ಮರುವಿಚಾರಣೆ ನಂತರ ಟರ್ಕಿಶ್ ಕಲ್ಟ್‌ ನಾಯಕನಿಗೆ 8,658 ವರ್ಷಗಳ ಜೈಲು ಶಿಕ್ಷೆ…!

ಟರ್ಕಿಯ ಟೆಲಿವಾಂಜೆಲಿಸ್ಟ್ ಹಾಗೂ ಕಲ್ಟ್‌ ನಾಯಕ ಅದ್ನಾನ್ ಒಕ್ಟಾರ್‌ಗೆ ಮರುವಿಚಾರಣೆ ನಂತರ 8,658 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
“ಬೆಕ್ಕಿನ ಮರಿಗಳು (kittens)” ಎಂದು ಕರೆಯುವ ಅಲ್ಪ ವಸ್ತ್ರಧಾರಿ ಮಹಿಳೆಯರಿಂದ ಸುತ್ತುವರೆದಿರುವ ದೂರದರ್ಶನ ಕಾರ್ಯಕ್ರಮವನ್ನು ಮುನ್ನಡೆಸಿದ “ಕಲ್ಟ್ ಲೀಡರ್” ಅದ್ನಾನ್ ಒಕ್ಟಾರ್‌ ವಿರುದ್ಧದ ಆರೋಪಗಳ ಸರಣಿಗಾಗಿ ಮರುವಿಚಾರಣೆ ಮಾಡಲಾಗಿದೆ.
ಹರುನ್ ಯಾಹ್ಯಾ ಎಂಬ ಹೆಸರಿನಿಂದ ಕೂಡಿದ 66 ವರ್ಷ ವಯಸ್ಸಿನ ಈತ ಕಳೆದ ವರ್ಷವೂ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ, ವಂಚನೆ ಮತ್ತು ಬೇಹುಗಾರಿಕೆಯ ಯತ್ನ ಸೇರಿದಂತೆ ಹಲವಾರು ಅಪರಾಧಗಳಲ್ಲಿ ಜೈಲು ಪಾಲಾಗಿದ್ದರು.ಆ ಸಮಯದಲ್ಲಿ ಆಕ್ಟಾರ್‌ಗೆ 1,075 ವರ್ಷಗಳ ಶಿಕ್ಷೆ ವಿಧಿಸಲಾಯಿತು, ಆದರೆ ಮೇಲಿನ ನ್ಯಾಯಾಲಯವು ಕಾನೂನು ನ್ಯೂನತೆಗಳನ್ನು ಉಲ್ಲೇಖಿಸಿ ತೀರ್ಪನ್ನು ರದ್ದುಗೊಳಿಸಿತು ಮತ್ತು ಮರು ವಿಚಾರಣೆಗೆ ಆದೇಶಿಸಿತು.
ಬುಧವಾರ ಈ ಮರುವಿಚಾರಣೆಯ ಸಮಯದಲ್ಲಿ, ಇಸ್ತಾನ್‌ಬುಲ್‌ನ ಹೈ ಕ್ರಿಮಿನಲ್ ಕೋರ್ಟ್ ಒಕ್ಟಾರ್‌ ಹಾಗೂ ಆತನ 13 ಸಹಚರರಿಗೆ 8,658 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಅನಾಡೋಲು ಸುದ್ದಿ ಸಂಸ್ಥೆ ವರದಿ ಮಾಡಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ವಾಲಿಬಾಲ್ ಪಂದ್ಯದಲ್ಲಿ ಕೋರ್ಟ್‌ನಿಂದ ಹೊರಹೋದ ಚೆಂಡನ್ನು ಊಹಿಸಲಾಗದ ಪ್ರಯತ್ನದ ಮೂಲಕ ಮರಳಿ ಕೋರ್ಟ್‌ಗೆ ತಂದ ಆಟಗಾರ್ತಿ | ವೀಕ್ಷಿಸಿ

ಆಕ್ಟಾರ್ ತಮ್ಮದೇ ಆದ A9 ಟಿವಿ ಚಾನೆಲ್‌ನಲ್ಲಿ ಆಯೋಜಿಸಿದ ಟಾಕ್ ಶೋಗೆ ಅಂತಾರಾಷ್ಟ್ರೀಯ ಹೆಸರಾಯಿತು, ಇದು ಆಧುನಿಕ ಪಾಪ್ ಸಂಗೀತಕ್ಕೆ ನೃತ್ಯ ಮಾಡುವ ಮಹಿಳೆಯರ ಜೊತೆ ಧಾರ್ಮಿಕ ಚರ್ಚೆಗಳ ಮಿಶ್ರಣವನ್ನು ಒಳಗೊಂಡಿತ್ತು. ಆತನ ಕಂಪನಿಯನ್ನು ತೊರೆದ ಹಲವಾರು ಮಹಿಳೆಯರು, ಒಕ್ಟಾರ್ ತಮ್ಮನ್ನು ಲೈಂಗಿಕ ಗುಲಾಮಗಿರಿಗೆ ಒಳಪಡಿಸಿದ್ದಾನೆ ಎಂದು ಆರೋಪಿಸಿದ್ದರು.
ಲಂಡನ್ ಮೂಲದ ಆನ್‌ಲೈನ್ ಸುದ್ದಿ ವೆಬ್‌ಸೈಟ್, ಮಿಡಲ್ ಈಸ್ಟ್ ಐ ವರದಿಯ ಪ್ರಕಾರ, ಆಕ್ಟಾರ್ ತನ್ನ ಮತ್ತು ಇತರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಗರ್ಭನಿರೋಧಕಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಮಹಿಳೆಯೊಬ್ಬರು ಈ ಹಿಂದೆ ಸಾಕ್ಷ್ಯ ನೀಡಿದ್ದರು. ಆಕ್ಟಾರ್ ಮನೆಯಲ್ಲಿ ಸುಮಾರು 69,000 ಗರ್ಭನಿರೋಧಕ ಮಾತ್ರೆಗಳು ಪತ್ತೆಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಕ್ಟಾರ್ ಸಂಸ್ಥೆಯ ಮಾಜಿ ಸದಸ್ಯ, ರೂಪದರ್ಶಿಯಾಗಿದ್ದ ಎಬ್ರು ಸಿಮ್ಸೆಕ್, ಟರ್ಕಿಯ ದಿನಪತ್ರಿಕೆ ಪೋಸ್ಟಾಗೆ ಆತನ ಗುಂಪನ್ನು ತೊರೆಯುವ ಪರಿಣಾಮಗಳನ್ನು ಎದುರಿಸಬೇಕಾಯಿತು ಎಂದು ಹೇಳಿದ್ದರು.
1994ರಲ್ಲಿ ಟಿವಿಯಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ತನ್ನನ್ನು ನೋಡಿದ ನಂತರ ತನಗೆ ನಿನ್ನ”ಗೀಳು” ಎಂದು ಹೇಳಿದ್ದ ಒಕ್ಟಾರ್‌ನಿಂದ 300 ಕ್ಕೂ ಹೆಚ್ಚು ಮಾನನಷ್ಟ ಮೊಕದ್ದಮೆಗಳಿಗೆ ತಾನು ಒಳಗಾಗಿದ್ದೆ ಎಂದು ಸಿಮ್ಸೆಕ್ ಹೇಳಿದ್ದರು.

ಇಂದಿನ ಪ್ರಮುಖ ಸುದ್ದಿ :-   ಕಿಮೊಥೆರಪಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ ಫುಟ್ಬಾಲ್‌ ದಂತಕಥೆ ಪೀಲೆ : ವರದಿ

8658 ವರ್ಷಗಳು, ‘ದೀರ್ಘ’ ಜೈಲು ಶಿಕ್ಷೆ
ಆಕ್ಟಾರ್ ಜೈಲು ಶಿಕ್ಷೆಯು ದೇಶದಲ್ಲೇ ಅತಿ ದೀರ್ಘ ಜೈಲು ಶಿಕ್ಷೆಯಾಗಿದೆ. ಇದು 9,803 ವರ್ಷಗಳಾಗಿದೆ. ಭಯೋತ್ಪಾದಕ ಸಂಘಟನೆಯನ್ನು ನಿರ್ದೇಶಿಸುವುದು, ಲೈಂಗಿಕ ನಿಂದನೆ, ಶಿಕ್ಷಣದ ಹಕ್ಕನ್ನು ತಡೆಗಟ್ಟುವುದು, ಹಿಂಸಿಸುವಿಕೆ, ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಮತ್ತು ವೈಯಕ್ತಿಕ ಡೇಟಾವನ್ನು ದಾಖಲಿಸುವುದು ಸೇರಿದಂತೆ ಅಪರಾಧಗಳ ಸರಣಿಗಾಗಿ ಒಕ್ಟಾರ್ ವೈಯಕ್ತಿಕವಾಗಿ ತಲಾ 891 ವರ್ಷಗಳ ಶಿಕ್ಷೆ ಪಡೆದರು ಎಂದು ಅನಾಡೋಲು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮ್ಯಾನೇಜರ್ ಹುದ್ದೆಯಲ್ಲಿದ್ದ ಒಕ್ಟಾರ್‌ನನ್ನು ಇತರ ಆರೋಪಿಗಳ ಅಪರಾಧಗಳಿಗೆ ಸಹ ಹೊಣೆಗಾರರನ್ನಾಗಿ ಮಾಡಲಾಯಿತು. ಆದ್ದರಿಂದ, ಒಟ್ಟಾರೆಯಾಗಿ, ಇತ್ತೀಚಿಗೆ ಒಕ್ಟಾರ್ ಶಿಕ್ಷೆಯು 8658 ವರ್ಷಗಳಿಗೆ ಒಟ್ಟುಗೂಡಿಸುತ್ತದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement