ಫ್ರಾನ್ಸ್ ನ ಶಸ್ತ್ರಚಿಕಿತ್ಸಕರು ಒಬ್ಬ ಮಹಿಳೆಯ ಮುಂಗೈ ಮೇಲೆ ಮೂಗನ್ನು ಬೆಳೆಸಿ, ನಂತರ ಆ ಮೂಗನ್ನು ಆಕೆಯ ಮುಖದ ಮೇಲೆ ಕಸಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ತನ್ನ ಮುಖದ ಮೇಲಿದ್ದ ಮೂಗಿನ ಹೆಚ್ಚಿನ ಭಾಗವನ್ನು ಮಹಿಳೆ ಕಳೆದುಕೊಂಡ ನಂತರ ಫ್ರಾನ್ಸ್ನ ಶಸ್ತ್ರಚಿಕಿತ್ಸಕರು ಆ ಮಹಿಳೆಯ ಮುಂಗೈಯ ಮೇಲೆ ಮೂಗನ್ನು ಯಶಸ್ವಿಯಾಗಿ ಕಸಿ ಮಾಡಿ ಬೆಳೆಸಿದ್ದಾರೆ ಮತ್ತು ನಂತರ ಆ ಮೂಗನ್ನು ಅವಳ ಮುಖದ ಮೇಲೆ ಕಸಿ ಮಾಡಿದ್ದಾರೆ ಎಂದು ಹೇಳಲಾಗಿದೆ.
2013ರಲ್ಲಿ ರೇಡಿಯೋಥೆರಪಿ ಮತ್ತು ಕೀಮೋಥೆರಪಿಯೊಂದಿಗೆ ಮೂಗಿನ ಕುಹರದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದ ನಂತರ ಟೌಲೌಸ್ನ ಮಹಿಳೆ ತನ್ನ ಮೂಗಿನ ಒಂದು ಭಾಗವನ್ನು ಕಳೆದುಕೊಂಡಿದ್ದಳು. ಪುನರ್ ನಿರ್ಮಾಣದ ಪ್ರಯತ್ನಗಳು ಮತ್ತು ಪ್ರಾಸ್ಥೆಟಿಕ್ಸ್ ವೈಫಲ್ಯಗಳ ಹೊರತಾಗಿಯೂ ಅವಳು ಆ ಪೂರ್ಣವಾದ ಅಂಗವಿಲ್ಲದೆ ಅನೇಕ ವರ್ಷಗಳ ಕಾಲ ಬದುಕಿದಳು. ಆದರೆ ಈಗ, ವೈದ್ಯಕೀಯ ಕಾರ್ಯವಿಧಾನದಿಂದಾಗಿ, ಅವಳು ಹೊಸ ಮೂಗನ್ನು ಪಡೆಯಲು ಸಾಧ್ಯವಾಗಿದೆ. ಕಸಿ ಮಾಡಿದ ಮೂಗನ್ನು ಅವಳ ತೋಳಿನ ಮೇಲೆ ಬೆಳೆಸಲಾಯಿತು ಎಂದು ಹೇಳಲಾಗಿದೆ.
ಇವ್ನಿಂಗ್ ಸ್ಟ್ಯಾಂಡರ್ಡ್ ಪ್ರಕಾರ, ಮೃದ್ವಸ್ಥಿಯನ್ನು ಬದಲಾಯಿಸಲು 3ಡಿ-ಮುದ್ರಿತ ಬಯೋಮೆಟೀರಿಯಲ್ ನಿಂದ ತಯಾರಿಸಿದ ಕಸ್ಟಮ್ ಮೂಗನ್ನು ಅವಳಿಗಾಗಿ ತಯಾರಿಸಲಾಯಿತು. ಇದನ್ನು ಆಕೆಯ ಮುಂಗೈಗೆ ಅಳವಡಿಸಲಾಯಿತು. ನಂತರ ವೈದ್ಯರು ಬದಲಿ ಮೂಗನ್ನು ಮುಚ್ಚಲು ಅವಳ ದೇಹದಿಂದ ಚರ್ಮದ ಕಸಿಯನ್ನು ಬಳಸಿದರು. ಅಪೆಂಡೇಜ್ ಅನ್ನು ಎರಡು ತಿಂಗಳವರೆಗೆ ಬೆಳೆಯಲು ಬಿಡಲಾಯಿತು, ನಂತರ ಅದನ್ನು ಅವಳ ಮುಖಕ್ಕೆ ಕಸಿ ಮಾಡಲಾಯಿತು ಎಂದು ವರದಿ ಹೇಳಿದೆ.
ಟೌಲೌಸ್ ಯೂನಿವರ್ಸಿಟಿ ಹಾಸ್ಪಿಟಲ್ ತನ್ನ ಫೇಸ್ಬುಕ್ ನಲ್ಲಿ ಮುಂಗೈಯ ಮೇಲೆ ಮೂಗು ಬೆಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದೆ. ಹೊಸ ಮೂಗನ್ನು ಮಹಿಳೆಯ ಮುಖಕ್ಕೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ಆಸ್ಪತ್ರೆ ಹೇಳಿದೆ.
ಕಸಿ ಯಶಸ್ವಿಯಾಗಿ ನೆರವೇರಿದೆ. ಎರಡು ತಿಂಗಳುಗಳ ಕಾಲ ಮುಂಗೈಯಲ್ಲಿ ಇರಿಸಿದ ನಂತರ ಈಗ ಮುಖದಲ್ಲಿರುವ ಮೂಗಿನ ಭಾಗಕ್ಕೆ ಕಸಿ ಮಾಡಲಾಗಿದೆ. ರಕ್ತನಾಳಗಳ ಅನಸ್ಟೋಮೋಸ್ ಗಳಿಂದ ಸೂಕ್ಷ್ಮ-ಶಸ್ತ್ರಚಿಕಿತ್ಸೆಯನ್ನು ಬಳಸಿಕೊಂಡು ಯಶಸ್ವಿಯಾಗಿ ಮಾಡಿ ಮುಗಿಸಲಾಗಿದೆ ಎಂದು ಆಸ್ಪತ್ರೆಗೆ ಹೇಳಿದೆ.
ಈಗ ಮಹಿಳೆ ಆರೋಗ್ಯ ಹೇಗಿದೆ?
ಮೂಗಿನ ಕಸಿ ಮಾಡಿಸಿಕೊಂಡ ನಂತರ ಮಹಿಳೆ ಆರೋಗ್ಯವಾಗಿದ್ದಾರೆ ಮತ್ತು ಮೇಲ್ವಿಚಾರಣೆಯನ್ನು ಸಹ ಮುಂದುವರಿಸಲಾಗಿದೆ ಎಂದು ಫೇಸ್ಬುಕ್ ನಲ್ಲಿ ಇರುವ ಪೋಸ್ಟ್ ಉಲ್ಲೇಖಿಸಿದೆ.
ಇವ್ನಿಂಗ್ ಸ್ಟ್ಯಾಂಡರ್ಡ್ ಪ್ರಕಾರ, ವೈದ್ಯರು ಮೈಕ್ರೋ ಸರ್ಜರಿ ಮತ್ತು ತೋಳಿನ ಚರ್ಮದಲ್ಲಿರುವ ರಕ್ತನಾಳಗಳನ್ನು ಮಹಿಳೆಯ ಮುಖದ ರಕ್ತನಾಳಗಳಿಗೆ ಸಂಪರ್ಕಿಸಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ 10 ದಿನಗಳು ಮತ್ತು ಮೂರು ವಾರಗಳ ಆಂಟಿಬಯೋಟಿಕ್ ಗಳ ನಂತರ, ರೋಗಿಯು ತುಂಬಾ ಉತ್ತಮವಾಗಿ ಸ್ಪಂದಿಸುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ರೀತಿಯ ಅಂಗಗಳ ಪುನರ್ ನಿರ್ಮಾಣವನ್ನು ಮತ್ತು ಕಸಿ ಮಾಡಿರುವುದು ಇದೇ ಮೊದಲು ಮತ್ತು ಇದು ಮೂಳೆಗಳ ಪುನರ್ ನಿರ್ಮಾಣದಲ್ಲಿ ಪರಿಣತಿ ಹೊಂದಿರುವ ಬೆಲ್ಜಿಯಂನ ವೈದ್ಯಕೀಯ ಸಾಧನಗಳ ತಯಾರಕರಾದ ಸೆರ್ಹಮ್ ಕಂಪನಿಯೊಂದಿಗೆ ವೈದ್ಯಕೀಯ ತಂಡಗಳ ಸಹಯೋಗದಿಂದಾಗಿ ಸಾಧ್ಯವಾಗಿದೆ ಎಂದು ವೈದ್ಯರು ಹೇಳಿದರು.
ಆದಾಗ್ಯೂ, ಶಸ್ತ್ರಚಿಕಿತ್ಸಾ ವಿಧಾನದ ಕೆಲವು ಅನಾನುಕೂಲಗಳು ಶಸ್ತ್ರಚಿಕಿತ್ಸೆಯಿಂದ ಬರುವ ಅಪಾಯಗಳನ್ನು ಒಳಗೊಂಡಿರಬಹುದು, ಅವುಗಳೆಂದರೆ:
ಅರಿವಳಿಕೆ ಸಮಸ್ಯೆಗಳು
ರಕ್ತಸ್ರಾವ
ರಕ್ತ ಹೆಪ್ಪುಗಟ್ಟುವಿಕೆಯ ರಚನೆ
ಸೋಂಕಿನ ಸಾಧ್ಯತೆ
ಗುಣವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ
ಆಯಾಸ ಮತ್ತು ದೀರ್ಘಕಾಲದ ಆಯಾಸ
ನಿಮ್ಮ ಕಾಮೆಂಟ್ ಬರೆಯಿರಿ