ಲಕ್ಷಾಂತರ ಬಳಕೆದಾರರಿಗೆ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡ ವಾಟ್ಸಾಪ್‌…!

ನವದೆಹಲಿ: ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ WhatsApp ಇಂದು ಮಧ್ಯಾಹ್ನ 12:30 ರಿಂದ ಸ್ಥಗಿತಗೊಂಡಿತ್ತು ಮತ್ತು ವ್ಯಕ್ತಿಗಳಿಗೆ ಕಳುಹಿಸಲಾದ ಸಂದೇಶಗಳಿಗೆ ಕೇವಲ ಒಂದು ಟಿಕ್ ತೋರಿಸುತ್ತಿದೆ. ಗುಂಪು ಸಂದೇಶಗಳನ್ನು ತಲುಪಿಸಲಾಗುತ್ತಿರಲಿಲ್ಲ. ಸುಮಾರು ಎರಡು ಗಂಟೆಗಳ ಕಾಲ, ಭಾರತದಲ್ಲಿ ಮತ್ತು ವಿಶ್ವಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಅಪ್ಲಿಕೇಶನ್ ಡೌನ್ ಆಗಿತ್ತು. ಸ್ಥಗಿತದ ನಂತರ ಈಗ WhatsApp ಸೇವೆಗಳನ್ನು ಮರುಸ್ಥಾಪಿಸಲಾಗಿದೆ. … Continued

‘ಕಾಂತಾರ’ ಸಿನೆಮಾ ವಿರುದ್ಧ ಕೃತಿಚೌರ್ಯದ ಆರೋಪ: ಕಾನೂನು ಕ್ರಮಕ್ಕೆ ಮುಂದಾದ ಕೇರಳದ ಮ್ಯುಸಿಕ್‌ ಬ್ಯಾಂಡ್‌

ಬೆಂಗಳೂರು: ಕಾಂತಾರ ಸಿನೆಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾದಾಗಿನಿಂದ ಪ್ಯಾನ್-ಇಂಡಿಯಾದಲ್ಲಿ ಭಾರಿ ಯಶಸ್ಸನ್ನು ಗಳಿಸಿದ ಕನ್ನಡ ಚಲನಚಿತ್ರವಾಗಿದೆ. ಆದರೆ ಈಗ ಈ ಸಿನೆಮಾ ತಂಡದ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದೆ. ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್’ ಈಗ ‘ಕಾಂತಾರ’ ಚಿತ್ರದ ಹಾಡೊಂದಕ್ಕೆ ಆಕ್ಷೇಪಣೆ ಮಾಡಿದೆ. ಅದು ಕೃತಿಚೌರ್ಯದ ಆರೋಪ ಮಾಡಿದ್ದು, ಕಾನೂನು ಕ್ರಮ … Continued

ಮುಂಬೈ: ಬಾಟಲಿಯಲ್ಲಿ ಪಟಾಕಿ ಸಿಡಿಸಲು ಆಕ್ಷೇಪಿಸಿದ್ದಕ್ಕೆ ವ್ಯಕ್ತಿಯನ್ನು ಇರಿದು ಕೊಂದ 15 ವರ್ಷದ ಬಾಲಕ …!

ಮುಂಬೈ: ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುವುದು ಬೇಡ ಎಂದು  ಆಕ್ಷೇಪಿಸಿದ ವ್ಯಕ್ತಿಯೊಬ್ಬನನ್ನು ಬಾಲಕ ಚಾಕುವಿನಿಂದ  ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ ವರದಿಯಾಗಿದೆ. ಆರೋಪಿಗಳಲ್ಲಿ 14 ಮತ್ತು 15 ವರ್ಷದ ಇಬ್ಬರನ್ನು ಬಂಧಿಸಲಾಗಿದ್ದು, 12 ವರ್ಷದ ಮೂರನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರನ್ನು 21 ವರ್ಷದ ಸುನಿಲ್ ನಾಯ್ಡು ಎಂದು ಗುರುತಿಸಲಾಗಿದೆ. ಪೊಲೀಸರ … Continued

ಅಳಿಯ ರಿಷಿ ಸುನಕ್ ಬ್ರಿಟನ್‌ ಪ್ರಧಾನಿಯಾಗುವುದಕ್ಕೆ ಇನ್ಫಿ ನಾರಾಯಣ ಮೂರ್ತಿ ಮೊದಲ ಪ್ರತಿಕ್ರಿಯೆ

ನವದೆಹಲಿ: “ನಾವು ರಿಷಿ ಸುನಕ್‌ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಅವರ ಯಶಸ್ಸನ್ನು ಬಯಸುತ್ತೇವೆ” ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಅಳಿಯ ರಿಷಿ ಸುನಕ್ ಅವರನ್ನು ಬ್ರಿಟನ್‌ನ ಪ್ರಧಾನಿಯಾಗಿ ಆಯ್ಕೆಯಾದ ಕುರಿತು ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. ಸುನಕ್, 42, ಭಾನುವಾರ ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸುವ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ ಮತ್ತು ಈಗ ಭಾರತೀಯ … Continued

ಕಂಚುಗಲ್ಲು ಬಂಡೇಮಠದ ಶ್ರೀಗಳು ಶವವಾಗಿ ಪತ್ತೆ : ಆತ್ಮಹತ್ಯೆ ಟಿಪ್ಪಣಿ’ಯಲ್ಲಿ ಕಿರುಕುಳದ ಆರೋಪ

ಬೆಂಗಳೂರು: ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಅಕ್ಟೋಬರ್ 24 ರಂದು ಕಂಚುಗಲ್ ಬಂಡೇಮಠದ 45 ವರ್ಷದ ಬಸವಲಿಂಗ ಸ್ವಾಮಿ ಸೋಮವಾರ ತಮ್ಮ ಮಠದ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ ಕಿಟಕಿಯ ಮೇಲಿನ ಗ್ರಿಲ್‌ಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಈ ಸಂಬಂಧ ರಾಮನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಲಿಂಗಾಯತ … Continued

ಸೋಮವಾರ ತಡರಾತ್ರಿ ಹರ್ಷನ ಮನೆ ಬಳಿ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ ದುಷ್ಕರ್ಮಿಗಳು : ಯುವಕನ ಮೇಲೆ ಹಲ್ಲೆ

ಶಿವಮೊಗ್ಗ: ಸೋಮವಾರ ರಾತ್ರಿ ಶಿವಮೊಗ್ಗ ನಗರದಲ್ಲಿ ಪುನಃ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಹಿಂದೂ ಕಾರ್ಯಕರ್ತ ಮೃತ ಹರ್ಷನ ಕುಟುಂಬಸ್ಥರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಓರ್ವ ಯುವಕನ ಮೇಲೆಯೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ತಡರಾತ್ರಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್‌ನಲ್ಲಿ ಕೂಗುತ್ತಾ ಓಡಾಡುತ್ತಿದ್ದ ಗುಂಪು ಸೀಗೆಹಟ್ಟಿಯ ಹರ್ಷನ ಮನೆ ಬಳಿ ಬೈಕ್ ನಿಲ್ಲಿಸಿ ಹರ್ಷ‌‌ನ ಕುಟುಂಬದವರಿಗೆ ಬೆದರಿಕೆ … Continued

ದೀಪಾವಳಿಯಂದು ಬ್ರಿಟನ್‌ ಪ್ರಧಾನಿ ಸ್ಪರ್ಧೆಯಲ್ಲಿ ಗೆದ್ದ ರಿಷಿ ಸುನಕ್ ಹೆಮ್ಮೆಯ ಹಿಂದೂ, ರಾಜಕೀಯವಾಗಿ ಸಂಪ್ರದಾಯವಾದಿ: ಹಿಂದಿ, ಪಂಜಾಬಿ ಭಾಷೆ ಚೆನ್ನಾಗಿ ಗೊತ್ತು

ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಅವರು ತಾವು ಹಿಂದೂ ಧರ್ಮದ ಅನುಯಾಯಿ ಎಂಬುದನ್ನು ಪ್ರದರ್ಶಿಸುವುದಕ್ಕೆ ಹಿಂದೆ ಸರಿಯುವುದಿಲ್ಲ. ಪೆನ್ನಿ ಮೊರ್ಡಾಂಟ್ ರೇಸ್‌ನಿಂದ ಹೊರಗುಳಿಯುತ್ತಿದ್ದಂತೆ ಈಗ ಅವರು ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಲಿದ್ದಾರೆ. ಆಗಸ್ಟ್‌ನಲ್ಲಿ ಬ್ರಿಟನ್‌ನ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ರಿಷಿ ಸುನಕ್ ಲಂಡನ್‌ನಲ್ಲಿ ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಗೋ ಪೂಜೆ … Continued

ವಿನಮ್ರತೆಯಿಂದ ಸೇವೆ ಮಾಡುವೆ: ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಮೊದಲ ಮಾತು; ಆರ್ಥಿಕ ಬಿಕ್ಕಟ್ಟಿನ ನಡುವೆ ಸ್ಥಿರತೆ ತರಲು ಪ್ರತಿಜ್ಞೆ

ಲಂಡನ್‌: ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿಯಾಗಲಿರುವ ಭಾರತೀಯ ಮೂಲದ ರಿಷಿ ಸುನಕ್ ಅವರು ಸೋಮವಾರ ತೀವ್ರವಾದ ಆರ್ಥಿಕ ಸವಾಲಿನ ಬಗ್ಗೆ ಎಚ್ಚರಿಸಿದ್ದಾರೆ ಮತ್ತು ಯುನೈಟೆಡ್ ಕಿಂಗ್‌ಡಂಗೆ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ತಮ್ಮ ಮೊದಲ ಭಾಷಣದಲ್ಲಿ, ಮಾಜಿ ಹಣಕಾಸು ಸಚಿವ ರಿಷಿ ಸುನಕ್‌ ಅವರು, ಪಕ್ಷ … Continued

ಕೇರಳ: ಕುಲಪತಿಗಳು ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ 9 ಉಪಕುಲಪತಿಗಳು ಮುಂದುವರಿಯಬಹುದು: ಕೇರಳ ಹೈಕೋರ್ಟ್‌ ತೀರ್ಪು

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರಾಜೀನಾಮೆ ಕೋರಿ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ಶೋಕಾಸ್ ನೋಟಿಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಸೋಮವಾರ ಕುಲಪತಿಗಳು ಅಂತಿಮ ಆದೇಶ ಹೊರಡಿಸುವವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ಹೇಳಿದೆ. ಅಂತಿಮ ಆದೇಶ ಹೊರಬೀಳುವವರೆಗೆ ಕಾನೂನು ಬದ್ಧವಾಗಿ ಹುದ್ದೆ ಮುಂದುವರಿಸಬಹುದು ಎಂದೂ ಹೈಕೋರ್ಟ್ ಹೇಳಿದೆ. ಭಾನುವಾರ ಸಂಜೆ … Continued

ಕಿತ್ತೂರು ಬಳಿ ಸಾವಿರ ಎಕರೆ ಕೈಗಾರಿಕಾ ಟೌನ್‌ಶಿಪ್ ನಿರ್ಮಾಣ: ಸಿಎಂ ಬೊಮ್ಮಾಯಿ

ಬೆಳಗಾವಿ : ಕಿತ್ತೂರು ಬಳಿ ಇರುವ ಕೆಐಎಡಿಬಿ ಜಾಗದಲ್ಲಿ 1000 ಎಕರೆ ಕೈಗಾರಿಕಾ ಟೌನ್‌ಶಿಪ್ ನಿರ್ಮಿಸಲು ನಿರ್ಧರಿಸಲಾಗಿದೆ. ಶೀಘ್ರವೇ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿ 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ … Continued