₹ 6 ಕೋಟಿ ಚಿನ್ನಾಭರಣ ಲೂಟಿ ಮಾಡಿದ ಆರೋಪಿಗಳ ಬಂಧನಕ್ಕೆ ಕಾರಣವಾಯ್ತು 100 ರೂ. Paytm ವಹಿವಾಟು….!

ನವದೆಹಲಿ: ಪೇಟಿಎಂ ವಹಿವಾಟಿನ ಸಹಾಯದಿಂದ ದೆಹಲಿಯ ಪಹರ್‌ಗಂಜ್ ಪ್ರದೇಶದಲ್ಲಿ ಇಬ್ಬರನ್ನು ದರೋಡೆ ಮಾಡಿದ ಆರೋಪದ ಮೇಲೆ ರಾಜಸ್ಥಾನದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಇಬ್ಬರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಆರೋಪಿಗಳು ₹ 6 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದರು. ಆರೋಪಿಗಳನ್ನು ನಜಾಫ್‌ಗಢ ನಿವಾಸಿಗಳಾದ ನಾಗೇಶ್ ಕುಮಾರ್ (28), ಶಿವಂ (23), ಮತ್ತು ಮನೀಶ್ ಕುಮಾರ್ (22) ಎಂದು ಗುರುತಿಸಲಾಗಿದೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಇಬ್ಬರು ವ್ಯಕ್ತಿಗಳು, ಒಬ್ಬ ಪೊಲೀಸ್ ಸಮವಸ್ತ್ರದಲ್ಲಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಒಂದು ಹಂತದ ನಂತರ, ಅವರು ಇಬ್ಬರು ವ್ಯಕ್ತಿಗಳನ್ನು ನಿಲ್ಲಿಸುತ್ತಾರೆ. ಈ ಮಧ್ಯೆ, ಇನ್ನೂ ಇಬ್ಬರು ಪುರುಷರು ಅವರೊಂದಿಗೆ ಸೇರುತ್ತಾರೆ. ನಂತರ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಪಾರ್ಸೆಲ್ ನೊಂದಿಗೆ ಓಡಿ ಹೋಗಿದ್ದಾರೆ.

ಘಟನೆ ಕುರಿತು ಬುಧವಾರ ಪೊಲೀಸರಿಗೆ ಮಾಹಿತಿ ಲಭಿಸಿದೆ. ದೂರುದಾರ ಸೋಮವೀರ್ ಅವರು ಚಂಡೀಗಢದ ಪಾರ್ಸೆಲ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಮುಂಜಾನೆ 4:15 ರ ಸುಮಾರಿಗೆ, ಸೋಮ್‌ವೀರ್‌ ಅವರು ತಮ್ಮ ಸಹೋದ್ಯೋಗಿ ಜಗದೀಪ್ ಸೈನಿ ಅವರೊಂದಿಗೆ ಪಹರ್‌ಗಂಜ್‌ನಲ್ಲಿರುವ ತಮ್ಮ ಕಚೇರಿಯಿಂದ ಪಾರ್ಸೆಲ್‌ಗಳನ್ನು ತೆಗೆದುಕೊಂಡು ಡಿಬಿಜಿ ರಸ್ತೆಯ ಕಡೆಗೆ ಹೋಗುತ್ತಿದ್ದರು. ಅವರು ಮಿಲೇನಿಯಮ್ ಹೋಟೆಲ್ ಬಳಿ ತಲುಪಿದಾಗ, ಅಲ್ಲಿ ಇಬ್ಬರನ್ನು ನೋಡಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರಲ್ಲಿ ಒಬ್ಬರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದ, ಹಾಗೂ ತಪಾಸಣೆ ಮಾಡಲು ತಮ್ಮ ಬ್ಯಾಗ್‌ಗಳನ್ನು ಕೇಳಿದರು ಎಂದು ಸೋಮ್‌ವೀರ್‌ ಹೇಳಿದ್ದಾರೆ. ಅಷ್ಟರಲ್ಲಿ ಮತ್ತಿಬ್ಬರು ಬಂದು ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚೀಲವನ್ನು ಕೊಡಿ ಇಲ್ಲವಾದಲ್ಲಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿಗಳು ಚಿನ್ನಾಭರಣಗಳಿದ್ದ ಪಾರ್ಸೆಲ್‌ಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

ತನಿಖೆಯ ಸಮಯದಲ್ಲಿ, ಪೊಲೀಸರು ಘಟನೆ ನಡೆದ ಏಳು ದಿನಗಳ 700 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ಸ್ಥಳದ ಬಳಿ ಸ್ಥಳೀಯ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿದರು. ಘಟನಾ ಸ್ಥಳದ ಸಮೀಪ ನಾಲ್ವರ ಚಟುವಟಿಕೆಗಳು ಅನುಮಾನಾಸ್ಪದವಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳು ಕ್ಯಾಬ್ ಡ್ರೈವರ್‌ನೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದ್ದು, ಅವರಲ್ಲಿ ಒಬ್ಬ ಚಹಾ ಖರೀದಿಸಲು ನಗದು ಬದಲಾಗಿ ₹ 100 ಅನ್ನು ಪೇಟಿಎಂ ಮೂಲಕ ಚಾಲಕನ ಖಾತೆಗೆ ವರ್ಗಾಯಿಸಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಶ್ವೇತಾ ಚೌಹಾಣ್ ಹೇಳಿದ್ದಾರೆ.
ತಕ್ಷಣವೇ ಪೊಲೀಸರು ಆತನ ಪೇಟಿಎಂ ವ್ಯವಹಾರ ವಿಶ್ಲೇಷಿಸಿ ಮೊಬೈಲ್‌ ನಂಬರ್‌ ಹಾಗೂ ಅಪರಾಧಿಗಳನ್ನು ನಜಾಫ್‌ಗಢ ನಿವಾಸಿಗಳು ಎಂದು ಪತ್ತೆಹಚ್ಚಿದ್ದಾರೆ. ನಂತರ ಆರೋಪಿಗಳು ರಾಜಸ್ಥಾನಕ್ಕೆ ಹೋಗಿರುವುದನ್ನು ಪತ್ತೆ ಮಾಡಿದ ನಂತರ ಜೈಪುರಕ್ಕೆ ತಂಡವನ್ನು ಕಳುಹಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.
₹ 5.5 ರಿಂದ 6 ಕೋಟಿ ಮೌಲ್ಯದ ಮೌಲ್ಯದ ಒಟ್ಟು 6,270 ಗ್ರಾಂ ಚಿನ್ನ, ಮೂರು ಕೆಜಿ ಬೆಳ್ಳಿ, 500 ಗ್ರಾಂ ಚಿನ್ನ ಮತ್ತು 106 ಕಚ್ಚಾ ವಜ್ರಗಳು ಮತ್ತು ಇತರ ವಜ್ರದ ಆಭರಣಗಳು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ.
ದರೋಡೆಯ ಮಾಸ್ಟರ್ ಮೈಂಡ್ ನಾಗೇಶ್ ತನ್ನ ಸ್ನೇಹಿತರು ಮತ್ತು ತಾಯಿಯ ಚಿಕ್ಕಪ್ಪನೊಂದಿಗೆ ಅಪರಾಧ ಎಸಗಲು ಯೋಜಿಸಿದ್ದನಂತೆ.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement