ಹಳಿ ದಾಟುತ್ತಿದ್ದಾಗ ಬಂದೇ ಬಿಡ್ತು ಗೂಡ್ಸ್​ ರೈಲು: ಮುಂದೇನಾಯ್ತು ? ಮೈ ಜುಂ ಎನ್ನುವ ಈ ವೀಡಿಯೊ ನೋಡಿ

ನವದೆಹಲಿ: ರೈಲ್ವೆ ನಿಲ್ದಾಣದಲ್ಲಿ ಇತರ ಪ್ಲಾಟ್ ಫಾರ್ಮ್ ಗಳಿಗೆ ಹೋಗಲು ಶಾರ್ಟ್ ಕಟ್ ಗಳನ್ನು ತೆಗೆದುಕೊಳ್ಳದಂತೆ ಭಾರತೀಯ ರೈಲ್ವೆ ಯಾವಾಗಲೂ ಜನರಿಗೆ ಎಚ್ಚರಿಕೆ ನೀಡುತ್ತಲೆ ಇರುತ್ತದೆ, ರೈಲ್ವೆಯ ಸಾಕಷ್ಟು ಮನವಿಯ ನಂತರವೂ, ಜನರು ಹಳಿಗಳನ್ನು ದಾಟಲು ಮತ್ತು ಮತ್ತೊಂದು ಪ್ಲಾಟ್ ಫಾರ್ಮ್ ಗೆ ಹೋಗಲು ಇಂಥ ಶಾರ್ಟ್‌ ಕಟ್‌ಗಳನ್ನು ಪ್ರಯತ್ನಿಸುತ್ತಾರೆ. ಇಂಥದ್ದೇ ಘಟನೆಯಲ್ಲಿ ಹಳಿ ದಾಟುತ್ತಿದ್ದಾಗ ಗೂಡ್ಸ್​ ರೈಲು ಬಂದಿದ್ದರಿಂದ ವ್ಯಕ್ತಿಯೊಬ್ಬರು ಅಪಾಯದಲ್ಲಿ ಸಿಲುಕಿದ್ದರು. ಆದರೆ ಸಮಯ ಪ್ರಜ್ಞೆಯಿಂದ ಹಳಿ ಮೇಲೆ ಮಲಗಿಕೊಂಡು ಜೀವ ಉಳಿಸಿಕೊಂಡಿರುವ ದೃಶ್ಯದ ವಿಡಿಯೋವೊಂದು ವೈರಲ್‌ ಆಗಿದೆ.

ಬಿಹಾರದ ಭಾಗಲ್ಪುರದ ಕಹಲ್‌ಗಾಂವ್‌ ರೈಲ್ವೆ ನಿಲ್ದಾಣದ ಬಳಿಕ ಈ ಘಟನೆ ನಡೆದಿದ್ದು, ಮಾಧ್ಯಮ ವರದಿಗಳ ಪ್ರಕಾರ, ಭಾಗಲ್ಪುರದ ಕಹಲ್ಗಾಂವ್ ರೈಲ್ವೆ ನಿಲ್ದಾಣದಲ್ಲಿ ಈ ಮೈ ಜುಂ ಎನ್ನುವ ಘಟನೆ ನಡೆದಿದೆ. ಅಲ್ಲಿ ಒಬ್ಬ ವ್ಯಕ್ತಿಯು ಮತ್ತೊಂದು ಪ್ಲಾಟ್ ಫಾರ್ಮ್ ಗೆ ಹೋಗಲು ಮೇಲ್ಸೇತುವೆಯನ್ನು ಏರುವ ಬದಲು ರೈಲ್ವೆ ಹಳಿಯನ್ನು ದಾಟುವ ಕಿರುಹಾದಿಯನ್ನು ತೆಗೆದುಕೊಂಡಿದ್ದಾನೆ.

ಈ ವೇಳೆಯಲ್ಲಿ, ಒಂದು ಗೂಡ್ಸ್ ರೈಲು ಅದೇ ಹಳಿಯಲ್ಲಿ ಬಂದಿದೆ. ಆತ ತಕ್ಷಣವೇ ಹಳಿ ಮೇಲೆ ಮಲಗಿಕೊಂಡು ಜೀವ ಉಳಿಸಿಕೊಂಡಿದ್ದಾನೆ. ಆತನಿಗೆ ಯಾವುದೇ ಗಾಯಗಳು ಸಹ ಆಗಿಲ್ಲ. ಆದರೆ ಈ ರೀತಿ ಶಾರ್ಟ್‌ಕಟ್‌ ಬಳಸಿ ಈ ರೀತಿ ಮಾಡುವುದು ಯಾವತ್ತಿಗಾದರೂ ಅಪಾಯವೇ ಅಲ್ಲವೇ..?

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement