ಸರಸರನೆ ತೆಂಗಿನಮರ ಹತ್ತಿ ಇಳಿದ ಚಿರತೆಗಳು : ಅವುಗಳ ಚುರುಕುತನಕ್ಕೆ ಇಂಟರ್ನೆಟ್ ಬೆರಗು | ವೀಕ್ಷಿಸಿ

ಚಿರತೆಗೆ ಸಂಬಂಧಿಸಿದ ಸಾಕಷ್ಟು ಕ್ಲಿಪ್‌ಗಳನ್ನು ನೋಡಿರಬಹುದು. ಚಿರತೆ ಬೇಟೆಯಲ್ಲಿ, ಮರವೇರುವುದರಲ್ಲಿ ಪಳಗಿರುವ ಪ್ರಾಣಿ, ಬಹುತೇಕ ಸಂದರ್ಭದಲ್ಲಿ ಚಿರತೆಗಳು ಮರದಲ್ಲಿಯೇ ಇರುತ್ತವೆ. ಅಲ್ಲದೆ, ತನ್ನ ಆಹಾರವನ್ನು ಬೇರೆ ಯಾವ ಪ್ರಾಣಿಗಳು ತಿನ್ನಬಾರದು ಎಂಬ ಕಾರಣಕ್ಕೆ ತಾನು ಬೇಟೆಯಾಡಿದ ಭಾರೀ ತೂಕದ ಪ್ರಾಣಿಯ ಕಳೇಬರವನ್ನೂ ಮರದ ತುದಿಗೆ ಕೊಂಡೊಯ್ಯುವ ಸಾಮರ್ಥ್ಯವೂ ಅವುಗಳಿಗಿವೆ. ದೊಡ್ಡ ಮರಗಳನ್ನೂ ಬೆಕ್ಕಿನಮತೆಯೇ ಸರಸರನೇ ಏರುವ ಸಾಮರ್ಥ್ಯವೂ ಇವೆ. ಇದು ಕೂಡಾ ಅಂತಹದ್ದೇ ಒಂದು ಸಾಮರ್ಥ್ಯದ ವೀಡಿಯೋ ಈಗ ಸಾಮಾಜಿ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎರಡು ಚಿರತೆಗಳು ತೆಂಗಿನ ಮರವನ್ನು ಸರಸರನೇ ಏರುವ ದೃಶ್ಯವಿದು. ತೆಂಗಿನ ಮರ ಏರುವುದು ಅಷ್ಟು ಸುಲಭವಲ್ಲ, ಆದರೆ ಇಲ್ಲಿ ಚಿರತೆಗಳು ಬೆಕ್ಕಿನಂತೆ ಸರಸರನೆ ತೆಂಗಿನಮರ ಏರಿವೆ. ಒಂದು ಚಿರತೆ ತೆಂಗಿನ ಮರದ ತುದಿಯಲ್ಲಿ ಇರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಇದಾದ ಬಳಿಕ ಆ ಚಿರತೆ ಸ್ವಲ್ಪ ಹೊತ್ತಿನ ನಿಧಾನಕ್ಕೆ ಕೆಳಗಿಳಿಯಲು ಯತ್ನಿಸುತ್ತದೆ. ಅಷ್ಟರಲ್ಲಿ ಅಲ್ಲಿ ಇನ್ನೊಂದು ಚಿರತೆ ಕಾಣುತ್ತದೆ. ಈ ಚಿರತೆಯನ್ನು ಕಂಡ ಕೂಡಲೇ ಮೊದಲು ಮರದಲ್ಲಿದ್ದ ಚಿರತೆ ವೇಗವಾಗಿ ಮತ್ತೆ ಪುನಃ ಮರ ಏರುತಿದೆ. ಇನ್ನೊಂದು ಚಿರತೆ ಕೂಡಾ ಅಷ್ಟೇ ವೇಗದಲ್ಲಿ ಇದನ್ನು ಬೆನ್ನಟ್ಟಿ ಮರದ ತುದಿಗೆ ತಲುಪುತ್ತದೆ. ಈ ದೃಶ್ಯವೇ ಅಚ್ಚರಿ ಮೂಡಿಸುತ್ತದೆ. ಮರದ ತುದಿಯಲ್ಲಿ ಈ ಎರಡು ಚಿರತೆಗಳು ಕಾಳಗದಲ್ಲಿ ತೊಡಗಿದ್ದಂತೆ ಕಾಣುತ್ತದೆ. ಇದಾದ ಬಳಿಕ ಒಂದು ಚಿರತೆ ಸರಸರನೇ ಕೆಳಗೆ ಇಳಿದು ಓಡುತ್ತದೆ…ಚಿರತೆ ತೆಂಗಿನ ಮರ ಸರಸರಸನೆ ಏರುವುದು ಸಹಜವಾಗಿಯೇ ಅಚ್ಚರಿ ಮೂಡಿಸಿದೆ. ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ನಡೆಸಿದ್ದ, ಭಾರತದಲ್ಲಿ ದಾಳಿ ನಡೆಸುವುದನ್ನು ಸಂಘಟಿಸಿದ್ದ : ವರದಿಗಳು

https://twitter.com/ParveenKaswan/status/1571511806538956802?ref_src=twsrc%5Etfw%7Ctwcamp%5Etweetembed%7Ctwterm%5E1571511806538956802%7Ctwgr%5Ec74f78388afed727cf58092762d33d1ee17c2836%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fviral-video-shows-leopard-climbing-up-and-down-a-coconut-tree-in-nashik-its-agility-stuns-internet-2001902-2022-09-19

ನಂತರದ ಟ್ವೀಟ್‌ನಲ್ಲಿ, ಚಿರತೆಗಳು ಯಾವುದೇ ಸ್ಥಳಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ. “ಚಿರತೆಗಳು ಚುರುಕಾಗಿರುತ್ತವೆ ಮತ್ತು ಎಲ್ಲಾ ರೀತಿಯ ಸ್ಥಳಗಳಿಗೆ ಹೊಂದಿಕೊಳ್ಳುತ್ತವೆ. ರಾಜಸ್ಥಾನದ ರಾಕಿ ಮತ್ತು ಒಣ ಬೆಟ್ಟಗಳಿಂದ ಈಶಾನ್ಯದ ಎತ್ತರದ ಪ್ರದೇಶದ ಅರಣ್ಯದ ವರೆಗೆ. ಬಾಂಬೆ ಮತ್ತು ಗುರ್‌ಗಾಂವ್‌ನಂತಹ ನಗರಗಳಿಂದ ಹಿಮಾಲಯದ ಮಾನವರಹಿತ ಭೂಮಿ ವರೆಗೆ ಅವು ಹೊಂದಿಕೊಳ್ಳುತ್ತವೆ. ಅವರ ಆಹಾರದ ವ್ಯಾಪ್ತಿಯೂ ವಿಶಾಲವಾಗಿದೆ. ನನ್ನ ಅಭಿಪ್ರಾಯದಲ್ಲಿ ಈ ದೊಡ್ಡ ಬೆಕ್ಕುಗಳಲ್ಲಿ ಹೆಚ್ಚು ಹೊಂದಿಕೊಳ್ಳಬಲ್ಲವು” ಎಂದು ಅವರ ಟ್ವೀಟ್ ಓದುತ್ತದೆ. ಚಹಾ ತೋಟಗಳು ಮತ್ತು ಕಬ್ಬಿನ ತೋಟಗಳಲ್ಲಿ ಅವು ತುಂಬಾ ಇರುತ್ತವೆ. ಚಹಾ ತೋಟಗಳು ಅವರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಸುಲಭ ಆಹಾರ. ನೆರಳು. ಆವಾಸಸ್ಥಾನ. ಮತ್ತು ಮರಿಗಳನ್ನು ಬಹಳ ಸುಲಭವಾಗಿ ಸಾಕಬಹುದು. ಭವ್ಯವಾದ ಜೀವಿಗಳು. ಚಿತ್ರಗಳು ನನ್ನದು, ”ಎಂದು ಅವರು ಹೇಳಿದ್ದಾರೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಭಾರತ ಸಂಬಂಧ ಕೊನೆಗೊಳಿಸಿದರೆ ಕೆನಡಾಕ್ಕೇ ಆರ್ಥಿಕ ಹೊಡೆತ..? : ಕೆನಡಾದಲ್ಲಿ ಪಂಜಾಬ್ ವಿದ್ಯಾರ್ಥಿಗಳ ವಾರ್ಷಿಕ ಶೈಕ್ಷಣಿಕ ಹೂಡಿಕೆಯೇ 68,000 ಕೋಟಿ ರೂ...!

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement