ಸಿಎನ್‌ಎನ್ ಸುದ್ದಿ ಚಾನೆಲ್‌ ಆ್ಯಂಕರ್ ತಲೆ ಸ್ಕಾರ್ಫ್ ಧರಿಸಲು ನಿರಾಕರಿಸಿದ ನಂತರ ಸಂದರ್ಶನವನ್ನೇ ‘ರದ್ದು’ಗೊಳಿಸಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ…!

ನವದೆಹಲಿ: ಗುರುವಾರ ಸರಣಿ ಟ್ವೀಟ್‌ಗಳಲ್ಲಿ, ಸಿಎನ್‌ಎನ್ ಬ್ರಾಡ್‌ಕಾಸ್ಟರ್ ಕ್ರಿಸ್ಟಿಯಾನೆ ಅಮನ್‌ಪೋರ್ ಅವರು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ತಾನು ತಲೆ ಸ್ಕಾರ್ಫ್ ಧರಿಸಲು ನಿರಾಕರಿಸಿದ ನಂತರ ಕೊನೆಯ ಕ್ಷಣದಲ್ಲಿ ಚಾನೆಲ್‌ಗೆ ನೀಡಿದ ಸಂದರ್ಶನವನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ಟೆಹ್ರಾನ್‌ನ ನೈತಿಕತೆಯ ಪೊಲೀಸರು ಬಂಧಿಸಿದ ನಂತರ 22 ವರ್ಷದ ಮಹಿಳೆ ಮಹ್ಸಾ ಅಮಿನಿ ಸಾವಿನ ನಂತರ … Continued

ಜ್ಞಾನವಾಪಿ ಪ್ರಕರಣ: ಶಿವಲಿಂಗದ ಕಾರ್ಬನ್-ಡೇಟಿಂಗ್ ಅರ್ಜಿ ಪರಿಗಣಿಸಿದ ಕೋರ್ಟ್‌, ಆಕ್ಷೇಪಣೆ ಸಲ್ಲಿಸಲು ಮಸೀದಿ ಆಡಳಿತಕ್ಕೆ ಕೋರ್ಟ್ ಸೂಚನೆ

ವಾರಾಣಸಿ : ಇಲ್ಲಿನ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾದ ಶಿವಲಿಂಗದ ಕಾರ್ಬನ್ ಡೇಟಿಂಗ್ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ಗುರುವಾರ ಪರಿಗಣಿಸಿದೆ ಮತ್ತು ಮುಂದಿನ ವಿಚಾರಣೆಯ ದಿನಾಂಕದೊಳಗೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಮಸೀದಿ ಆಡಳಿತಕ್ಕೆ ಸೂಚಿಸಿದೆ. ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 29 ಎಂದು ನ್ಯಾಯಾಧೀಶ … Continued

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ವೇಳಾಪಟ್ಟಿ ಪ್ರಕಟ: ಸ್ಪರ್ಧೆಗೆ ಅನೇಕ ಹೆಸರುಗಳು ಚಾಲ್ತಿಗೆ

ನವದೆಹಲಿ: ಅಕ್ಟೋಬರ್‌ 17ರಂದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ನಡೆಯಲಿರುವ ಚುನಾವಣೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಕಣದಲ್ಲಿ ಇಬ್ಬರು ಪ್ರಮುಖ ಅಭ್ಯರ್ಥಿಗಳು ಈಗ ಸೊರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಅದರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಕಂಡುಬರುತ್ತಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮತ್ತು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಹೆಸರು ಈಗ ಮುಂಚೂಣಿಯಲ್ಲಿವೆ. ರಾಹುಲ್ ಗಾಂಧಿ … Continued

ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಬೆಂಗಳೂರು: ಸರ್ಕಾರಿ ಭೂಮಿಯನ್ನು ಕೃಷಿಗಾಗಿ ಬಳಕೆ ಮಾಡಿದ ರೈತರಿಗೆ ಭೂ ಕಬಳಿಕೆ ಅಧಿನಿಯಮದ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಉದ್ದೇಶ ಹೊಂದಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕಯನ್ನು ಕೆಲವು ತಿದ್ದುಪಡಿಯೊಂದಿಗೆ ಗುರುವಾರ  ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು. ಬುಧವಾರ ವಿಧೇಯಕವನ್ನು ಮಂಡಿಸಲಾಗಿತ್ತು. ಆದರೆ ವಿಧೇಯಕಕ್ಕೆ ವಿರೋಧ ವ್ಯಕ್ತವಾಗಿತ್ತು. ಆಡಳಿತ ಪಕ್ಷದ ಶಾಸಕ ಗೂಳಿಹಟ್ಟಿ ಶೇಖರಹಾಗೂ … Continued

ಭಾಷಣದ ನಂತರ ವೇದಿಕೆಯಲ್ಲಿ ಕಳೆದುಹೋದಂತೆ ಕಂಡುಬಂದ ಅಮೆರಿಕ ಅಧ್ಯಕ್ಷ ಬೈಡನ್‌: ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ವೀಡಿಯೋ | ವೀಕ್ಷಿಸಿ

ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ನಂತರ ವೇದಿಕೆಯಲ್ಲಿ ಕಳೆದುಹೋದಂತೆ ಕಂಡುಬಂದರು. ವೈರಲ್ ವೀಡಿಯೊದಲ್ಲಿ, ಅಮೆರಿಕ ಅಧ್ಯಕ್ಷರು ನ್ಯೂಯಾರ್ಕ್‌ನಲ್ಲಿ ಗ್ಲೋಬಲ್ ಫಂಡ್‌ನ ಏಳನೇ ಮರುಪೂರಣ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕಂಡುಬಂದಿದೆ. ಭಾಷಣದ ನಂತರ ಅವರು ಹೊರಡಲು ತಿರುಗಿದರು, ಆದರೆ ನಿಂತಲ್ಲಿಯೇ  ಎಲ್ಲೋ ಕಳೆದುಹೋದಂತೆ ಕಾಣುತ್ತಿದ್ದರು. ವೇದಿಕೆಯಿಂದ ಕೆಳಗಿಳಿಯಬೇಕೇ ಬೇಡವೇ ಎಂದು ಅಮೆರಿಕ … Continued

ಪಿಎಫ್ಐ ಮುಖಂಡರ ಮನೆ ಮೇಲೆ ಎನ್‌ಐಎ ದಾಳಿ: ಹುಬ್ಬಳ್ಳಿಯಲ್ಲಿ ಪ್ರತಿಭಟನೆ, ಕೆಲವರು ವಶಕ್ಕೆ

ಹುಬ್ಬಳ್ಳಿ: ಎನ್‌ಐಎದವರು ಪಿಎಫ್ಐ ಹಾಗೂ ಎಸ್ ಡಿಪಿಐ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದನ್ನು ಖಂಡಿ ಪಿಎಫ್‌ಐ ಕಾರ್ಯಕರ್ತರು ಗೋಬ್ಯಾಕ್ ಎನ್ ಐಎ ಎಂದು ಘೋಷಣೆ ಕೂಗಿ ನಗರದ ಕೌಲಪೇಟೆಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕುಮ್ಮಕ್ಕಿನಿಂದಾಗಿ ಎನ್‌ಐಎದವರು ಪಿಎಫ್ಐ ಹಾಗೂ ಎಸ್‌ಡಿಪಿಐ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದ್ದಾರೆಂದು … Continued

ಕೇರಳದ ಸಿಪಿಐ(ಎಂ) ಕಚೇರಿ ಮೇಲೆ ಸ್ಫೋಟಕ ಎಸೆದ ಆರೋಪ: ಯುವ ಕಾಂಗ್ರೆಸ್ ಮುಖಂಡನ ಬಂಧನ

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿರುವ ಸಿಪಿಐ(ಎಂ) ರಾಜ್ಯ ಪ್ರಧಾನ ಕಚೇರಿಯಾದ ಎಕೆಜಿ ಸೆಂಟರ್‌ನಲ್ಲಿ ಸ್ಫೋಟಕವನ್ನು ಎಸೆದ ಸುಮಾರು ಮೂರು ತಿಂಗಳ ನಂತರ, ಪೊಲೀಸರು ಗುರುವಾರ ಯುವ ಕಾಂಗ್ರೆಸ್ ಕಾರ್ಯಕರ್ತ ಜಿತಿನ್ ಕಳತ್ತೂರ್ ಅವರನ್ನು ಬಂಧಿಸಿದ್ದಾರೆ. ಕಳತ್ತೂರ್ ಅವರು ತಿರುವನಂತಪುರಂ ಜಿಲ್ಲೆಯ ಅತ್ತಿಪ್ರದಲ್ಲಿ ಯುವ ಕಾಂಗ್ರೆಸ್‌ನ ಮಂಡಲಂ ಅಧ್ಯಕ್ಷರಾಗಿದ್ದು, ಅವರನ್ನು ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಪರಾಧ … Continued

ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗೆ ಸ್ಪರ್ಧೆ ಖಚಿತಪಡಿಸಿದ ಅಶೋಕ್ ಗೆಹ್ಲೋಟ್: ಆದ್ರೆ ರಾಜಸ್ಥಾನದಿಂದ ದೂರ ಉಳಿಯಲ್ವಂತೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವುದನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಖಚಿತಪಡಿಸಿದ್ದಾರೆ. ಅಶೋಕ್ ಗೆಹ್ಲೋಟ್, ತಾನು ಎಂದಿಗೂ ರಾಜಸ್ಥಾನದಿಂದ ದೂರ ಉಳಿಯುವುದಿಲ್ಲ ಮತ್ತು ರಾಜ್ಯಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ನಾಮಪತ್ರ ಸಲ್ಲಿಸುತ್ತೇನೆ, ನಂತರ ಇತರ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಮತ್ತು ಚುನಾವಣೆಯೂ ನಡೆಯಬಹುದು. ಇದೆಲ್ಲವೂ ಭವಿಷ್ಯದ ಮೇಲೆ ಅವಲಂಬಿತವಾಗಿದೆ ಎಂದು … Continued

ದೆಹಲಿ ಮಸೀದಿಗೆ ಭೇಟಿ ನೀಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ : ಅವರನ್ನು “ರಾಷ್ಟ್ರ ಪಿತ” ಎಂದು ಬಣ್ಣಿಸಿದ ಉನ್ನತ ಧರ್ಮಗುರು

ನವದೆಹಲಿ: ಸಮುದಾಯವನ್ನು ಸಂಪರ್ಕಿಸುವ ಭಾಗವಾಗಿ ಮುಸ್ಲಿಂ ಮುಖಂಡರನ್ನು ಭೇಟಿಯಾಗಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ದೆಹಲಿಯ ಮಸೀದಿ ಮತ್ತು ಮದರಸಾವೊಂದಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳು ಮತ್ತು ಮುಖ್ಯ ಧರ್ಮಗುರುಗಳೊಂದಿಗೆ ಸಂವಾದ ನಡೆಸಿದ್ದಾರೆ. ಮೋಹನ್‌ ಭಾಗವತ್ ಅವರನ್ನು ರಾಷ್ಟ್ರಪಿತ ಎಂದು ಕರೆದ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸ್, … Continued

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರದ ದರ ಪರಿಷ್ಕರಣೆ

ಸುಬ್ರಹ್ಮಣ್ಯ: ರಾಜ್ಯದ ಹೆಸರಾಂತ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರ ಸೇವಾ ದರ ಪರಿಷ್ಕರಿಸಲಾಗಿದೆ. ಈಗ 4,200 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಮೊದಲಿದ್ದ ದರಕ್ಕಿಂತ ಒಂದು ಸಾವಿರ ರೂಪಾಯಿ ಹೆಚ್ಚಳ ಆಗಿದೆ. ಮೊದಲು 3,200 ರೂ.ಗಳಿತ್ತು. ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೊಳಪಡುವ ದೇವಳದಲ್ಲಿ ಸರ್ಪ ದೋಷ … Continued