ಕೋವಿಡ್‌ ಸಂಕಟದ 2021ರಲ್ಲಿ ದಿನಗೂಲಿ ಕಾರ್ಮಿಕರು ಅತಿಹೆಚ್ಚು ಆತ್ಮಹತ್ಯೆ : ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: 2021 ರಲ್ಲಿ ಭಾರತವು ಕೋವಿಡ್‌-19 ಸಾಂಕ್ರಾಮಿಕದ ಹಿಡಿತದಲ್ಲಿದ್ದಾಗ ಆತ್ಮಹತ್ಯೆಯಿಂದ ಮೃತಪಟ್ಟವರಲ್ಲಿ ದಿನಗೂಲಿ ಕೆಲಸಗಾರರು, ವೇತನದಾರರು, ಸ್ವಯಂ ಉದ್ಯೋಗಿಗಳು, ನಿರುದ್ಯೋಗಿಗಳು ಮತ್ತು ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವರೇ ಹೆಚ್ಚಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಎನ್‌ಸಿಆರ್‌ಬಿ ಪ್ರಕಾರ, 2021 ರಲ್ಲಿ ದೇಶಾದ್ಯಂತ ಒಟ್ಟು 1,64,033 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Continued