ಕೋವಿಡ್‌ ಸಂಕಟದ 2021ರಲ್ಲಿ ದಿನಗೂಲಿ ಕಾರ್ಮಿಕರು ಅತಿಹೆಚ್ಚು ಆತ್ಮಹತ್ಯೆ : ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: 2021 ರಲ್ಲಿ ಭಾರತವು ಕೋವಿಡ್‌-19 ಸಾಂಕ್ರಾಮಿಕದ ಹಿಡಿತದಲ್ಲಿದ್ದಾಗ ಆತ್ಮಹತ್ಯೆಯಿಂದ ಮೃತಪಟ್ಟವರಲ್ಲಿ ದಿನಗೂಲಿ ಕೆಲಸಗಾರರು, ವೇತನದಾರರು, ಸ್ವಯಂ ಉದ್ಯೋಗಿಗಳು, ನಿರುದ್ಯೋಗಿಗಳು ಮತ್ತು ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವರೇ ಹೆಚ್ಚಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ.
ಎನ್‌ಸಿಆರ್‌ಬಿ ಪ್ರಕಾರ, 2021 ರಲ್ಲಿ ದೇಶಾದ್ಯಂತ ಒಟ್ಟು 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 42,004 (25.6 %) ದಿನಗೂಲಿ ಕಾರ್ಮಿಕರು. ಒಟ್ಟು 1,18,979 ಪುರುಷ ಆತ್ಮಹತ್ಯೆಗಳಲ್ಲಿ, ಗರಿಷ್ಠ ಆತ್ಮಹತ್ಯೆಗಳನ್ನು ಮಾಡಿಕೊಂಡವರು ದಿನಗೂಲಿ ಕಾರ್ಮಿಕರು (37,751), ನಂತರ ಸ್ವಯಂ ಉದ್ಯೋಗಿಗಳು (18,803) ಮತ್ತು ನಿರುದ್ಯೋಗಿಗಳು (11,724) ಎಂದು ವರದಿ ಹೇಳಿದೆ. ಇದೇ ಅವಧಿಯಲ್ಲಿ ಒಟ್ಟು 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೃಷಿ ವಲಯದ ಅತಿ ಹೆಚ್ಚು ಆತ್ಮಹತ್ಯೆಗಳ ವರದಿ
ಕಳೆದ ವರ್ಷ 5,318 ರೈತರು, ಸಾಗುವಳಿದಾರರು ಮತ್ತು 5,563 ಕೃಷಿ ಕಾರ್ಮಿಕರನ್ನು ಒಳಗೊಂಡ ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವ 10,881 ಜನರು ಆತ್ಮಹತ್ಯೆಯಿಂದ ಸಾವಿಗೀಡಾಗಿದ್ದಾರೆ. ಇದು ಭಾರತದಲ್ಲಿನ ಒಟ್ಟು ಆತ್ಮಹತ್ಯೆ ಮಾಡಿಕೊಂಡವರಲ್ಲಿ 6.6%ರಷ್ಟಿದೆ. ಕೃಷಿ ವಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚಿನವರು ಪುರುಷರು.
ಕೃಷಿ ವಲಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಸಾವುಗಳು ಮಹಾರಾಷ್ಟ್ರದಿಂದ (37.3%), ಕರ್ನಾಟಕ (19.9%ತ), ಆಂಧ್ರಪ್ರದೇಶ (9.8%), ಮಧ್ಯಪ್ರದೇಶ (6.2 %) ಮತ್ತು ತಮಿಳುನಾಡು (5.5%) ವರದಿಯಾಗಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಮತ್ತೊಂದೆಡೆ, ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೃಷಿ ವಲಯದ ಜನರಲ್ಲಿ ಆತ್ಮಹತ್ಯೆಯಿಂದ ಸಾವಿನ ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲ. ಇವುಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶ, ಉತ್ತರಾಖಂಡ, ಚಂಡೀಗಢ, ಲಕ್ಷದ್ವೀಪ ಮತ್ತು ಪುದುಚೇರಿ ಸೇರಿವೆ.
ಖಾಸಗಿ ವಲಯಕ್ಕೆ ಹೋಲಿಸಿದರೆ, ಆತ್ಮಹತ್ಯೆಯಿಂದ ಸಾವಿಗೀಡಾದ ಸರ್ಕಾರಿ ನೌಕರರು ಒಟ್ಟು ಅಂಕಿಅಂಶದ 1.2 ಪ್ರತಿಶತ (1,898) ರಷ್ಟಿದ್ದಾರೆ, ಅಲ್ಲಿ ಆತ್ಮಹತ್ಯೆಯಿಂದ ಮೃತಪಟ್ಟ ಒಟ್ಟು ಅಂಕಿ ಅಂಶದ 7%(11,431) ರಷ್ಟಿದ್ದಾರೆ.
ಏತನ್ಮಧ್ಯೆ, ಈ ಅವಧಿಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಪಿಎಸ್‌ಯು) 2,541 ಕಾರ್ಮಿಕರು, 13,089 ವಿದ್ಯಾರ್ಥಿಗಳು (8 ಪ್ರತಿಶತ), ಮತ್ತು 13,714 ನಿರುದ್ಯೋಗಿಗಳು (ಶೇ 8.4) ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ.

ಓವರ್‌ಸ್ಪೀಡ್‌ ಅಪಘಾತದಲ್ಲಿ ಸಾವು: ಕರ್ನಾಟಕ ನಂ.2
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)ದ ವಾರ್ಷಿಕ ವರದಿ ಬಿಡುಗಡೆಯಾಗಿದ್ದು, 2021ರಲ್ಲಿ ದೇಶಾದ್ಯಂತ ಅತಿವೇಗದಿಂದಾಗಿ ಉಂಟಾದ ರಸ್ತೆ ಅಪಘಾತಗಳಲ್ಲಿ 87050 ಮಂದಿ ಸಾವಿಗೀಡಾಗಿದ್ದಾರೆ. ಆ ಪೈಕಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ 11,419 (ಶೇ.13.1) ಜನರು ಪ್ರಾಣತೆತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಶರವೇಗವಾಗಿ ವಾಹನ ಓಡಿಸಿದ್ದರಿಂದ ಕರ್ನಾಟಕದಲ್ಲಿ 8797 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಅತಿ ವೇಗದ ಕಾರಣಕ್ಕೆ ರಸ್ತೆ ಅಪಘಾತವಾಗಿ ಸಾವಿಗೀಡಾದವರ ಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ.10.1ರಷ್ಟಿದ್ದು, ದೇಶದಲ್ಲೇ 2ನೇ ಸ್ಥಾನ ಪಡೆದಿದೆ.
ಒಟ್ಟಾರೆ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗಳೇ ದೇಶದಲ್ಲಿ ಅತಿ ಹೆಚ್ಚು ಅಪಘಾತ ಸಂಬಂಧಿ ಸಾವುಗಳಿಗೆ ಕಾರಣವಾಗುತ್ತಿವೆ. ರಸ್ತೆ ಅಪಘಾತಗಳಿಂದಾಗಿ ದೇಶದಲ್ಲಿ 2021ರಲ್ಲಿ 1,55,622 ಮಂದಿ ಸಾವಿಗೀಡಾಗಿದ್ದಾರೆ. ಆ ಪೈಕಿ ಓವರ್‌ಸ್ಪೀಡ್‌ ಶೇ.59.7ರಷ್ಟುಅಪಘಾತಗಳಿಗೆ ಕಾರಣವಾಗಿದ್ದು, 87,050 ಮಂದಿ ಮೃತಪಟ್ಟಿದ್ದಾರೆ. ನಿರ್ಲಕ್ಷ್ಯದ ಚಾಲನೆಗೆ 42,853 ಮಂದಿ ಪ್ರಾಣ ತೆತ್ತಿದ್ದಾರೆ., ಮಾದಕ ವಸ್ತು ಅಥವಾ ಮದ್ಯಪಾನ ಮಾಡಿ ವಾಹನ ಚಾಲನೆ ವೇಳೆ 2935 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement