ವಿವಾದಕ್ಕೆ ಕಾರಣವಾಯ್ತು ಗಯಾದ ವಿಷ್ಣುಪಾದ ದೇವಸ್ಥಾನಕ್ಕೆ ಸಿಎಂ ನಿತೀಶ್ ಜೊತೆ ಹಿಂದೂಯೇತರ ಸಚಿವರ ಪ್ರವೇಶ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಿಂದೂಯೇತರ ಸಚಿವರೊಂದಿಗೆ ವಿಷ್ಣುಪಾದ ದೇವಸ್ಥಾನಕ್ಕೆ ಪ್ರವೇಶಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಗಯಾದ ವಿಷ್ಣುಪಾದ ದೇವಸ್ಥಾನದಲ್ಲಿ ಹಿಂದೂಯೇತರ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ ಮತ್ತು ಕಳೆದ 100 ವರ್ಷಗಳಿಂದ ಈ ನಿಯಮ ಜಾರಿಯಲ್ಲಿದೆ. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷಿದ್ಧ ಎಂಬ ಸಂದೇಶದ ಫಲಕಗಳನ್ನು ಅಳವಡಿಸಲಾಗಿದೆ.
ಆದಾಗ್ಯೂ, ನಿತೀಶಕುಮಾರ್ ಅವರು ಹಿಂದೂಯೇತರರಾದ ಬಿಹಾರದ ಐಟಿ ಸಚಿವ ಮೊಹಮ್ಮದ್ ಇಸ್ರೇಲ್ ಮನ್ಸೂರಿ ಅವರೊಂದಿಗೆ ದೇವಾಲಯದ ಆವರಣಕ್ಕೆ ಪ್ರವೇಶಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಅವರು ಮನ್ಸೂರಿ ಅವರ ಪಕ್ಕದಲ್ಲಿ ಇತರ ನಾಯಕರೊಂದಿಗೆ ಗರ್ಭಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಮಂಗಳವಾರ ಒತ್ತಾಯಿಸಿದೆ. ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಬಿಹಾರ ಬಿಜೆಪಿ ಮುಖ್ಯಸ್ಥ ಎಸ್. ಜೈಸ್ವಾಲ್, ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಬಿಹಾರ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಗರ್ಭ ಗೃಹ’ದೊಳಗೆ ಹಿಂದೂಯೇತರರ ಪ್ರವೇಶಕ್ಕೆ ಅನುಮತಿ ಇಲ್ಲ ಎಂಬುದು ನಿತೀಶ್ ಕುಮಾರ್ ಅವರಿಗೆ ಗೊತ್ತಿದೆ. ಅವರು ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಅಪಹಾಸ್ಯ ಮಾಡಲು ಈ ರೀತಿ ಮಾಡಿದ್ದಾರೆ. ಇದು ಪಿತೂರಿಯ ಒಂದು ಭಾಗವಾಗಿದೆ. ಅವರು ಹಿಂದೂಗಳ ಕ್ಷಮೆ ಕೇಳಬೇಕು” ಎಂದು ಜೈಸ್ವಾಲ್ ಹೇಳಿದ್ದಾರೆ.
ನಿತೀಶ್ ಕುಮಾರ್ ಮತ್ತು ಅವರ ಸಚಿವರ ಉಲ್ಲಂಘನೆಯು ವಿಷ್ಣುಪಾದ ದೇವಸ್ಥಾನದ ಆಡಳಿತ ಸಮಿತಿಯ ಕೋಪಕ್ಕೂ ಕಾರಣವಾಗಿದೆ. ದೇವಸ್ಥಾನ ಸಮಿತಿಯ ಕಾರ್ಯಾಧ್ಯಕ್ಷ ಶಂಭು ಲಾಲ್ ಬಿತ್ತಲ್ ಅವರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಆ ಸಮಯದಲ್ಲಿ ಬಿಹಾರ ಮುಖ್ಯಮಂತ್ರಿ ಹಿಂದೂಯೇತರರೊಂದಿಗೆ ಆಗಮಿಸುತ್ತಾರೆ ಎಂದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದರು.

ಓದಿರಿ :-   ಸಂಘರ್ಷಕ್ಕೆ ಮಿಲಿಟರಿ ಪರಿಹಾರವಲ್ಲ, ಮಾತುಕತೆ-ರಾಜತಾಂತ್ರಿಕತೆಯೇ ಬೇಕು : ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್‌ಕೈಗೆ ಪ್ರಧಾನಿ ಮೋದಿ ಸಲಹೆ

ನಾವು ಅವರನ್ನು (ಮನ್ಸೂರಿ) ಗುರುತಿಸಲಿಲ್ಲ. ವಿಷಯ ತಿಳಿದವರು ಇದನ್ನು ನಿಲ್ಲಿಸಬೇಕಿತ್ತು. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಈ ಹಿಂದೆ ಅನೇಕ ವಿಐಪಿ ಅತಿಥಿಗಳು ಮತ್ತು ಮಂತ್ರಿಗಳು ಬಂದಿದ್ದಾರೆ, ಆದರೆ ಹಿಂದೂಯೇತರರು ವಿಷ್ಣುಪಾದ ದೇವಸ್ಥಾನವನ್ನು ಪ್ರವೇಶಿಸಿರಲಿಲ್ಲ. ತಪ್ಪು ಮಾಡಿದವರು ಕ್ಷಮೆ ಕೇಳಬೇಕು ಎಂದು ಬಿತ್ತಲ್ ಹೇಳಿದರು.
ವಿಷ್ಣುಪಾದ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ ಮಹೇಶ್ ಲಾಲ್ ಗುಪ್ತಾ, ಭೇಟಿ ನೀಡುವ ನಿಯೋಗದಲ್ಲಿ ಹಿಂದೂಯೇತರರು ಇರುತ್ತಾರೆ ಎಂದು ಅಧಿಕಾರಿಗಳಿಗೆ ಮೊದಲೇ ಸೂಚನೆ ನೀಡಬೇಕಿತ್ತು. ಅವರು ಮೊದಲೇ ಮಾಹಿತಿ ನೀಡಿದ್ದರೆ, ಹಿಂದೂಯೇತರರ ಪ್ರವೇಶವನ್ನು ನಿಲ್ಲಿಸಲಾಗುತ್ತಿತ್ತು. ಮುಖ್ಯಮಂತ್ರಿಗಳ ಜತೆ ಇತರ ಮುಸ್ಲಿಂ ಪದಾಧಿಕಾರಿಗಳು ಬಂದರೂ ಅವರು ಒಳಗೆ ಬರಲಿಲ್ಲ. ಹಿಂದೂಗಳಲ್ಲದವರಿಗೆ, ವಿಷ್ಣುಪಾದ ದೇವಸ್ಥಾನದಲ್ಲಿ ಗೊತ್ತುಪಡಿಸಿದ ಸ್ಥಳವಿದೆ, ಅಲ್ಲಿಂದ ಅವರಿಗೆ ದೇವಾಲಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಗುಪ್ತಾ ಹೇಳಿದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಓದಿರಿ :-   ಹಸುಗಳಲ್ಲಿ ಕಾಣಿಸಿಕೊಂಡ ಲಂಪಿ ವೈರಸ್‌ಗೆ ನೈಜೀರಿಯಾ ಚಿರತೆಗಳನ್ನು ಭಾರತಕ್ಕೆ ತಂದಿದ್ದು ಕಾರಣವಂತೆ...! ಹೇಳಿಕೆ ಮೂಲಕ ಅಪಹಾಸ್ಯಕ್ಕೀಡಾದ ಕಾಂಗ್ರೆಸ್‌ ನಾಯಕ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement