ನನ್ನನ್ನು ಪ್ಯಾಕೇಜ್ ಸ್ಟಾರ್ ಎಂದು ಕರೆದರೆ ನಾನು ನಿಮಗೆ ಚಪ್ಪಲಿಯಿಂದ ಹೊಡಿತೀನಿ : ಚಪ್ಪಲಿ ಕೈಯಲ್ಲಿ ಹಿಡಿದು ವೈಎಸ್‌ಆರ್‌ ಕಾಂಗ್ರೆಸ್‌ ವಿರುದ್ಧ ಗುಡುಗಿದ ತೆಲುಗು ಸೂಪರ್‌ ಸ್ಟಾರ್‌ ಪವನ ಕಲ್ಯಾಣ್ | ವೀಕ್ಷಿಸಿ

ಹೈದರಾಬಾದ್‌: ತೆಲುಗು ಸೂಪರ್‌ ಸ್ಟಾರ್‌ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ತಮನ್ನು ಮತ್ತೆ ‘ಪ್ಯಾಕೇಜ್ ಸ್ಟಾರ್’ ಎಂದು ಕರೆದರೆ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸದಸ್ಯರಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಎಚ್ಚರಿಸಿದ್ದಾರೆ.
ಮಂಗಳವಾರ ರ್ಯಾಲಿಯಲ್ಲಿ ಮಾತನಾಡಿದ ಕಲ್ಯಾಣ್, ತಮ್ಮ ವಿರುದ್ಧ ಯಾವುದೇ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡದಂತೆ ವೈಎಸ್‌ಆರ್‌ಸಿಪಿಗೆ ಎಚ್ಚರಿಕೆ ನೀಡಿದರು. ಹಾಗೂ ಸಭಿಕರನ್ನುದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್ ಚಪ್ಪಲಿ ಎತ್ತಿ ಹಿಡಿದು, ‘ನನ್ನನ್ನು ಪ್ಯಾಕೇಜ್ ಸ್ಟಾರ್’ ಎಂದು ಕರೆಯುವವರಿಗೆ ನಾನು ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಎಚ್ಚರಿಸಿದರು.
ನನ್ನನ್ನು ಪ್ಯಾಕೇಜ್ ಸ್ಟಾರ್ ಎಂದು ಕರೆಯಲು ಅವರು ಯಾರು? ಇದು ತಮಾಷೆಯೇ? ನನ್ನನ್ನು ಮತ್ತೆ ಪ್ಯಾಕೇಜ್ ಸ್ಟಾರ್ ಎಂದು ಕರೆಯಿರಿ. ನಾನು ನಿಮ್ಮ ಹಲ್ಲುಗಳನ್ನು ಮುರಿದು ಚಪ್ಪಲಿಯಿಂದ ಹೊಡೆಯುತ್ತೇನೆ, ನಾನು ನಿಮ್ಮ ಮೇಲೆ ಬಹಳ ದಿನಗಳಿಂದ ಕರುಣೆ ತೋರಿಸಿದ್ದೇನೆ. ಈಗ ಸಮಯ ಬಂದಿದೆ. ನಿಮ್ಮೊಂದಿಗೆ (ವೈಎಸ್‌ಆರ್‌ಸಿಪಿ) ಕ್ರಿಮಿನಲ್‌ಗಳು, ರೌಡಿಗಳು ಮತ್ತು ಗುಂಡಾಗಳು ಇದ್ದಾರೆಯೇ? ಅದಕ್ಕೆ ನಾನು ಕ್ಯಾರ್‌ ಮಾಡುವುದಿಲ್ಲ, ನಾನು ಅವರನ್ನು ನನ್ನ ಕೈಯಿಂದಲೇ ಪುಡಿಮಾಡುತ್ತೇನೆ ಎಂದು ತುಲುಗು ಸೂಪರ್‌ ಸ್ಟಾರ್‌ ಸಿನೆಮಾ ಸ್ಟೈಲ್‌ನಲ್ಲಿ ಗುಡುಗಿದ್ದಾರೆ.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

ವಿಶಾಖಪಟ್ಟಣಂ ಪೊಲೀಸರು ಪವನ್‌ ಕಲ್ಯಾಣ ತಮ್ಮ ಹೋಟೆಲ್ ಕೊಠಡಿಯಿಂದ ಹೊರಬರದಂತೆ ಮತ್ತು ನಿಗದಿತ ಜನ ವಾಣಿ ಕಾರ್ಯಕ್ರಮವನ್ನು ನಡೆಸದಂತೆ ತಡೆದ ಕೆಲವೇ ದಿನಗಳಲ್ಲಿ ಅವರ ಈ ಹೇಳಿಕೆ ಬಂದಿದೆ. ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಅಧ್ಯಕ್ಷರು, ವೈಎಸ್‌ಆರ್‌ಸಿಪಿಯ ಸಚಿವರು, ನಾಗರಿಕರು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಅವರ ಬೆಂಬಲಿಗರು ಹಲ್ಲೆ ನಡೆಸಿದ ನಂತರ ಅವರು ಜನಸೇನಾ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದಾರೆ.

ಜಗನ್‌ ರೆಡ್ಡಿ ವಿರುದ್ಧ ಪವನ್‌ ಕಲ್ಯಾಣ, ಚಂದ್ರಬಾಬು ನಾಯ್ಡು ತಂಡ
ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ವಿಜಯವಾಡದಲ್ಲಿ ಪವನ್‌ ಕಲ್ಯಾಣ್‌ ಅವರನ್ನು ಭೇಟಿ ಮಾಡಿ ಜಗನ್‌ ಮೋಹನ್‌ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಶಾಖಪಟ್ಟಣಂನಲ್ಲಿ ಕಲ್ಯಾಣ್ ಅವರ ಬಂಧನವನ್ನು ಖಂಡಿಸಿದ ಅವರು, ವೈಎಸ್ಆರ್ ಕಾಂಗ್ರೆಸ್ ಕಾನೂನುಬಾಹಿರ ಚಟುವಟಿಕೆಗಳಿಗೆ ಆಶ್ರಯ ನೀಡುತ್ತಿದೆ ಮತ್ತು ವಿರೋಧ ಪಕ್ಷಗಳ ನಾಯಕರನ್ನು ಹತ್ತಿಕ್ಕಲು ಪೊಲೀಸರನ್ನು ಬಳಸುತ್ತಿದೆ ಎಂದು ಆರೋಪಿಸಿದರು. ಸಭೆಯ ಮೊದಲು, ನಾಯ್ಡು ಅವರು ಘಟನೆಯ ಬಗ್ಗೆ ವಿಚಾರಿಸಲು ಕಲ್ಯಾಣ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.
ಶನಿವಾರ ರಾತ್ರಿ ವಿಮಾನ ನಿಲ್ದಾಣದ ಘರ್ಷಣೆಯಿಂದ ತನ್ನ ಹೋಟೆಲ್ ಕೋಣೆಗೆ ಸೀಮಿತವಾದ ನಂತರ ಪವನ್‌ ಕಲ್ಯಾಣ್‌ ಅಂತಿಮವಾಗಿ ಸೋಮವಾರ ನಗರವನ್ನು ತೊರೆದರು. ಅವರು ತಮ್ಮ ಪಕ್ಷದ ಸದಸ್ಯರ ಬಂಧನವನ್ನು ತೀವ್ರವಾಗಿ ವಿರೋಧಿಸಿದರೆ, ವೈಎಸ್ಆರ್ ಕಾಂಗ್ರೆಸ್ ತಲೆಗೆ ಗಾಯವಾಗಿರುವ ವ್ಯಕ್ತಿಯ ಫೋಟೋವನ್ನು ಬಿಡುಗಡೆ ಮಾಡಿತು, ಇದು ತಮ್ಮ ಬೆಂಬಲಿಗರ ದಾಳಿಗೆ ಸಂಬಂಧಿಸಿದೆ ಎಂದು ಪ್ರತಿಪಾದಿಸಿತು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

3.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement