ವಿಷಕಾರಿ ರಾಸಾಯನಿಕ ಬಳಸುತ್ತಿದ್ದಾರೆಂದು ಕುರಿತು ಬಿಜೆಪಿ ಸಂಸದರ ಆಕ್ರೋಶದ ನಂತರ ಯಮುನಾ ನೀರಿನಲ್ಲಿ ಸ್ನಾನ ಮಾಡಿ ತೋರಿಸಿದ ದೆಹಲಿ ಜಲ ಮಂಡಳಿ ಅಧಿಕಾರಿ| ವೀಕ್ಷಿಸಿ

ನವದೆಹಲಿ: ಛತ್ ಹಬ್ಬಕ್ಕೆ ಮುನ್ನ ಯಮುನಾ ನದಿ ನೊರೆ ತೆಗೆಯಲು ವಿಷಕಾರಿ ವಸ್ತುವನ್ನು ಬಳಸುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಛೀಮಾರಿ ಹಾಕಿದ ಕೆಲವೇ ದಿನಗಳಲ್ಲಿ, ದೆಹಲಿ ಜಲ ಮಂಡಳಿಯ ಗುಣಮಟ್ಟ ನಿಯಂತ್ರಣ ನಿರ್ದೇಶಕ ಸಂಜಯ್ ಶರ್ಮಾ ಅವರು ನದಿಯಲ್ಲಿ ಸ್ನಾನ ಮಾಡುವ ಮೂಲಕ ಇದು ವಿಷಕಾರಿಯಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ. ಡಿಜೆಬಿ ಅಧಿಕಾರಿಯು ಪಾತ್ರೆಯಲ್ಲಿ ಶೇಖರಿಸಲಾದ ಯಮುನಾ ನದಿಯ ನೀರಿನಲ್ಲಿ ಸ್ನಾನ ಮಾಡುವುದನ್ನು ಕಾಣಬಹುದು.
ಬಿಜೆಪಿ ನಾಯಕರಾದ ಪರ್ವೇಶ್ ವರ್ಮಾ ಮತ್ತು ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಯಮುನಾ ನದಿ ನೀರು ಮಲೀನಗೊಳಿಸುವ ವಸ್ತುವನ್ನು ಸಿಂಪಡಿಸಲಾಗಿದೆ ಎಂದು ಆರೋಪಿಸಿ ಡಿಜೆಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಂತರ ಶರ್ಮಾ ಈ ಕ್ರಮ ಕೈಗೊಂಡಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ವೀಡಿಯೊವನ್ನು ನಂತರ ದೆಹಲಿ ಜಲ ಬೋರ್ಡ್‌ ಉಪಾಧ್ಯಕ್ಷ ಹಾಗೂ ಎಎಪಿ ಶಾಸಕ ಸೌರಭ್ ಭಾರದ್ವಾಜ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಪರ್ವೇಶ್ ವರ್ಮಾ ಸಂಜಯ್ ಶರ್ಮಾ ಅವರೊಂದಿಗೆ ಡಿಫೋಮರ್ ಅನ್ನು ಸಿಂಪಡಿಸಿದ್ದಕ್ಕಾಗಿ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು. ಅವರು “ವಿಷಕಾರಿ” ಎಂದು ಅದನ್ನು ಲೇಬಲ್ ಮಾಡಿದ್ದಾರೆ. ಅವರು ಶರ್ಮಾಗೆ ನದಿಯಲ್ಲಿ ಸ್ನಾನ ಮಾಡುವಂತೆ ಸವಾಲು ಹಾಕಿದರು.
ಶರ್ಮಾ ಅವರು ಶುಕ್ರವಾರ ಕಾಳಿಂದಿ ಕುಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶರ್ಮಾ ಅವರ ದೂರಿನ ಪ್ರಕಾರ, ವರ್ಮಾ ಅವರು “ತುಂಬಾ ಅಸಭ್ಯ ಭಾಷೆ ಬಳಸಿದ್ದಾರೆ ಮತ್ತು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನಾನು ಡಿಜೆಬಿಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಯಮುನಾ ನದಿಯ ನೀರಿಗೆ ವಿಷ ಬೆರೆಸುತ್ತಿದ್ದೇವೆ ಎಂಬ ಸುಳ್ಳು ಪ್ರಚಾರವನ್ನೂ ಅವರು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇಂದಿನ ಪ್ರಮುಖ ಸುದ್ದಿ :-   ಮುಂಗುಸಿ - ಕಪ್ಪು ನಾಗರಹಾವಿನ ನಡುವಿನ ಮಾರಣಾಂತಿಕ ಹೋರಾಟ: ಉಸಿರು ಬಿಗಿಹಿಡಿಯುವ ಕಾದಾಟ | ವೀಕ್ಷಿಸಿ

ರಾಸಾಯನಿಕವನ್ನು ಸಿಂಪಡಿಸುವ ಬಗ್ಗೆ ಡಿಜೆಬಿಯ ನಿಲುವನ್ನು ಸಮರ್ಥಿಸಿಕೊಂಡ ಶರ್ಮಾ ಅವರು ಇದು ವಿಷಕಾರಿಯಲ್ಲ ಎಂದು ಸಮರ್ಥಿಸಿಕೊಂಡರು. ಇದು ಆಹಾರ ದರ್ಜೆಯ ರಾಸಾಯನಿಕವಾಗಿದ್ದು ಇದನ್ನು ಸೌಂದರ್ಯವರ್ಧಕಗಳಲ್ಲಿಯೂ ಬಳಸಲಾಗುತ್ತದೆ ಎಂದು ಅವರು ಹೇಳಿದರು. “ಭಕ್ತರು ಯಾವುದೇ ಭಯವಿಲ್ಲದೆ ನದಿಯಲ್ಲಿ ಸ್ನಾನ ಮಾಡಲು ನಾನು ಸ್ವಾಗತಿಸುತ್ತೇನೆ” ಎಂದು ಶರ್ಮಾ ಸ್ನಾನದ ನಂತರ ಮಾಧ್ಯಮಗಳಿಗೆ ತಿಳಿಸಿದರು.
ಛತ್ ಪೂಜೆಗೂ ಮುನ್ನ ಕಲುಷಿತ ಯಮುನಾ ನೀರಿನ ವಿಚಾರದಲ್ಲಿ ಎಎಪಿ ಮತ್ತು ಬಿಜೆಪಿ ಪರಸ್ಪರ ಟಾರ್ಗೆಟ್ ಮಾಡಿಕೊಂಡಿವೆ. ಏತನ್ಮಧ್ಯೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಕಾರ ಛತ್ ಆಚರಣೆಯ ಭಾಗವಾಗಿ ಯಾವುದೇ ಅರ್ಪಣೆಗಳನ್ನು ನದಿಯಲ್ಲಿ ಬಿಡಲು ಅನುಮತಿಸಲಾಗುವುದಿಲ್ಲ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಬಾಲಿವುಡ್‌ ಹಿರಿಯ ನಟ ವಿಕ್ರಮ್ ಗೋಖಲೆ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement