ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮುಗಿಯದ ಬಿಕ್ಕಟ್ಟು : ಮಲ್ಲಿಕಾರ್ಜುನ ಖರ್ಗೆ- ಮಾಕನ್‌ ಭೇಟಿ ಮಾಡದೆ ದೂರವೇ ಉಳಿದ ಗೆಹ್ಲೋಟ್ ಬೆಂಬಲಿಗ 90 ಶಾಸಕರು…!

ಜೈಪುರ: ಮುಂದಿನ ಮುಖ್ಯಮಂತ್ರಿ ಯಾರೆಂಬುದರ ಕುರಿತು ರಾಜಸ್ಥಾನ ಕಾಂಗ್ರೆಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಇನ್ನೂ ಮುಂದುವರಿಯುವ ಸಾಧ್ಯತೆಯಿದೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿಷ್ಠ ಶಾಸಕರು ಕಾಂಗ್ರೆಸ್‌ನ ಕೇಂದ್ರ ನಾಯಕರ ಭೇಟಿಗೆ ತಕ್ಷಣವೇ ಲಭ್ಯವಿಲ್ಲ ಎಂದು ತಿಳಿಸಲಾಗಿದೆ…!
ಗೆಹ್ಲೋಟ್‌ಗೆ ನಿಷ್ಠರಾಗಿರುವ 90 ಶಾಸಕರು ತಮ್ಮ ಕಟ್ಟರ್‌ ಪ್ರತಿಸ್ಪರ್ಧಿ ಸಚಿನ್ ಪೈಲಟ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ ನಂತರ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಹಿರಿಯ ಕಾಂಗ್ರೆಸ್ ನಾಯಕರಾದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಜೈಪುರ ತಲುಪಿದ್ದರು. ಬಿಕ್ಕಟ್ಟಿನಿಂದ ಹೊರಬರಲು ಮಾರ್ಗವನ್ನು ಕಂಡುಕೊಳ್ಳಲು ಅವರು ಒಬ್ಬೊಬ್ಬ ಶಾಸಕರನ್ನು ಮುಖಾಮುಖಿ ಭೇಟಿಯಾಗಬೇಕಿತ್ತು.
ಆದರೆ, ಅವರನ್ನು ಭೇಟಿ ಮಾಡಲು ಶಾಸಕರು ಮಾತ್ರ ಅಲಭ್ಯರಾಗಿದ್ದಾರೆ. ಕೇಂದ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಜಯ ಮಾಕನ್‌ ಅವರನ್ನು ಭೇಟಿ ಮಾಡಲು ಶಾಸಕರು ಮುಕ್ತರಾಗಿದ್ದಾರೆ, ಆದರೆ ಇಂದಿನಿಂದ ಆರಂಭವಾದ ನವರಾತ್ರಿಗಾಗಿ ಮನೆಗೆ ತೆರಳಬೇಕಾಗಿದೆ ಎಂದು ಹಿರಿಯ ಶಾಸಕ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿದ್ದಾರೆ.

ಖರ್ಗೆ ಮತ್ತು ಗೆಹ್ಲೋಟ್ ದೆಹಲಿಗೆ ಮರಳುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಗೆಹ್ಲೋಟ್ ಗೆದ್ದರೆ ಮುಖ್ಯಮಂತ್ರಿ ಹುದ್ದೆಗೆ ಸಚಿನ್‌ ಪೈಲಟ್‌ ಹೈಕಮಾಂಡ್ ಆಯ್ಕೆಯಾಗಿದ್ದಾರೆ. ಶಶಿ ತರೂರ್ ಮತ್ತು ಮನೀಶ್ ತಿವಾರಿಯಂತಹ ಪ್ರಮುಖ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್‌ ಅವರು ರಾಹುಲ್‌ ಗಾಂಧಿ ಅವರ ಅಭ್ಯರ್ಥಿಯಾಗಿರುವುದರಿಂದ ಮುಂಚೂಣಿಯಲ್ಲಿದ್ದಾರೆ.
ಗೆಹ್ಲೋಟ್ ಅವರಿಗೆ ಸಚಿನ್‌ ಪೈಲಟ್‌ಗಾಗಿ ಮುಖ್ಯಮಂತ್ರಿ ಸ್ಥಾನ ತೆರವು ಮಾಡಲು ಇಷ್ಟವಿರಲಿಲ್ಲ ಮತ್ತು ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದರೂ ಆ ಹುದ್ದೆಯಲ್ಲಿ ಮುಂದುವರಿಯುವ ಇಂಗಿತವನ್ನು ಈ ಹಿಂದೆ ವ್ಯಕ್ತಪಡಿಸಿದ್ದರು.ಆದಾಗ್ಯೂ, ಈ ವರ್ಷ ಉದಯಪುರದಲ್ಲಿ ನಡೆದ ಪಕ್ಷದ ಉನ್ನತ ಸಭೆಯಲ್ಲಿ ನಿರ್ಧರಿಸಿದಂತೆ ಪಕ್ಷವು “ಒಬ್ಬ ವ್ಯಕ್ತಿ ಒಂದು ಹುದ್ದೆ” ನಿಯಮಕ್ಕೆ ಅಂಟಿಕೊಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಿ ಹೇಳಿದ ನಂತರ ಅವರು ತಮ್ಮ ನಿಲುವನ್ನು ಬದಲಾಯಿಸಿದರು.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

ನಿನ್ನೆಯ ಬೆಳವಣಿಗೆಗಳ ನಡುವೆ, ಶಾಸಕರು ಕೋಪಗೊಂಡಿದ್ದಾರೆ ಮತ್ತು ಮುಖ್ಯಮಂತ್ರಿ ಹುದ್ದೆಗೆ ಪೈಲಟ್ ಅವರನ್ನು ಬೆಂಬಲಿಸಲು ಸಿದ್ಧರಿಲ್ಲದ ಕಾರಣ ಈ ವಿಷಯವು ಈಗ ತನ್ನ ಕೈಯಲ್ಲಿಲ್ಲ ಎಂದು ಗೆಹ್ಲೋಟ್ ಅವರು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರಿಗೆ ತಿಳಿಸಿದ್ದಾರೆ. ಅವರ ಹೇಳಿಕೆಯ ಹೊರತಾಗಿಯೂ, ಅವರ ಆಶೀರ್ವಾದವಿಲ್ಲದೆ ಶಾಸಕರು ರಾಜೀನಾಮೆ ವರೆಗೂ ಹೋಗುವುದು ಅಸಂಭವ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಜೈಪುರ ಕಾಂಗ್ರೆಸ್‌ನಲ್ಲಿ ನಾಟಕೀಯ ಬೆಳವಣಿಗೆಗಳು ನಿನ್ನೆ ಸಂಜೆ ಪ್ರಾರಂಭವಾಯಿತು. ರಾಜಸ್ಥಾನದ ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆ ನಡೆಸಿ ನಿರ್ಣಯ ಅಂಗೀಕರಿಸಿ ಮುಂದಿನ ಮುಖ್ಯಮಂತ್ರಿ ಕುರಿತು ಹೈಕಮಾಂಡ್ ನಿರ್ಧಾರವನ್ನು ಅನುಸರಿಸುವುದಾಗಿ ಒಪ್ಪಿಗೆ ಸೂಚಿಸಬೇಕಿತ್ತು. ಆದರೆ ಪ್ರಮುಖ ವಿಚಲನದಲ್ಲಿ, ಗೆಹ್ಲೋಟ್‌ಗೆ ನಿಷ್ಠರಾಗಿರುವ ಶಾಸಕರು ಶಾಂತಿ ಧರಿವಾಲ್ ಅವರ ನಿವಾಸಕ್ಕೆ ತೆರಳಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲು ನಿರಾಕರಿಸಿದರು.
ಹಾಗೂ 2020 ರಲ್ಲಿ ಪೈಲಟ್ ನೇತೃತ್ವದ ದಂಗೆಯು ಸರ್ಕಾರವನ್ನು ಉರುಳಿಸುವುದಾಗಿ ಬೆದರಿಕೆ ಹಾಕಿದಾಗ ಅವರ ಬೆಂಬಲಕ್ಕೆ ನಿಂತ ಗೆಹ್ಲೋಟ್ ಅವರ ನಿಷ್ಠಾವಂತರಲ್ಲೇ ಒಬ್ಬರನ್ನು ಹೊಸ ಮುಖ್ಯಮಂತ್ರಿ ಮಾಡಬೇಕು ಎಂದು ಅವರು ನಿರ್ಣಯ ಅಂಗೀಕರಿಸಿದರು. ಪಕ್ಷದ ಅಧ್ಯಕ್ಷರ ಚುನಾವಣೆ ಮುಗಿಯುವವರೆಗೆ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆ ನಡೆಸಬಾರದು ಎಂದು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

92 ಶಾಸಕರು ತಮ್ಮ ರಾಜೀನಾಮೆಯನ್ನು ಸಲ್ಲಿಸಲು ವಿಧಾನಸಭಾ ಸ್ಪೀಕರ್ ಸಿ.ಪಿ. ಜೋಶಿ ಅವರ ನಿವಾಸಕ್ಕೆ ಹೋದರು. ಸ್ಪಷ್ಟವಾಗಿ ತಮ್ಮ ಬೇಡಿಕೆಯನ್ನು ಹೈಕಮಾಂಡ್ ಒಪ್ಪುವಂತೆ ಮಾಡುವ ಒತ್ತಡ ತಂತ್ರವಾಗಿತ್ತು. ತಡರಾತ್ರಿವರೆಗೂ ಶಾಸಕರು ಸ್ಪೀಕರ್ ನಿವಾಸದಲ್ಲಿಯೇ ಇದ್ದರು. ಏತನ್ಮಧ್ಯೆ, ಅಜಯ ಮಾಕನ್, ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿನ್‌ ಪೈಲಟ್ ಅವರು ಮುಖ್ಯಮಂತ್ರಿಯನ್ನು ಭೇಟಿಯಾದರು.
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 107 ಶಾಸಕರನ್ನು ಹೊಂದಿದೆ ಮತ್ತು 13 ಸ್ವತಂತ್ರರ ಬೆಂಬಲವನ್ನು ಹೊಂದಿದೆ. ಈ ಸ್ವತಂತ್ರರಲ್ಲಿ ಹೆಚ್ಚಿನವರು ಅಸೋಕ ಗೆಹ್ಲೋಟ್ ಅವರನ್ನು ಬೆಂಬಲಿಸುವ ಮಾಜಿ ಕಾಂಗ್ರೆಸ್ಸಿಗರು. ಈ ಶಾಸಕರು ನಿನ್ನೆ ಸಂಜೆ ಶಾಸಕ ಧರಿವಾಲ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದರು.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement