ಕೋವಿಡ್‌-19 ಸೋಂಕಿನ ಹೆಚ್ಚಿನ ಅಪಾಯದ ಪ್ರಕರಣಗಳ ಚಿಕಿತ್ಸೆಯಲ್ಲಿ ಆಯುರ್ವೇದ, ಯೋಗ ಹೆಚ್ಚು ಪರಿಣಾಮಕಾರಿ: ದೆಹಲಿ ಐಐಟಿ ಅಧ್ಯಯನದಲ್ಲಿ ಕಂಡುಬಂದ ಅಂಶ

ನವದೆಹಲಿ: ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮತ್ತು ಹರಿದ್ವಾರದ ದೇವ್ ಸಂಸ್ಕೃತಿ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಯೋಗ ಮತ್ತು ಆಯುರ್ವೇದವು ಕೋವಿಡ್‌-19ರ ಹೆಚ್ಚಿನ ಅಪಾಯದ ಪ್ರಕರಣಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಬಹುದು ಎಂದು ಕಂಡುಬಂದಿದೆ.
30 ಹೆಚ್ಚಿನ ಅಪಾಯದ (ಹೈ-ರಿಸ್ಕ್) ಕೋವಿಡ್‌-19 ರೋಗಿಗಳ ಯಶಸ್ವಿ ಚಿಕಿತ್ಸೆಯ ಕುರಿತಾದ ಅಧ್ಯಯನವನ್ನು ಇಂಡಿಯನ್ ಜರ್ನಲ್ ಆಫ್ ಟ್ರೆಡಿಷನಲ್ ನಾಲೆಡ್ಜ್‌ನಲ್ಲಿ ಪ್ರಕಟಿಸಲಾಗಿದೆ. ಕೋವಿಡ್‌-19 ಚಿಕಿತ್ಸೆಗೆ ಹೆಚ್ಚುವರಿಯಾಗಿ, ಯೋಗ ಮತ್ತು ಆಯುರ್ವೇದವು ಅಂತಹ ರೋಗಿಗಳನ್ನು ಆತಂಕದಿಂದ ಮುಕ್ತಗೊಳಿಸಲು ಮತ್ತು ಚಿಕಿತ್ಸೆಯ ನಂತರದ ತ್ವರಿತ ಚೇತರಿಕೆಗೆ ಸಹಕಾರಿಯಾಗಬಹುದು ಎಂದು ಅಧ್ಯಯನವು ಸೂಚಿಸಿದೆ.
ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವ ತುರ್ತು ಅಗತ್ಯವನ್ನು ಅಧ್ಯಯನವು ತೋರಿಸುತ್ತದೆ. ಕೋವಿಡ್‌-19 ಕ್ಕಾಗಿ ಆಯುರ್ವೇದ ಮತ್ತು ಯೋಗ ಆಧಾರಿತ ವೈಯಕ್ತಿಕ ಸಂಯೋಜಿತ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲಾಯಿತು. ಸಮಯೋಚಿತ ಮತ್ತು ಸೂಕ್ತವಾಗಿ ವಿನ್ಯಾಸಗೊಳಿಸಲಾದ ಯಾದೃಚ್ಛಿಕ ನಿಯಂತ್ರಿತ ಪ್ರಯೋಗವು ಕೋವಿಡ್‌-19 ಅನ್ನು ನಿರ್ವಹಿಸುವಲ್ಲಿ ಅದರ ಬಳಕೆಯ ಬಗ್ಗೆ ಹೆಚ್ಚು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ಒದಗಿಸಿದೆ ಎಂದು ಯೋಜನೆಯನ್ನು ಪರಿಕಲ್ಪನೆ ಮಾಡಿದ ದೆಹಲಿ ಐಐಟಿ (IIT)ಯ ರಾಹುಲ್ ಗಾರ್ಗ್ ಹೇಳಿದ್ದಾರೆ.

ಮಾರ್ಗಸೂಚಿಗಳ ಪ್ರಕಾರ ಗುಣಮಟ್ಟದ ಆರೈಕೆ ಚಿಕಿತ್ಸೆಯ ಹೊರತಾಗಿ, ರೋಗಿಗಳಿಗೆ ಟೆಲಿಮೆಡಿಸಿನ್ ಮೂಲಕ ಆಯುರ್ವೇದ ಔಷಧಿಗಳನ್ನು ಸೂಚಿಸಲಾಗುತ್ತದೆ ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಅನ್ನು ಬಳಸಿಕೊಂಡು ವೈಯಕ್ತಿಕವಾಗಿ ಚಿಕಿತ್ಸೆ ನೀಡಲು ಯೋಗ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು. “ಬಹುತೇಕ ಎಲ್ಲಾ ರೋಗಿಗಳನ್ನು ಒಂದು ಅಥವಾ ಹೆಚ್ಚಿನ ಸಹ-ಅಪಾಯದ ಕಾರಣದಿಂದಾಗಿ ಅವರನ್ನು ವರ್ಗೀಕರಿಸಲಾಗಿತ್ತು.
ಡಯಾಬಿಟಿಸ್ ಮೆಲ್ಲಿಟಸ್ (ಸಿಹಿಮೂತ್ರ), ಅಧಿಕ ರಕ್ತದೊತ್ತಡ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಪರಿಧಮನಿಯ ಅಪಧಮನಿ ಕಾಯಿಲೆ (ಕೋವಿಡ್‌-19 ಪ್ರಕರಣಗಳಲ್ಲಿ ಇದು ತೀವ್ರ ಪರಿಣಾಮಗಳಿಗೆ ಕಾರಣವಾಗುತ್ತದೆ) ಮತ್ತು/ಅಥವಾ 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಎಂದು
ವರ್ಗೀಕರಿಸಲಾಗಿತ್ತು. ರೋಗಿಗಳಿಗೆ ನೀಡಲಾದ ಚಿಕಿತ್ಸೆಯನ್ನು ವೈಯಕ್ತೀಕರಿಸಲಾಗಿತ್ತು (ಶಾಸ್ತ್ರೀಯ ಪಠ್ಯಗಳಿಗೆ ಅನುಗುಣವಾಗಿ) ಮತ್ತು ಪ್ರತಿ ರೋಗಿಯ ವೈದ್ಯಕೀಯ ಇತಿಹಾಸ ಮತ್ತು ಪ್ರಸ್ತುತಪಡಿಸಿದ ರೋಗಲಕ್ಷಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ, ಇದು ಸ್ಥಿರವಾದ ಪ್ರಮಾಣಿತ ಚಿಕಿತ್ಸಾ ಯೋಜನೆಗೆ ಹೋಲಿಸಿದರೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಗಾರ್ಗ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   70 ವರ್ಷ ಮೇಲ್ಪಟ್ಟ ಎಲ್ಲರಿಗೂ ₹5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ; ಮೋದಿ ಸರ್ಕಾರದ ಮಹತ್ವದ ನಿರ್ಧಾರ

ಚಿಕಿತ್ಸೆಯು ಆಯುರ್ವೇದ ಔಷಧಗಳು, ವಿಶ್ರಾಂತಿ ತಂತ್ರಗಳು, ಪ್ರಾಣಾಯಾಮ ಮತ್ತು ಮೂಲಭೂತ ಆಸನಗಳು ಮತ್ತು ಕೆಲವು ಜೀವನಶೈಲಿ ಮಾರ್ಪಾಡುಗಳನ್ನು ಒಳಗೊಂಡಂತೆ ದೈನಂದಿನ ಯೋಗ-ವಿಭಾಗಗಳನ್ನು ಒಳಗೊಂಡಿತ್ತು. ನಿರ್ವಹಿಸಿದ ಚಿಕಿತ್ಸೆಯ ಆಧಾರದ ಮೇಲೆ, ಪ್ರಕರಣಗಳನ್ನು YAS (ಯೋಗ-ಆಯುರ್ವೇದ ಆಧಾರಿತ ಚಿಕಿತ್ಸೆ, ಬಹುಶಃ ಅಲೋಪತಿ ಪೂರಕಗಳೊಂದಿಗೆ), YASP (ಯೋಗ-ಆಯುರ್ವೇದ ಆಧಾರಿತ ಚಿಕಿತ್ಸೆ, ಪ್ರಾಯಶಃ ಅಲೋಪತಿ ಪೂರಕಗಳು ಮತ್ತು ಪ್ಯಾರೆಸಿಟಮಾಲ್), YAM (ಯೋಗ-ಆಯುರ್ವೇದ ಚಿಕಿತ್ಸೆ, ಮತ್ತು ಮಾಡರ್ನ್ ವೆಸ್ಟರ್ನ್ ಮೆಡಿಸಿನ್ (MWM)) ಎಂದು ವರ್ಗೀಕರಿಸಲಾಗಿತ್ತು.
ಯೋಗ ಮತ್ತು ಆಯುರ್ವೇದ ಚಿಕಿತ್ಸೆಗೆ ಮುನ್ನ ಹೆಚ್ಚಿನ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು, ಚೇತರಿಸಿಕೊಳ್ಳುವವರೆಗೆ ನಿಯಮಿತವಾಗಿ ದೂರವಾಣಿ ಮೂಲಕ ಅವರಿಗೆ ಫಾಲೋಅಪ್‌ ಮಾಡಿ ನಿಗಾವಹಿಸಲಾಗಿತ್ತು.. ರೋಗಲಕ್ಷಣದ ಅರ್ಧಕ್ಕಿಂತ ಹೆಚ್ಚು ರೋಗಿಗಳು ಐದು ದಿನಗಳಲ್ಲಿ (90 ಪ್ರತಿಶತದಷ್ಟು ಒಂಬತ್ತು ದಿನಗಳಲ್ಲಿ) ಸುಧಾರಿಸಲು ಪ್ರಾರಂಭಿಸಿದರು ಮತ್ತು 60 ಪ್ರತಿಶತಕ್ಕಿಂತ ಹೆಚ್ಚು ಜನರು 10 ದಿನಗಳಲ್ಲಿ ಕನಿಷ್ಠ 90 ಪ್ರತಿಶತದಷ್ಟು ಚೇತರಿಸಿಕೊಂಡಿರುವುದು ಕಂಡುಬಂದಿದೆ.

“ಆಕ್ಸಿಜನ್ ಸ್ಯಾಚುರೇಶನ್ (SpO2) ಶೇಕಡಾ 95 ಕ್ಕಿಂತ ಕಡಿಮೆ ಇರುವ ಆರು ರೋಗಿಗಳು ಮಕರಾಸನ ಮತ್ತು ಶಿಥಿಲಾಸನದ ಮೂಲಕ ಪ್ರಯೋಜನ ಪಡೆದರು; ಯಾವುದೂ ಸಂಯೋಜಿತ ತೀವ್ರವಾದ ಹಂತದಲ್ಲಿದ್ದ (ತೀವ್ರ ನಿಗಾ ಘಟಕಕ್ಕೆ ಪ್ರವೇಶ, ಇನ್‌ವೇಸಿವ್‌ ವೆಂಟಿಲೇಶನ್‌ ಅಥವಾ ಮರಣದ ಸಾಧ್ಯತೆ ಒಳಗೊಂಡಿರುವಷ್ಟು ತೀವ್ರ) ಹೆಚ್ಚಿನ ರೋಗಿಗಳು ಚಿಕಿತ್ಸೆಯು ಆಳವಾದ ಪರಿಣಾಮವನ್ನು ಬೀರಿದೆ ಎಂದು ವರದಿ ಮಾಡಿದ್ದಾರೆ. ಅವರ ಚೇತರಿಕೆಯ ಪ್ರಕ್ರಿಯೆಯಲ್ಲಿ, ಅನೇಕರು ತಮ್ಮ ಸಹವರ್ತಿ ರೋಗಗಳಿಗೆ ಸಂಬಂಧಿಸಿದಂತೆ ಸುಧಾರಣೆಗಳನ್ನು ಕಂಡುಕೊಂಡಿರುವುದು ಕಂಡುಬಂದಿದೆ.
ಚಿಕಿತ್ಸೆಯ ಅಂತ್ಯದ ವೇಳೆಗೆ, ಹಲವಾರು ರೋಗಿಗಳು ತಮ್ಮ ಜೀವನಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದರು, ಮತ್ತು ಅನೇಕರು ತಮಗಿರುವ ಇತರ ರೋಗಗಳ ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ತಂಡದಲ್ಲಿನ ಆಯುರ್ವೇದ ವೈದ್ಯರ ಕಡೆಗೆ ತಿರುಗಿದರು” ಎಂದು ವಾಡಿಕೆಯ ರೋಗಿಗಳ ಫಾಲೋಅಪ್‌ ಮಾಡಿದ ಐಐಟಿ ದೆಹಲಿಯ ವಿದ್ವಾಂಸರಾದ ಸೋನಿಕಾ ಥಕ್ರಾಲ್ ಹೇಳಿದರು.
ಆಯುರ್ವೇದ ಚಿಕಿತ್ಸೆಯನ್ನು ನಿರ್ವಹಿಸಿದ ಡಾ ಅಲ್ಕಾ ಮಿಶ್ರಾ ಅವರು ಈ ಸಾಂಪ್ರದಾಯಿಕ ಔಷಧಿಗಳ ಪರಿಣಾಮಕಾರಿತ್ವದಲ್ಲಿ ರೋಗಿಗಳ ನಂಬಿಕೆಯನ್ನು ಬಲವಾಗಿ ಹೆಚ್ಚಿಸಿದ್ದಾರೆ ಎಂದು ಹೇಳಿದರು. “ನಾವು ಪ್ರಾಚೀನ ವೈದ್ಯಕೀಯ ಪದ್ಧತಿಗಳ ಕಡೆಗೆ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಗಮನಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮುಂಬೈ: ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement