ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಶಶಿ ತರೂರ್, ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಕ್ರಮಬದ್ಧ- ಕೆ.ಎನ್. ತ್ರಿಪಾಠಿ ಔಟ್

ನವದೆಹಲಿ: ಜಾರ್ಖಂಡ್‌ನ ಮಾಜಿ ಸಚಿವ ಕೆ.ಎನ್. ತ್ರಿಪಾಠಿ ಅವರ ಅರ್ಜಿ ಇಂದು, ಶನಿವಾರ ತಿರಸ್ಕೃತಗೊಂಡ ನಂತರ ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆಗಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಹೋರಾಟ ಈಗ ನಡೆಯಲಿದೆ. ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಚುನಾವಣಾಧಿಕಾರಿ ಮಧುಸೂದನ್ ಮಿಸ್ತ್ರಿ ಇಂದು ಸುದ್ದಿಗೋಷ್ಠಿಯಲ್ಲಿ … Continued

ಗೆಹ್ಲೋಟ್ Vs ಪೈಲಟ್ : ಸೋನಿಯಾ ಗಾಂಧಿ ಭೇಟಿಗೂ ಮುನ್ನ ಅಶೋಕ್ ಗೆಹ್ಲೋಟ್‌ ಬರೆದ “ಎಸ್‌ಪಿ” ವಿರುದ್ಧದ ಆರೋಪಪಟ್ಟಿ ಬಹಿರಂಗ: ಕಾಂಗ್ರೆಸ್‌ನಲ್ಲಿ ಕೋಲಾಹಲ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗಿನ ಭೇಟಿಯ ವೇಳೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನೀಡಿದ್ದಾರೆನ್ನಲಾದ ಪತ್ರವು ಸೋರಿಕೆಯಾಗಿದ್ದು, ರಾಜಸ್ತಾನದ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ಇನ್ನೂ ಸರಿಯಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಹಾಗೂ ಈ ಪತ್ರ ಕಾಂಗ್ರೆಸ್‌ನಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಮಲಯಾಳಂ ಮನೋರಮಾ ಛಾಯಾಗ್ರಾಹಕ ಸುರೇಶ್ ಜಯಪ್ರಕಾಶ್ ಕ್ಲಿಕ್ಕಿಸಿದ ಫೋಟೋದಲ್ಲಿ ಈ … Continued

ಇದು 5G ಮಹಿಮೆ..! : ದೆಹಲಿಯಲ್ಲಿ ಕುಳಿತು 5G ಲಿಂಕ್‌ ಮೂಲಕ ಯುರೋಪ್‌ನಲ್ಲಿ ಕಾರು ಓಡಿಸಿದ ಪ್ರಧಾನಿ ಮೋದಿ…| ವೀಕ್ಷಿಸಿ

ನವದೆಹಲಿ: ಭಾರತದಲ್ಲಿ 5G ಟೆಲಿಕಮ್ಯುನಿಕೇಶನ್ ಸೇವೆಗಳ ಪ್ರಾರಂಭವನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ ಇಂದು, ಶನಿವಾರ ನವದೆಹಲಿಯಿಂದ ರಿಮೋಟ್ ಮೂಲಕ ಯುರೋಪ್‌ನಲ್ಲಿ ಕಾರು ಓಡಿಸುವುದನ್ನು ಪರೀಕ್ಷಿಸಿದರು. ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಅವರು ಇತ್ತೀಚಿನ ಟೆಲಿಕಾಂ ಸೇವೆಯನ್ನು ಪ್ರಾರಂಭಿಸಿದರು. ಎರಿಕ್ಸನ್ ಬೂತ್ ಇನ್ ಇಂಡಿಯಾ ಮೊಬೈಲ್ ಕಾನ್ಫರೆನ್ಸ್‌ನಲ್ಲಿ 5G … Continued

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ(ಎಲ್‌ಒಪಿ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉದಯಪುರ ಚಿಂತನ ಶಿಬಿರದಲ್ಲಿ ಕಾಂಗ್ರೆಸ್‌ನ “ಒಬ್ಬ ವ್ಯಕ್ತಿ, ಒಂದು ಹುದ್ದೆ” ನಿಯಮಕ್ಕೆ ಅನುಗುಣವಾಗಿ ಮೇಲ್ಮನೆಯ ಸ್ಥಾನದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು … Continued

ಭಾರತದಲ್ಲಿ 5G ಸೇವೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ದೀಪಾವಳಿ ನಂತರ ದೇಶದ 13 ನಗರಗಳಲ್ಲಿ ಲಭ್ಯ | ವೀಕ್ಷಿಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು, ಶನಿವಾರ 6ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್ -2022 ಸಮಾರಂಭದಲ್ಲಿ 5G ನೆಟ್‌ವರ್ಕ್‌ ಸೇವೆಗಳಿಗೆ ಚಾಲನೆ ನೀಡಿದ್ದಾರೆ. ಭಾರತದಲ್ಲಿ 5G ಗಾಗಿ ಕಾಯುವಿಕೆ ಅಂತಿಮವಾಗಿ ಕೊನೆಗೊಂಡಿದೆ ಮತ್ತು ದೀಪಾವಳಿಯ ವೇಳೆಗೆ ಬಳಕೆದಾರರು 5G ಸೇವೆಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ದೀಪಾವಳಿಯ ನಂತರ ಭಾರತದ 13 ನಗರಗಳಲ್ಲಿ 5G ಸೇವೆಗಳು ಲಭ್ಯವಿರುತ್ತವೆ. … Continued

ತಾಜ್ ಮಹಲ್‌ನ “ನೈಜ ಇತಿಹಾಸ” ತಿಳಿಯಲು ‘ಸತ್ಯಶೋಧನಾ ಸಮಿತಿ’ ನೇಮಕ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ

ನವದೆಹಲಿ: ತಾಜ್‌ಮಹಲ್‌ನ ನೈಜ ಇತಿಹಾಸವನ್ನು ಅಧ್ಯಯನ ಮಾಡಲು ಮತ್ತು ಈ ಬಗ್ಗೆ ವಿವಾದವನ್ನು ಅಂತ್ಯಗೊಳಿಸಲು ಮತ್ತು ಅದರ ಇತಿಹಾಸವನ್ನು ಸ್ಪಷ್ಟಪಡಿಸಲು ಸತ್ಯಶೋಧನಾ ಸಮಿತಿ ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಲೈವ್‌ ಲಾ ವರದಿ ಮಾಡಿದೆ. ಅರ್ಜಿದಾರರಾದ ಡಾ.ರಜನೀಶ್ ಸಿಂಗ್ ಅವರ ಪ್ರಕಾರ, ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ … Continued

ಪಿಎಫ್‌ಐ ಹಿಟ್‌ಲಿಸ್ಟ್‌ನಲ್ಲಿರುವ ಕೇರಳದ ಐವರು ಆರ್‌ಎಸ್‌ಎಸ್ ಪ್ರಮುಖರಿಗೆ ವೈ” ಕೆಟಗರಿ ಭದ್ರತೆ

ನವದೆಹಲಿ: ಈಗ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದಿಂದ ಸಂಭವನೀಯ ಬೆದರಿಕೆಯ ಕುರಿತು ಕೇಂದ್ರ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ ನಂತರ ಕೇಂದ್ರ ಗೃಹ ಸಚಿವಾಲಯ(ಎಂಎಚ್‌ಎ)ವು ಶನಿವಾರ ಕೇರಳದ ಐವರು ಆರ್‌ಎಸ್‌ಎಸ್ ಪ್ರಮುಖರಿಗೆ “ವೈ” ಕೆಟಗರಿ ಭದ್ರತೆಯನ್ನು ನೀಡಿದೆ. ಮೂಲಗಳ ಪ್ರಕಾರ, ಪಿಎಫ್‌ಐ ಅನ್ನು ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರದ ನಂತರ ಕೇರಳದ ಆರ್‌ಎಸ್‌ಎಸ್ … Continued

ಭಾರತದಲ್ಲಿ ಈವರೆಗಿನ ಅತಿ ದೊಡ್ಡ ಮೊತ್ತ ಜಪ್ತಿ: ಚೀನಾದ ಶಿಯೋಮಿಯ 5,551 ಕೋಟಿ ರೂ.ಗಳ ಜಪ್ತಿಗೆ ಫೆಮಾ ಪ್ರಾಧಿಕಾರದ ಅನುಮೋದನೆ

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಅಡಿಯಲ್ಲಿ ಸಕ್ಷಮ ಪ್ರಾಧಿಕಾರವು ಚೀನಾದ ಮೊಬೈಲ್ ಫೋನ್ ತಯಾರಕ Xiaomi ಯ 5,551 ಕೋಟಿ ರೂ ಮೌಲ್ಯದ ಠೇವಣಿಗಳನ್ನು ವಶಪಡಿಸಿಕೊಳ್ಳುವ ಆದೇಶವನ್ನು ಅನುಮೋದಿಸಿದೆ – ಇದು ಭಾರತದಲ್ಲಿ ಇಲ್ಲಿಯವರೆಗೆ ಫ್ರೀಜ್ ಮಾಡಲಾದ ಅತ್ಯಧಿಕ ಮೊತ್ತವಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ತಿಳಿಸಿದೆ. ರಾಯಧನದ ಸೋಗಿನಲ್ಲಿ ಮೂರು … Continued

ಮತಾಂತರ ನಿಷೇಧ ಮಸೂದೆಗೆ ರಾಜ್ಯಪಾಲರಿಂದ ಅಂಕಿತ

ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ವಿಧೇಯಕಕ್ಕೆ ಸೆಪ್ಟೆಂಬರ್‌ 28ರಂದು ರಾಜ್ಯಪಾಲರು ಅಂಕಿತ ಹಾಕಿದ್ದು, ಅದನ್ನು ರಾಜ್ಯ ಸರ್ಕಾರ ಸೆಪ್ಟೆಂಬರ್‌ 30ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಕಳೆದ ವರ್ಷ ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರಪಡೆಯಲಾಗಿತ್ತು. ಆದರೆ, ವಿಧಾನಪರಿಷತ್ತಿನಲ್ಲಿ ಅಂಗೀಕಾರ ಸಾಧ್ಯವಾಗಿರಲಿಲ್ಲ. ಇದೇ ಸೆಪ್ಟೆಂಬರ್‌ 17ರಂದು ಕೆಲವು ತಿದ್ದುಪಡಿಗಳೊಂದಿಗೆ ವಿಧಾನಪರಿಷತ್ತಿನಲ್ಲಿ ವಿಧೇಯಕ … Continued