ತಿರುಪತಿ ಭಕ್ತಾದಿಗಳಿಗೆ ಸಿಹಿ ಸುದ್ದಿ ನೀಡಿದ ಟಿಟಿಡಿ ; ತಿಮ್ಮಪ್ಪನ ದರ್ಶನ ಆಗಲಿದೆ ಇನ್ನಷ್ಟು ಸುಲಭ

ತಿರುಪತಿ: ತಿರುಪತಿಯಲ್ಲಿ ವಿಐಪಿಗಳ ದರ್ಶನದ ಸಮಯವನ್ನು ಬದಲಾಯಿಸುವ ಮೂಲಕ ಸಾಮಾನ್ಯ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಳ್ಳಲು ತಿರುಪತಿ ತಿರುಮಲ ಟ್ರಸ್ಟ್‌ (ಟಿಟಿಡಿ) ನಿರ್ಧಾರ ಕೈಗೊಂಡಿದೆ.
ವಿಐಪಿಗಳ ದರ್ಶನದ ಸಮಯವನ್ನು ಬೆಳಗ್ಗೆ 5:30ರ ಬದಲಾಗಿ 10 ಗಂಟೆಗೆ ಆರಂಭಿಸಲು ಟಿಟಿಡಿ ನಿರ್ಧಾರ ಕೈಗೊಂಡಿದೆ.ತಿರುಮಲದಲ್ಲಿ ಶನಿವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ದೇವಸ್ಥಾನದಲ್ಲಿನ ನಿತ್ಯದ ಧಾರ್ಮಿಕ ವಿಧಿ-ವಿಧಾನಗಳ ಕಾರಣಗಳಿಗಾಗಿ ಗಣ್ಯ ವ್ಯಕ್ತಿಗಳು ಬೆಳಿಗ್ಗೆ 8 ಇಲ್ಲವೇ 9 ಗಂಟೆ ವರೆಗೆ ದೇವರ ದರ್ಶನ ಪಡೆಯುತ್ತಿದ್ದರು. ಈ ಕಾರಣಗಳಿಂದಾಗಿಯೂ ಸಾಮಾನ್ಯ ಯಾತ್ರಿಗಳಿಗೆ ಸಮಸ್ಯೆಯಾಗುತ್ತಿತ್ತು. ಗಣ್ಯರು ದೇವರ ದರ್ಶನ ಮುಗಿಸಿ ಬರುವವರೆಗೆ ಸಾಮಾನ್ಯ ಯಾತ್ರಿಗಳು ಗಂಟೆಗಟ್ಟಲೆ ಕಂಪಾರ್ಟ್‌ಮೆಂಟ್‌ಗಳಲ್ಲಿ ಮತ್ತು ಸರದಿಯಲ್ಲಿ ಕಾಯಬೇಕಾಗುತ್ತಿತ್ತು. ಈ ನಿಯಮದಿಂದ ಜನಸಾಮಾನ್ಯರು ದರ್ಶನ ಪಡೆಯಲು ವಿಳಂಬವಾಗುತ್ತಿತ್ತು.

ಹೀಗಾಗಿ ಅಕ್ಟೋಬರ್ ತಿಂಗಳಿನಿಂದ ತಿರುಪತಿಯಲ್ಲಿ ಹೊಸ ನಿಯಮ ಜಾರಿಗೊಳಿಸಲಾಗುತ್ತದೆ ಹಾಗೂ ವಿಐಪಿಗಳ ದರ್ಶನದ ಸಮಯವನ್ನು ಬೆಳಗ್ಗೆ 5:30ರ ಬದಲಾಗಿ 10 ಗಂಟೆಗೆ ಆರಂಭಿಸಲಿದೆ. ಅಕ್ಟೋಬರ್‌ನಿಂದ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಅಲ್ಲದೇ ಭಕ್ತಾದಿಗಳಿಗೆ ವಸತಿ ಸೌಲಭ್ಯವನ್ನು ಹಂಚಿಕೆ ಮಾಡುವ ವ್ಯವಸ್ಥೆಯನ್ನು ತಿರುಮಲದಿಂದ ತಿರುಪತಿಗೆ ಸ್ಥಳಾಂತರಿಸಲು ಟಿಟಿಡಿ ನಿರ್ಧರಿಸಿದೆ. ಯಾತ್ರಿಗಳು ತಿರುಮಲಕ್ಕೆ ಬಂದಾದ ಮೇಲೆ, ಕೋಣೆಗಳು ಖಾಲಿಯಾಗಿ, ತಮಗೆ ಹಂಚಿಕೆಯಾಗುವವರೆಗೆ ಕಾಯಬೇಕಾಗುತ್ತಿತ್ತು. ಈ ತೊಂದರೆಯನ್ನು ತಪ್ಪಿಸುವ ಸಲುವಾಗಿ ವಸತಿ ಸೌಲಭ್ಯ ಹಂಚಿಕೆ ಮಾಡುವ ಕೇಂದ್ರೀಯ ವ್ಯವಸ್ಥೆಯ ಕಚೇರಿಯನ್ನು ತಿರುಪತಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಅಕ್ಟೋಬರ್ ನಂತರ ಭಕ್ತಾದಿಗಳು ಈ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement