ಕಾಶ್ಮೀರ: 4 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು, ಉಗ್ರರ ಸಂಚು ವಿಫಲ

ಕಾಶ್ಮೀರ : ಮಂಗಳವಾರ ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಹಾಗೂ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದಾರೆ. ಇದೇವೇಳೆ ಮೂವರು ಹೈಬ್ರಿಡ್ ಉಗ್ರರನ್ನು ಬಂಧಿಸಲಾಗಿದೆ ಮತ್ತು ಶ್ರೀನಗರದಲ್ಲಿ ಅವರ ವಶದಿಂದ 10 ಕೆಜಿ ಐಇಡಿ ವಶಪಡಿಸಿಕೊಳ್ಳಲಾಗಿದೆ. ಅವಂತಿಪೋರಾ ಪ್ರದೇಶದಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, ಬಿಜ್‌ಬೆಹರಾ ಪ್ರದೇಶದಲ್ಲಿ ಒಬ್ಬನನ್ನು ಹತ್ಯೆ … Continued

ಕಾಶಿ ವಿಶ್ವನಾಥ-ಜ್ಞಾನವಾಪಿ ಪ್ರಕರಣ: ಆದೇಶ ನೀಡಿದರೆ ಜ್ಞಾನವಾಪಿ ಆವರಣದಲ್ಲಿ ಸಮೀಕ್ಷೆ ನಡೆಸಲು ನಾವು ಸಮರ್ಥ ಎಂದು ಅಲಹಾಬಾದ್‌ ಹೈಕೋರ್ಟಿಗೆ ತಿಳಿಸಿದ ಎಎಸ್‌ಐ

ನವದೆಹಲಿ: ಉತ್ತರ ಪ್ರದೇಶದ ವಾರಣಾಸಿ ನಗರದ ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ನಡೆಸುವ ಕುರಿತು ನ್ಯಾಯಾಲಯದ ತೀರ್ಪನ್ನು ಸರ್ಕಾರಿ ಸಂಸ್ಥೆ ಪಾಲಿಸುತ್ತದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸೋಮವಾರ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಮೀಕ್ಷೆಯನ್ನು ನಡೆಸಲು ಸಮರ್ಥವಾಗಿದೆ ಎಂದು ಎಎಸ್‌ಐ (ASI)ನ … Continued

ಆಪ್ಟಿಕಲ್ ಇಲ್ಯೂಷನ್: ಈ ಚಿತ್ರದಲ್ಲಿ ಅಡಗಿರುವ ಮುದ್ದಾದ ನಾಯಿಯನ್ನು 15 ಸೆಕೆಂಡುಗಳಲ್ಲಿ ಗುರುತಿಸಬಹುದೇ?

ಇತ್ತೀಚಿನ ದಿನಗಳಲ್ಲಿ ಅನೇಕ ಮನಸ್ಸಿಗೆ ಮುದ ನೀಡುವ ಆಪ್ಟಿಕಲ್ ಭ್ರಮೆಗಳಿಗೆ ನೆಟಿಜನ್‌ಗಳು ತಲೆ ಕೆರೆದುಕೊಳ್ಳುತ್ತಿದ್ದಾರೆ.ಇದು ಚಿತ್ರ ಒಗಟು ಅಥವಾ ಚಿತ್ರಕಲೆಯೊಳಗೆ ಅಡಗಿರುವ ಯಾವುದಾದರೂ ಆಪ್ಟಿಕಲ್ ಭ್ರಮೆಗಳು ಯಾವಾಗಲೂ ಪರಿಹರಿಸಲು ವಿನೋದಮಯವಾಗಿರುತ್ತವೆ. ಆಪ್ಟಿಕಲ್ ಭ್ರಮೆಯ ಉದ್ದೇಶವು ನಿಮ್ಮ ಮುಂದೆ ಪ್ರಸ್ತುತಪಡಿಸಲಾದ ಚಿತ್ರದ ನಿಮ್ಮ ಗ್ರಹಿಕೆಯನ್ನು ಪರೀಕ್ಷಿಸುವುದು ಮತ್ತು ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಪರೀಕ್ಷಿಸುವುದು. ಶರತ್ಕಾಲದ ಋತುವಿನಲ್ಲಿ ಉದ್ಯಾನವನದ … Continued

ಕನ್ನಡ ರಾಜ್ಯೋತ್ಸವದಂದು 150 ಕಿಮೀ ದೂರ ಪುನೀತ್‌ ಸವಾರಿ

posted in: ರಾಜ್ಯ | 0

ಬೆಂಗಳೂರು : ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್‌ 1ರಂದು ಕರ್ನಾಟಕದ ಕಣ್ಮಣಿ ಪುನೀತ್‌ ರಾಜಕುಮಾರ ಅವರ ಸ್ಮರಣಾರ್ಥ “ಪುನೀತ ಸವಾರಿ ” ಹೆಸರಿನಲ್ಲಿ ೧೫೦ ಕಿಮೀ ಸೈಕಲ್‌ ಯಾತ್ರೆ ಬೆಂಗಳೂರಿನಿಂದ ನಡೆಯಿತು. ಬೆಂಗಳೂರಿನಿಂದ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ೧೫೦ ಕಿಮೀ ದೂರದ ವರೆಗೆ “ಪುನೀತ ಸವಾರಿ ” ಎಂಬ ಹೆಸರಿನಲ್ಲಿ ಸೈಕಲ್ ಸವಾರಿ ನಡೆಸಲಾಯಿತು. … Continued

ಗುಜರಾತ್ ತೂಗು ಸೇತುವೆ ದುರಂತ: ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ; ಮೊರ್ಬಿಯಲ್ಲಿ ಉನ್ನತ ಮಟ್ಟದ ಸಭೆ

ಮೊರ್ಬಿ (ಗುಜರಾತ್‌): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ ಮೊರ್ಬಿ ತೂಗು ಸೇತುವೆ ಕುಸಿತದಲ್ಲಿ ಗಾಯಗೊಂಡು ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆಗಿದ್ದರು. ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯೊಂದಿಗೆ ಮಂಗಳವಾರ ಸೇತುವೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವವರನ್ನು … Continued

ಪುನೀತ ರಾಜಕುಮಾರಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

posted in: ರಾಜ್ಯ | 0

ಬೆಂಗಳೂರು: ಮಳೆಯ ನಡುವೆಯೇ ನಟ, ದಿವಂಗತ ಪುನೀತ ರಾಜಕುಮಾರ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ವಿಧಾನಸೌಧದ ಮುಂದೆ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪುನೀತ್‌ ಅವರ ಪತ್ನಿ ಅಶ್ವಿನಿ ಪುನೀತ ರಾಜಕುಮಾರ ಅವರು ಪ್ರಶಸ್ತಿ ಸ್ವೀಕರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೂಪರ್ ಸ್ಟಾರ್ ರಜನಿಕಾಂತ ಅವರು ಪ್ರದಾನ … Continued

ಜೆಡಿಎಸ್‌ ಪಂಚರತ್ನ ರಥಯಾತ್ರೆಗೆ ಮಳೆ ಅಡ್ಡಿ: ಒಂದು ವಾರ ಮುಂದೂಡಿಕೆ

posted in: ರಾಜ್ಯ | 0

ಕೋಲಾರ: ಕರ್ನಾಟಕ ರಾಜ್ಯೋತ್ಸವ ದಿನದಂದಲೇ ಪಂಚರತ್ನ ರಥಯಾತ್ರೆ ಚಾಲನೆ ನೀಡಲು ಸಿದ್ಧತೆ ನಡೆಸಿದ್ದ ಜೆಡಿಎಸ್‌ಗೆ ಮಳೆರಾಯ ಅಡ್ಡಿ ಪಡಿಸಿದ್ದಾನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲಿನ (mulabagilu) ಕುರುಡುಮಲೆಯಿಂದ ಮಂಗಳವಾರ ಆರಂಭವಾಗಬೇಕಿದ್ದ ಯಾತ್ರೆಯನ್ನು ಮಳೆಯ ಕಾರಣದಿಂದ ವಾರ ಕಾಲ ಮುಂದೂಡಲಾಗಿದೆ. ಪಂಚರತ್ನ ಸಮಾವೇಶಕ್ಕೆ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಾಲಾಜಿ ಭವನದ ಹತ್ತಿರ … Continued

ರಥೋತ್ಸವದ ವೇಳೆ ಮಗುಚಿ ಬಿದ್ದ ವೀರಭದ್ರ ಸ್ವಾಮಿ ರಥ

posted in: ರಾಜ್ಯ | 0

ಕೊಳ್ಳೇಗಾಲ : ಚಾಮರಾಜನಗರ ತಾಲೂಕಿನ ಅಮಚವಾಡಿ ಸಮೀಪದ ಚನ್ನಪ್ಪನಪುರದ ವೀರಭದ್ರ ಸ್ವಾಮಿ ರಥೋತ್ಸವದ ವೇಳೆ ರಥ ಮಗುಚಿ ಘಟನೆ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಚೆನ್ನಪ್ಪನ ಪುರದ ಬೆಟ್ಟದ ಮೇಲಿರುವ ವೀರಭದ್ರ ಸ್ವಾಮಿ ರಥೋತ್ಸವ ಇಂದು, ಮಂಗಳವಾರ ಹರ್ಷೋದ್ಗಾರದ ನಡುವೆ ನಡೆಯುತ್ತಿತ್ತು. ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಜನ ಸೇರಿದ್ದರು. ಈ ವೇಳೆ ಭಕ್ತರು ರಥವನ್ನು ಎಳೆಯುತ್ತದ್ದ … Continued

ತಮಿಳುನಾಡಿನ ಹಲವೆಡೆ ಭಾರೀ ಮಳೆ; ಚೆನ್ನೈ, ಏಳು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ಚೆನ್ನೈ: ಕಳೆದ 24 ಗಂಟೆಗಳಲ್ಲಿ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು, ಚೆನ್ನೈ ನಗರದಲ್ಲಿ ಟ್ರಾಫಿಕ್ ಅಸ್ತವ್ಯಸ್ತವಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈಶಾನ್ಯ ಮಾನ್ಸೂನ್ ಅಕ್ಟೋಬರ್ 29 ರಂದು ತಮಿಳುನಾಡನ್ನು ಅಪ್ಪಳಿಸಿತು. ಪ್ರಾದೇಶಿಕ ಹವಾಮಾನ ಕೇಂದ್ರ (RMC), ಚೆನ್ನೈನಲ್ಲಿ … Continued

ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳಕ್ಕೆ ಚಿಂತನೆ: ಗೃಹ ಸಚಿವ ಆರಗ ಜ್ಞಾನೇಂದ್ರ

posted in: ರಾಜ್ಯ | 0

ತುಮಕೂರು: ಪೊಲೀಸರ ನೇಮಕಾತಿಯ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸುವ ಕುರಿತು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಹೇಳಿದ್ದಾರೆ. ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪೊಲೀಸರ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳ ಮಾಡುವಂತೆ ಸಾಕಷ್ಟು ಮನವಿಗಳು ಬಂದಿವೆ. ಪೊಲೀಸ್ ಇಲಾಖೆಯಲ್ಲಿ ಯುವ ಶಕ್ತಿ ಇರಬೇಕು ಎಂಬುದು … Continued