ಬೆಂಗಳೂರಲ್ಲಿ ಮಳೆ ಆರ್ಭಟ: ಹಲವು ಬಡಾವಣೆಗಳು ಬುಳುಬುಳು, ಜನಜೀವನ ತತ್ತರ

ಬೆಂಗಳೂರು: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಗಣೇಶ ಹಬ್ಬದ ಸಡಗರಕ್ಕೆ ವರುಣ ನೀರೆರೆದಿದ್ದಾನೆ.
ಮಹಾನಗರದ ಬಡಾವಣೆಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಜನ ಜಾಗರಣೆ ಮಾಡುವಂತಾಗಿದೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಜನರು ಮನೆಯಿಂದ ನೀರು ಹೊರಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರೀ ಮಳೆಯಿಂದ ಸರ್ಜಾಪುರ ರಸ್ತೆ, ಸಾಯಿ ಲೇಔಟ್, ನಾಗವಾರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಸ್ತೆ ಸೇರಿದಂತೆ ಹಲವೆಡೆ ಪ್ರದೇಶಗಳು ಜಲಾವೃತಗೊಂಡಿದೆ. ಕೆಲವೆಡೆ ನೀರು ನಿಂತು ಮನೆಗಳ ನೆಲ ಮಹಡಿ ಮುಳುಗಿದೆ.

ಬೆಳ್ಳಂದೂರು ರಸ್ತೆಯಲ್ಲಿ ನೀರು ನಿಂತು ಕಿಲೋ ಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಸರ್ಜಾಪುರ ರಸ್ತೆಯಲ್ಲಿನ ರೈಂಬೋ ಡ್ರೈವ್ ಲೇಔಟ್ ಸಂಪೂರ್ಣ ಜಲಾವೃತಗೊಂಡು ಬೋಟ್ ಬಳಕೆ ಮಾಡಿ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ನಾಗವಾರದಲ್ಲಿ ಚಿಕ್ಕ ಮಕ್ಕಳು, ಮಹಿಳೆಯರು ಮನೆಯ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದಾರೆ.ನಾಗವಾರ ಬಳಿ ರಾಜಕಾಲುವೆ ಪಕ್ಕ ಗೋಡೆ ಕುಸಿದು ಎರಡು ಕುಟುಂಬಗಳು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದೆ. ಮಾರುಕಟ್ಟೆಗೆ ತಂದಿದ್ದ ಹೂ, ಹಣ್ಣು, ಬಾಳೆದಿಂಡು ಸೇರಿದಂತೆ ಹಲವಾರು ಪದಾರ್ಥಗಳು ಕಣ್ಣೆದುರೇ ಕೊಚ್ಚಿಹೋಗಿವೆ.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

ನಗರದಲ್ಲಿ ನಿನ್ನೆ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಬಾಗಲೂರಿನಲ್ಲಿ 127.5ಮಿಮೀ, ದೊಡ್ಡಜಾಲ 90, ಬಂಡಿಕೊಡಿಗೇಹಳ್ಳಿ 82, ಕೆಜಿ ಹಳ್ಳಿ 83, ಸಿಂಗಸಂದ್ರ 78,ಮಾರೇನಹಳ್ಳಿ 77, ಎಚ್.ಗೊಲ್ಲಹಳ್ಳಿ 71.5, ಸಂಪಂಗಿರಾಮನಗರ 60.5, ಯಲಹಂಕ 60, ಕೋಣನಕುಂಟೆ 57, ಬೊಮ್ಮನಹಳ್ಳಿ 56, ಹೆಮ್ಮಿಗೇಪುರ 55, ಪೀಣ್ಯ ಕೈಗಾರಿಕಾ ಪ್ರದೇಶ 54, ನಾಯಂಡಹಳ್ಳಿ 54, ಅರಕೆರೆಯಲ್ಲಿ 48.5ಮಿಮೀನಷ್ಟು ಮಳೆಯಾಗಿದೆ.ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement