿವಮೊಗ್ಗದಿಂದ ಬರಲಿವೆ ಎರಡು ಆನೆಗಳು

ಬೆಳಗಾವಿ: ಬೆಳಗಾವಿ ನಗರದ ಗಾಲ್ಫ್‌ ಮೈದಾನದಲ್ಲಿ ಅವಿತುಕೊಂಡ ಚಿರತೆ ಸೆರೆಗೆ ಈಗ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್‌ ಶಿಬಿರದಿಂದ ಎರಡು ಆನೆಗಳನ್ನು ಕರೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಂಗಳವಾರ ಬೆಳಿಗ್ಗೆಯೇ ಎರಡು ಆನೆಗಳು ಹಾಗೂ ಪರಿಣತ ಸಿಬ್ಬಂದಿಯ ತಂಡ ಶಿವಮೊಗ್ಗದಿಂದ ಹೊರಟಿದೆ ಎಂದು ಹೇಳಲಾಗಿದೆ.
ಸಕ್ರೆಬೈಲ್‌ ಆನೆ ತರಬೇತಿ ಕ್ಯಾಂಪಿನಲ್ಲಿರುವ ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಳಗಿರುವ 20 ವರ್ಷ ವಯಸ್ಸಿನ ಗಂಡು ಆನೆ ಅರ್ಜುನ ಹಾಗೂ 14 ವರ್ಷದ ಹೆಣ್ಣು ಆನೆ ಆಲೆ ಎಂಬ ಆನೆಗಳನ್ನು ಕರೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಹೇಳಲಾಗಿದೆ.

ಜೊತೆಗೆ ಅರಿವಳಿಕೆ ತಜ್ಞ, ಮಾವುತರು ಸೇರಿ ಎಂಟು ಜನರ ತಂಡ ಶಿವಮೊಗ್ಗದ ಸಕ್ರೆ ಬೈಲ್‌ನಿಂದ ಹೊರಟಿದ್ದು ರಾತ್ರಿ 9ರ ನಂತರ ನಗರ ತಲುಪಬಹುದು ಎಂದು ತಿಳಿಸಲಾಗಿದೆ. ಬುಧವಾರ ಬೆಳಿಗ್ಗೆ ಆನೆಗಳನ್ನು ಕಾರ್ಯಾಚರಣೆಗೆ ಇಳಿಯಬಹುದು ಎನ್ನಲಾಗಿದೆ.
ಬೆಳಗಾವಿ ನಗರದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಲ ಶಾಲೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಸೋಮವಾರ ಮುಂಜಾನೆ ನಗರದ ಪ್ರಮುಖ ರಸ್ತೆಯಲ್ಲೇ ಸಂಚರಿಸಿ ಭೀತಿ ಮೂಡಿಸಿದೆ. ಇದುವರೆಗೂ ಚಿರತೆ ಹಿಡಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement