ಜಿಂಕೆಯ ಚಮತ್ಕಾರಿಕ ಸಾಹಸ…: ರಸ್ತೆ ದಾಟುವಾಗ ಅಡ್ಡಬಂದ ಚಲಿಸುವ ಕಾರಿನ ಮೇಲಿಂದ ಜಿಗಿದು ಡಿಕ್ಕಿಯಿಂದ ತಪ್ಪಿಸಿಕೊಂಡ ಜಿಂಕೆ | ವೀಕ್ಷಿಸಿ

ಕ್ಯಾಮೆರಾದಲ್ಲಿ ಸೆರೆಯಾದ ಆಕರ್ಷಕ ಮತ್ತು ಅಪರೂಪದ ಕ್ಷಣವೊಂದರಲ್ಲಿ ಜಿಂಕೆಯೊಂದು ರಾತ್ರಿ ಸಮಯದಲ್ಲಿ ರಸ್ತೆ ದಾಟುತ್ತಿರುವಾಗ ಅಪಘಾತದಿಂದ ಪಾರಾಗಲು ಚಲಿಸುತ್ತಿದ್ದ ಕಾರಿನ ಮೇಲಿಂದ ಜಿಗಿದು ಪಾರಾಗಿರುವುದು ಕಂಡುಬಂದಿದೆ. ಘಟನೆಯನ್ನು ಮಿಚಿಗನ್ ಸ್ಟೇಟ್ ಪೊಲೀಸ್ ಕ್ರೂಸರ್ ಡ್ಯಾಶ್‌ಕ್ಯಾಮ್ ಸೆರೆಹಿಡಿದಿದೆ. ವೀಡಿಯೊದಲ್ಲಿ, ಪ್ರಾಣಿಯು ರಸ್ತೆಗೆ ಅಡ್ಡಲಾಗಿ ಕಾರಿನ ಮೇಲೆ ನೆಗೆದು ಸ್ಪ್ರಿಂಟ್ ಮಾಡುವುದನ್ನು ಮತ್ತು ಜೋರಾಗಿ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ಪಾರಾಗಿ ಹೋಗುತ್ತಿರುವುದು ಕಂಡುಬಂದಿದೆ.

ಎರಡು ಜಿಂಕೆಗಳು ವಾಹನಗಳನ್ನು ಸುರಕ್ಷಿತವಾಗಿ ದಾಟುವಲ್ಲಿ ಯಶಸ್ವಿಯಾದವು. ಆದರೆ ಈ ಜಿಂಕೆ ದಾಟುವಾಗಲೇ ಕಾರು ಅಡ್ಡ ಬಂದಿದ್ದರಿಂದ ಜಿಂಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಕಷ್ಟು ಚಮತ್ಕಾರಿಕ ಸಾಹಸ ಮಾಡಿ ಕಾರಿನ ಮೇಲಿಂದ ಜಿಗಿದು ಸಂಭವನೀಯ ಅಪಘಾತದಿಂದ ತಪ್ಪಿಸಿಕೊಂಡಿದೆ.
ವಾಹನ ಚಲಾಯಿಸುವಾಗ ಜಿಂಕೆಗಳನ್ನು ತಪ್ಪಿಸುವುದು ಹೇಗೆ ಎಂದು ಮಿಚಿಗನ್ ರಾಜ್ಯ ಪೊಲೀಸರು ನಿವಾಸಿಗಳಿಗೆ ಸಲಹೆ ನೀಡಿದ್ದಾರೆ.

ಜಿಂಕೆಗಳ ಎತ್ತರದ ಜಿಗಿತದಿಂದ ಇಂಟರ್ನೆಟ್‌ ಬಳಕೆದಾರರು ಆಕರ್ಷಿತರಾದರು. ” ಜಿಂಕೆ ಕಾರನ್ನು ದಾಟಿ ಜಿಗಿದಿರುವುದು ಪ್ರಬಲವಾದ ಪ್ರಭಾವಶಾಲಿ ಜಿಗಿತವಾಗಿದೆ, ರಸ್ತೆ ದಾಟುತ್ತಿರುವ ಇತರ ಜಿಂಕೆಗಳು ಬಹುಶಃ ‘ಗೀಜ್ ವಾಟ್ ಎ ಶೋಆಫ್’ ಎಂದು ಯೋಚಿಸುತ್ತಿದ್ದವು” ಎಂದು ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ಬರೆದಿದ್ದಾರೆ, “ಆ ಜಿಂಕೆ ಖಂಡಿತವಾಗಿಯೂ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ನಮಗಿಂತ ಎಷ್ಟೋ ಮುಂದಿದೆ ಎಂದು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement