ವಿಶ್ವದ ಅತ್ಯಂತ ಕೊಳಕು ಮನುಷ್ಯ ಅಮೌ ಹಾಜಿ ನಿಧನ : ಕೆಲದಿನಗಳ ಹಿಂದೆ 60 ವರ್ಷಗಳ ನಂತರದಲ್ಲಿ ಮೊದಲ ಸ್ನಾನ ಮಾಡಿದ್ದ..!

ಟೆಹರಾನ್: ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನ ಮಾಡದೇ ಇದ್ದುದಕ್ಕಾಗಿ “ವಿಶ್ವದ ಅತ್ಯಂತ ಕೊಳಕು ಮನುಷ್ಯ” ಎಂದು ಜನಪ್ರಿಯವಾಗಿದ್ದ ಇರಾನಿನ ಒಂಟಿ ವ್ಯಕ್ತಿ 94ನೇ ವಯಸ್ಸಿನಲ್ಲಿ ನಿಧನರಾದರು ಎಂದು ಸರ್ಕಾರಿ ಮಾಧ್ಯಮವನ್ನು ಉಲ್ಲೇಖಿಸಿ ದಿ ಗಾರ್ಡಿಯನ್ ವರದಿ ಮಾಡಿದೆ.
ಅಮೌ ಹಾಜಿ ಎಂಬ ವ್ಯಕ್ತಿ ನೀರಿಗೆ ಹೆದರಿ 60 ವರ್ಷಗಳಿಂದ ಸ್ನಾನ ಮಾಡಿರಲಿಲ್ಲ. ಆತ ಅಕ್ಟೋಬರ್ 23 ರಂದು (ಭಾನುವಾರ) ಇರಾನ್‌ನ ದಕ್ಷಿಣ ಪ್ರಾಂತ್ಯದ ಫಾರ್ಸ್‌ನ ದೇಜ್ಗಾ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾನೆ.
ಹಾಜಿ ಒಂಟಿಯಾಗಿದ್ದ ಮತ್ತು “ಅನಾರೋಗ್ಯಕ್ಕೆ ಒಳಗಾಗುತ್ತೇನೆ ಎಂಬ ಭಯದಲ್ಲಿ ಸ್ನಾನ ಮಾಡುವುದದನ್ನೇ ನಿಲ್ಲಿಸಿದ್ದ ಎಂದು ಇರ್ನಾ (IRNA) ನ್ಯೂಸ್ ಅನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ AFP ವರದಿ ಮಾಡಿದೆ. ಆದರೆ, ಕೆಲ ತಿಂಗಳ ಹಿಂದೆ ಗ್ರಾಮಸ್ಥರು ಒತ್ತಾಯಪೂರ್ವಕವಾಗಿ ಸ್ನಾನ ಮಾಡಿಸಿದ್ದರು ಎಂದು ವರದಿ ಹೇಳಿದೆ. ಹಾಜಿಯ ಹಲವಾರು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ನೆಟಿಜನ್‌ಗಳು ಆತ “ಸ್ನಾನ ಮಾಡದ” ದಾಖಲೆಯು ನಿಜವೇ ಎಂದು ಆಶ್ಚರ್ಯ ಪಡುತ್ತಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಹಾಜಿ ತೆರೆದ ಇಟ್ಟಿಗೆಯ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಮತ್ತು ಆತ ತನ್ನ ಯೌವನದಲ್ಲಿ ಕೆಲವು “ಭಾವನಾತ್ಮಕ ಹಿನ್ನಡೆಗಳನ್ನು” ಅನುಭವಿಸಿದ್ದ ಎಂದು ಗಾರ್ಡಿಯನ್ ವರದಿಯು ಹೇಳಿದೆ, ಅದು ನೀರು ಅಥವಾ ಸಾಬೂನಿನಿಂದ ಸ್ನಾನ ಮಾಡದಿರುವ ಬಗ್ಗೆ ಆತ ನಿರ್ಧಾರ ಕೈಗೊಳ್ಳುವಂತೆ ಮಾಡಿತು ಎಂದು ವರದಿ ಹೇಳಿದೆ.
ಕೊಳೆತ ಮಾಂಸ ಹಾಗೂ ಸತ್ತ ಪ್ರಾಣಿಗಳು ಆತನ ನೆಚ್ಚಿನ ಆಹಾರವಾಗಿದ್ದವು. ಅದರಲ್ಲಿಯೂ ಮುಳ್ಳುಹಂದಿಗಳೆಂದರೆ ಪಂಚಪ್ರಾಣ. ಆತನಿಗೆ ದೂಮಪಾನ ಬಹಳ ಇಷ್ಟದ ಹವ್ಯಾಸ. ಆದರೆ ಅದರಲ್ಲಿ ಆತ ಹೊಗೆಸೊಪ್ಪು ಬಳಸುತ್ತಿರಲಿಲ್ಲ. ಬದಲಾಗಿ ಪ್ರಾಣಿಗಳ ದೇಹದ ವ್ಯರ್ಥ ಭಾಗಗಳನ್ನು ತುಕ್ಕುಹಿಡಿದ ಕೊಳವೆಗೆ ಹಾಕಿ ಸೇದುತ್ತಿದ್ದ. ಪ್ರಾಣಿಗಳ ಮಲವನ್ನು ತುಂಬಿದ ಪೈಪ್ ಅನ್ನು ಧೂಮಪಾನ ಮಾಡುತ್ತಾನೆ ಮತ್ತು ಶುಚಿತ್ವವು ಅವನನ್ನು ಅನಾರೋಗ್ಯ ಉಂಟು ಮಾಡುತ್ತದೆ ಎಂದು ನಂಬಿದ್ದ.

ಚಳಿಗಾಲದಲ್ಲಿ ತನ್ನನ್ನು ಬೆಚ್ಚಗಿರಿಸಿಕೊಳ್ಳಲು ಯುದ್ಧ ಶಿರಸ್ತ್ರಾಣ ಧರಿಸುತ್ತಿದ್ದ. ನೆಲದ ಒಳಗೆ ಇರಲು ಸಮಾಧಿಯಂತಹ ಕಿಂಡಿಯಲ್ಲಿ ಹೆಚ್ಚಿನ ಸಮಯ ವಾಸಿಸುತ್ತಿದ್ದ. ಜನರು ಆತನಿಗಾಗಿ ಸಣ್ಣ ಗುಡಿಸಲನ್ನೂ ಸಹ ಕಟ್ಟಿಕೊಟ್ಟಿದ್ದರು.
ಸಾಮಾಜಿಕ ಮಾಧ್ಯಮದಲ್ಲಿನ ಕೆಲವು ಚಿತ್ರಗಳು ಅವರು ಒಂದೇ ಬಾರಿಗೆ ಹಲವಾರು ಸಿಗರೇಟ್ ಸೇದುವುದನ್ನು ತೋರಿಸುತ್ತವೆ.
ಅವರ ವಿಶಿಷ್ಟ ದಾಖಲೆಯಿಂದಾಗಿ, ಅವರ ಜೀವನವನ್ನು ವಿವರಿಸುವ “ದಿ ಸ್ಟ್ರೇಂಜ್ ಲೈಫ್ ಆಫ್ ಅಮೂ ಹಾಜಿ” ಎಂಬ ಕಿರು ಸಾಕ್ಷ್ಯಚಿತ್ರವನ್ನು ಸಹ 2013 ರಲ್ಲಿ ನಿರ್ಮಿಸಲಾಯಿತು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ವಾಟ್ಸಾಪ್ ಡೇಟಾ ಸೋರಿಕೆ: ಭಾರತ ಸೇರಿದಂತೆ 84 ದೇಶಗಳ 50 ಕೋಟಿ ಬಳಕೆದಾರರ ಫೋನ್ ಸಂಖ್ಯೆಗಳ ಸೋರಿಕೆ..?

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement