ಶ್ರದ್ಧಾ ಭೀಕರ ಕೊಲೆ ಪ್ರಕರಣ: ಕೊಂದು ದೇಹ ಫ್ರಿಡ್ಜ್‌ನಲ್ಲಿಟ್ಟು ಬೇರೆ ಮಹಿಳೆಯರ ಜೊತೆ ಡೇಟಿಂಗ್‌ ಶುರು ಮಾಡಿದ್ದ ಕೊಲೆ ಆರೋಪಿ ಅಫ್ತಾಬ್…!

 ನವದೆಹಲಿ: ಶ್ರದ್ಧಾ ಕೊಲೆ ಪ್ರಕರಣದ ಆಘಾತಕಾರಿ ಅಪ್‌ಡೇಟ್‌ನಲ್ಲಿ, ಆರೋಪಿ ಅಫ್ತಾಬ್ ಪೂನಾವಾಲಾ ದಕ್ಷಿಣ ದೆಹಲಿಯ ಛತ್ತರ್‌ಪುರ ಪಹಾಡಿಯಲ್ಲಿ ತನ್ನ ಲೈವ್-ಇನ್ ಪಾರ್ಟ್ನರಳನ್ನು ಕೊಂದ ಕೆಲವು ದಿನಗಳ ನಂತರ ಮತ್ತೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಮೂಲಗಳ ಪ್ರಕಾರ, ಆತ 2019 ರಲ್ಲಿ ಶ್ರದ್ಧಾ ವಾಕರ್ ಅವಳನ್ನು ಭೇಟಿಯಾದ ಅದೇ ಡೇಟಿಂಗ್ ಅಪ್ಲಿಕೇಶನ್ ಅನ್ನು ಬಳಸಿ ಇತರ ಹುಡುಗಿಯರೊಂದಿಗೆ ಡೇಟಿಂಗ್ ಪ್ರಾರಂಭಿಸಿದ್ದ ಎಂದು ಹೇಳಲಾಗಿದೆ. ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಡುವಾಗ ಆತ ಬೇರೆ ಹುಡುಗಿಯರೊಂದಿಗೆ ಮಾತನಾಡುತ್ತಿದ್ದ. ಗಮನಾರ್ಹವಾಗಿ, ಈ ದೆಹಲಿ ಕೊಲೆ ಪ್ರಕರಣವು ದೇಶವನ್ನು ಬೆಚ್ಚಿಬೀಳಿಸಿತು ಏಕೆಂದರೆ ಆರು ತಿಂಗಳ ನಂತರ ಅದನ್ನು ಕಂಡುಹಿಡಿಲಾಯಿತು, ಇದರಲ್ಲಿ ಶ್ರದ್ಧಾಳನ್ನು ಆಕೆಯ ಗೆಳೆಯ ಆಫ್ತಾಬ್ ಕೊಂದ ನಂತರ ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಲಾಯಿತು. ಸದ್ಯ ಅವರು 5 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಗೆಳತಿ ಜೀವಂತವಾಗಿದ್ದಾಳೆ ಎಂದು ಅನಿಸುವಂತೆ ಮಾಡಲು ಜೂನ್‌ ವರೆಗೆ ಆಕೆಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಬಳಸಿದ್ದ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಮೇ 18ರಂದು ನಡೆದ 26 ವರ್ಷದ ಪಾಲ್ಘರ್ ಹುಡುಗಿಯ ಬರ್ಬರ ಹತ್ಯೆಯು ಇಡೇ ದೇಶವನ್ನೇ ಬೆಚ್ಚಿಬೀಳಿಸಿದೆ. ಈತ ಅವಳನ್ನು ಕೊಲೆ ಮಾಡಿದ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಹಾಗೂ ಹದಿನೆಂಟು ದಿನಗಳ ನಂತರ ದೇಹದ ತುಂಡುಗಳನ್ನು ದೇಹದ ಬೇರೆಬೇರೆ ಕಡೆ ರಾತ್ರಿ ಸಮಯದಲ್ಲಿ ಬೀಸಾಡಿದ್ದ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ಐವರು ಜೆಎಂ ಭಯೋತ್ಪಾಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್‌

ನವೆಂಬರ್ 14 ರಂದು ದೆಹಲಿ ಪೊಲೀಸರು ಪೂನಾವಾಲಾನನ್ನು ಬಂಧಿಸಿದ ನಂತರ ಈ ಭೀಕರ ಕೊಲೆ ಬೆಳಕಿಗೆ ಬಂದಿದೆ. ಇದೀಗ ಆರೋಪಿಯು ಪೈಶಾಚಿಕ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. “ಆತ ಒಂದೇ ದಿನದಲ್ಲಿ ಅಪರಾಧವನ್ನು ಒಪ್ಪಿಕೊಂಡ. ನನ್ನ ಎದುರೇ ಇದ್ದ ಆತ ಶ್ರದ್ಧಾಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ತಿಳಿದ ನಂತರ ನಾನು ಉಳಿದಿದ್ದನ್ನು ಕೇಳುವ ಸ್ಥಿತಿಯಲ್ಲಿಲ್ಲದ ಕಾರಣ ಎಲ್ಲವನ್ನೂ ಕೇಳಲು ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆಯ ತಂದೆ ಹೇಳಿದರು. ಹತ್ಯೆಯ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಬೆಚ್ಚಿಬೀಳಿಸುವ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಕೊಲೆ ಆರೋಪಿ ಅಫ್ತಾಬ್ ಕೊಲೆಯಾದ ಶ್ರದ್ಧಾ ಅವರ ಫೋನ್ ಎಸೆದ ಸ್ಥಳವನ್ನು ಪತ್ತೆಹಚ್ಚಲಾಗಿದೆ. ಆಕೆಯ ದೇಹವನ್ನು ತುಂಡು ಮಾಡಲು ಬಳಸಿದ ಆಯುಧಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಜೂನ್ ವರೆಗೆ ಆಕೆಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಬಳಸಿ ಆಕೆ ಜೀವಂತವಾಗಿದ್ದಾಳೆ ಎಂದು ನಂಬಿಸಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇಬ್ಬರ ನಡುವೆ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ದೆಹಲಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇದಲ್ಲದೆ, ಶ್ರದ್ಧಾಳನ್ನು ಕೊಂದ ನಂತರ ಪೂನಾವಾಲಾ ಡೇಟಿಂಗ್ ಆ್ಯಪ್‌ನಲ್ಲಿ ಹಲವಾರು ಮಹಿಳೆಯರನ್ನು ಭೇಟಿಯಾಗುವುದನ್ನು ಮುಂದುವರೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಧ್ಯಾರಾತ್ರಿಯ ನಂತರ ಜನರ ಚಲನವಲನ ಕಡಿಮೆಯಿರುವುದರಿಂದ ದೇಹದ ತುಂಡುಗಳನ್ನು ಕಪ್ಪು ಹಾಳೆಯಲ್ಲಿ ಸುತ್ತಿ ರಾತ್ರಿ 2 ಗಂಟೆಗೆ ಬಿಸಾಡಲು ತೆಗೆದುಕೊಂಡು ಹೋಗುತ್ತಿದ್ದೆ ಎಂದು ಪೂನಾವಾಲಾ ಪೊಲೀಸರಿಗೆ ತಿಳಿಸಿದ್ದಾನೆ.
ಶ್ರದ್ಧಾಳನ್ನು ಕೊಂದ ಬಳಿಕ ಶವವನ್ನು ಕೊಚ್ಚಿಟ್ಟಿದ್ದ ಕೊಠಡಿಯಲ್ಲಿಯೇ ಅಫ್ತಾಬ್ ಪ್ರತಿದಿನ ಮಲಗುತ್ತಿದ್ದ. ಶರೀರಗಳನ್ನು ೩೫ ತುಂಡು ಮಾಡಿ ಫ್ರಿಜ್ ನಲ್ಲಿಟ್ಟಿದ್ದ. ದೇಹದ ಭಾಗಗಳನ್ನು ಬಿಸಾಡಿದ ಬಳಿಕ ಅಫ್ತಾಬ್ ಫ್ರಿಡ್ಜ್ ಸ್ವಚ್ಛಗೊಳಿಸಿದ್ದ.

ಇಂದಿನ ಪ್ರಮುಖ ಸುದ್ದಿ :-   "ನಿಮಗೆ ನಾಚಿಕೆಯಾಗಬೇಕು, ನಿಮ್ಮ ವರ್ತನೆಗೆ ನಾನು ಕ್ಷಮೆಯಾಚಿಸ್ತೇನೆ : 'ಕಾಶ್ಮೀರ ಫೈಲ್ಸ್' ಬಗ್ಗೆ ಇಸ್ರೇಲಿ ಚಲನಚಿತ್ರ ನಿರ್ಮಾಪಕನ ಟೀಕೆಗಳಿಗೆ ಇಸ್ರೇಲಿ ರಾಯಭಾರಿ ತೀವ್ರ ವಾಗ್ದಾಳಿ

ಅಫ್ತಾಬ್‌ಗೆ ಮರಣದಂಡನೆ ವಿಧಿಸಲು ತಂದೆ ಆಗ್ರಹ
ಇದೀಗ ಶ್ರದ್ಧಾ ವಾಕರ್ ತಂದೆ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಇದಲ್ಲದೆ, ಘಟನೆಯ ಹಿಂದೆ ‘ಲವ್ ಜಿಹಾದ್’ ಕೋನವಿದೆ ಎಂದು ಅವರು ಶಂಕಿಸಿದ್ದಾರೆ. “ನನಗೆ ಲವ್ ಜಿಹಾದ್‌ ಬಗ್ಗೆ ಅನುಮಾನವಿದೆ. ಅಫ್ತಾಬ್‌ಗೆ ಮರಣದಂಡನೆ ವಿಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ದೆಹಲಿ ಪೊಲೀಸರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement