ಪುನೀತ ರಾಜಕುಮಾರಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ಮಳೆಯ ನಡುವೆಯೇ ನಟ, ದಿವಂಗತ ಪುನೀತ ರಾಜಕುಮಾರ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ವಿಧಾನಸೌಧದ ಮುಂದೆ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪುನೀತ್‌ ಅವರ ಪತ್ನಿ ಅಶ್ವಿನಿ ಪುನೀತ ರಾಜಕುಮಾರ ಅವರು ಪ್ರಶಸ್ತಿ ಸ್ವೀಕರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೂಪರ್ ಸ್ಟಾರ್ ರಜನಿಕಾಂತ ಅವರು ಪ್ರದಾನ ಮಾಡಿದರು.
ಜೂ.ಎನ್‌ಟಿಆರ್, ಇನ್ಫೊಸಿಸ್‌ ಫೌಂಡೇಷನ್‌ನ ಸುಧಾಮೂರ್ತಿ, ನಟ ಶಿವರಾಜಕುಮಾರ, ಸಂಪುಟದ ಸಚಿವರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುನೀತ್‌ ಅಭಿಮಾನಿಗಳು ಮಳೆಯಲ್ಲಿಯೇ ನಿಂತು ಅಭಿಮಾನ ತೋರಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್, ಮೊದಲಿಗೆ ‘ಕನ್ನಡದ ಮಕ್ಕಳಿಗೆ ರಾಜ್ಯೋತ್ಸವದ ಶುಭಾಶಯಗಳು’ ಎಂದರು. ಹಾಗೇ, ‘ನಮ್ಮ ಅಪ್ಪು ಅವರು ದೇವರ ಮಗು. ಈಗ ದೇವರ ಬಳಿ ಹೋಗಿದ್ದಾನೆ. ಆದರೆ ಅವನ ಆತ್ಮ ನಮ್ಮ ಸುತ್ತಲೇ ಇದೆ ಎಂದರು.
‘ಕರ್ನಾಟಕ ರತ್ನ’ ಎಂಬ ಪ್ರಶಸ್ತಿಯನ್ನು ಇದೇ ಜಾಗದಲ್ಲಿ ಡಾ.ರಾಜ್‌ಕುಮಾರ್ ಅವರಿಗೆ ಕೊಟ್ಟಿದ್ದರು. ಆಗ ಕೂಡ ಮಳೆ ಬಂದಿತ್ತು ಎಂದರು.

ಪ್ರಮುಖ ಸುದ್ದಿ :-   ಆರೋಗ್ಯದಲ್ಲಿ ಏರುಪೇರು : ಸಚಿವ ಜಮೀರ್‌ ಅಹ್ಮದ್‌ ಆಸ್ಪತ್ರೆಗೆ ದಾಖಲು

ಜೂನಿಯರ್‌ ಎನ್‌ಟಿಆರ್ ಮಾತನಾಡಿ, ವ್ಯಕ್ತಿಗೆ ಪರಂಪರೆ ಮತ್ತು ಉಪನಾಮ ಎನ್ನುವುದು ಹಿರಿಯರಿಂದ ಬಂದಿರುತ್ತದೆ. ಆದರೆ, ವ್ಯಕ್ತಿತ್ವ ಮಾತ್ರ ಆ ವ್ಯಕ್ತಿಯಸ್ವಂತ ಸಂಪಾದನೆ. ಬರೀ ವ್ಯಕ್ತಿತ್ವದಿಂದ, ನಗುವಿನಿಂದ, ಅಹಂಕಾರವಿಲ್ಲದೆ, ಯುದ್ಧವನ್ನ ಮಾಡದೆ, ಒಂದು ರಾಜ್ಯವನ್ನೇ ಗೆದ್ದಿರುವವರು ಪುನೀತ ರಾಜ್‌ಕುಮಾರ್. ಅವರು ಕರ್ನಾಟಕದ ಸೂಪರ್ ಸ್ಟಾರ್. ಅಪರೂದ ವ್ಯಕ್ತಿ ಎಂದರು.
ಪುನೀತ್ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ ಈ ಪ್ರಶಸ್ತಿಯನ್ನು ಸ್ವೀಕರಿಸಿ ಭಾವುಕರಾದರು. ಪುನೀತ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಇದಕ್ಕೂ ಮೊದಲು ಈ ಮಹನೀಯರು ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕುವೆಂಪು – ಸಾಹಿತ್ಯ, ಡಾ. ರಾಜಕುಮಾರ್‌ – ಚಲನಚಿತ್ರ , ಎಸ್‌.ನಿಜಲಿಂಗಪ್ಪ – ರಾಜಕೀಯ, ಸಿ.ಎನ್‌.ಆರ್.ರಾವ್ – ವಿಜ್ಞಾನ, ದೇವಿಪ್ರಸಾದ್ ಶೆಟ್ಟಿ – ವೈದ್ಯಕೀಯ, ಪಂ.ಭೀಮಸೇನ ಜೋಷಿ – ಸಂಗೀತ, ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಗಳು – ಸಾಮಾಜಿಕ ಸೇವೆ, ದೇ. ಜವರೇಗೌಡ – ಸಾಹಿತ್ಯ, ಧರ್ಮಸ್ಥಳದ ಡಾ.ಡಿ. ವೀರೇಂದ್ರ ಹೆಗ್ಗಡೆ – ಸಾಮಾಜಿಕ ಸೇವೆ.

ಪ್ರಮುಖ ಸುದ್ದಿ :-   ಮಂಗಳೂರಲ್ಲಿ ಅಭೂತಪೂರ್ವ ರೋಡ್ ಶೋ : ಕರಾವಳಿ ಜನರ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement