ಇನ್ಫಿ ನಾರಾಯಣಮೂರ್ತಿ ಅಳಿಯ, ಭಾರತದ ಮೂಲದ ರಿಷಿ ಸುನಕ್ ಬ್ರಿಟನ್‌ನ ನೂತನ ಪ್ರಧಾನಿ…! ‍

ಲಂಡನ್‌: ಭಾರತೀಯ ಮೂಲದ ರಿಷಿ ಸುನಕ್ ಅವರು ಬ್ರಿಟನ್‌ ಮುಂದಿನ ಪ್ರಧಾನ ಮಂತ್ರಿಯಾಗಿದ್ದಾರೆ….! ಲಿಜ್ ಟ್ರಸ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದ ದಿನಗಳ ನಂತರ ಆರ್ಥಿಕವಾಗಿ ತತ್ತರಿಸುತ್ತಿರುವ ರಾಷ್ಟ್ರವನ್ನು ಮುನ್ನಡೆಸುವ ಕಾರ್ಯವನ್ನು ರಿಷಿ ಸುನಕ್‌ ಅವರಿಗೆ ವಹಿಸಲಾಗಿದೆ. ಕೇವಲ 42ನೇ ವಯಸ್ಸಿನಲ್ಲಿ, ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಲಿರುವ ಅತ್ಯಂತ ಕಿರಿಯ ಮತ್ತು ಮೊದಲ ಅಶ್ವೇತ ವರ್ಣದ ವ್ಯಕ್ತಿಯಾಗಿದ್ದಾರೆ.
ಸುಮಾರು 200 ವರ್ಷಗಳಿಗೂ ಹೆಚ್ಚು ಕಾಲ ಭಾರತವನ್ನು ಆಡಳಿದ್ದ ಬ್ರಿಟನ್‌ಗೆ ಇದೀಗ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪ್ರಧಾನಿಯಾಗುತ್ತಿರುವುದು ವಿಶೇಷವಾಗಿದೆ.
ರಿಷಿ ಸುನಕ್ ಅವರು ಇನ್ಫೋಸಿಸ್ ಕಂಪನಿ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ(ಮಗಳ ಗಂಡ). ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳದಿರುವ ರಿಷಿ ಸುನಕ್ ಅವರಿಗೆ ಬದಲಾದ ಬೆಳವಣಿಗೆಯಲ್ಲಿ ಉನ್ನತ ಹುದ್ದೆ ಪಡೆಯುವಂತಾಗಿದೆ.

ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟಿನ ನಂತರ ಒಟ್ಟು ಬಲದ ಅರ್ಧಕ್ಕೂ ಹೆಚ್ಚು ಸಂಸದರು ಬ್ರಿಟನ್‌ನ ಟೋರಿ ನಾಯಕತ್ವಕ್ಕಾಗಿ ರಿಷಿ ಸುನಕ್ ಅವರು ಪ್ರಧಾನಿಯಾಗಲು ಬೆಂಬಲಿಸಿದರು. ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ರಿಷಿ ಸುನಕ್‌ ಗೆ ಬೆಂಬಲಿಸಿದರು ಹಾಗೂ
ಪ್ರತಿಸ್ಫರ್ಧಿ  ಸಂಸದೆ ಪೆನ್ನಿ ಮೊರ್ಡಾಂಟ್ ಅವರು ಸ್ಪರ್ಧೆಯಿಂದ ಹೊರಬಿದ್ದರು. ಅವರಿಗೆ ಕೇವಲ 28 ಸಂಸದರು ಆಸಕ್ತಿ ತೋರಿದರು. 198 ಸಂಸದರು ರಿಷಿ ಸುನಕ್‌ ಪರವಾಗಿದ್ದಾರೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

ದೊಡ್ಡ ಸವಾಲಿನ ಸಮಯದಲ್ಲಿ ನಾವು ಒಗ್ಗೂಡಬೇಕು. ನಮ್ಮ ಮುಂದಿನ ಪ್ರಧಾನಿಯಾಗಲು ನಮ್ಮ ಸಂಸದೀಯ ಪಕ್ಷದ ಬಹುಪಾಲು ಬೆಂಬಲ ರಿಷಿ ಸುನಕ್ ಅವರಿಗೆ ಇದೆ ಎಂಬುದು ಸ್ಪಷ್ಟವಾಗಿದೆ. ಬೋರಿಸ್ ಜಾನ್ಸನ್ ತಾವು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಪುನರಾಯ್ಕೆ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ರಿಷಿ ಸುನಕ್ ಅವರ ದಾರಿ ಸುಗಮವಾಗಿತ್ತು.
ಸೋಮವಾರ ಸಂಜೆ ರಿಷಿ ಸುನಕ್ ಅವರ ಅಧಿಕೃತ ಆಯ್ಕೆ ಬಗ್ಗೆ ಪ್ರಕಟಣೆ ಹೊರಬಿತ್ತು. ರಿಷಿ ಸುನಕ್ ಅವರು ಅಕ್ಟೋಬರ್‌ 28 ರಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ಹೇಳಿವೆ.
ದೇಶವು ಎದುರಿಸುತ್ತಿರುವ ಅಗಾಧವಾದ ಆರ್ಥಿಕ ಸವಾಲುಗಳ ಸಮಯದಲ್ಲಿ ಮತ್ತು ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ಸ್ಥಿರತೆಯನ್ನು ಬಯಸಿರುವ ಸಮಯದಲ್ಲಿ ರಿಷಿ ಸುನಕ್‌ ಅವರ ಆಯ್ಕೆಯು ಬಂದಿದೆ

4.3 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement