ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ವಜಾಗೊಳಿಸಿದ ಬಿಸಿಸಿಐ: ಹೊಸದಾಗಿ ಅರ್ಜಿ ಆಹ್ವಾನ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಹಿರಿಯರ ಪುರುಷರ ತಂಡಕ್ಕೆ ರಾಷ್ಟ್ರೀಯ ಆಯ್ಕೆಗಾರರ ​​ಸ್ಥಾನಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿದೆ. ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 28ರಂದು ಸಂಜೆ 6 ಗಂಟೆ ಕೊನೆಯ ಸಮಯವಾಗಿದೆ ಎಂದು ಬಿಸಿಸಿಐ ಹೇಳಿದೆ. ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಮಂಡಳಿಯು ರದ್ದುಗೊಳಿಸಿದೆ. ಸಮಿತಿಯ ಇತರ ಸದಸ್ಯರು … Continued

ಒಂದು ವರ್ಷದ ಬಾಲಕನ ಮೇಲೆ ಲೈಂಗಿಕ ಶೋಷಣೆ, ಹತ್ಯೆ : ಆರೋಪಿಗೆ ಗಲ್ಲು ಶಿಕ್ಷೆ ನೀಡಿದ ಬೆಂಗಳೂರಿನ ವಿಶೇಷ ಕೋರ್ಟ್‌

ಬೆಂಗಳೂರು: ಒಂದು ವರ್ಷದ ಬಾಲಕನ ಮೇಲೆ  ಲೈಂಗಿಕದೌರ್ಜನ್ಯ ನಡೆಸಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿಗೆ ಬೆಂಗಳೂರಿನ ತ್ವರಿತಗತಿ ವಿಶೇಷ ನ್ಯಾಯಾಲಯವು ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ. ಯಶವಂತಪುರದ ಕರಿಮಣಿ ಕೊಳಚೆ ಪ್ರದೇಶದ ನಿವಾಸಿ ಮೂರ್ತಿ ಎಂಬಾತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನಗರದ 1ನೇ … Continued

ದತ್ತಪೀಠಕ್ಕೆ ಎಂಟು ಸದಸ್ಯರ ಆಡಳಿತ ಮಂಡಳಿ ರಚನೆ: ಅರ್ಚಕರ ನೇಮಕಕ್ಕೂ ಅಧಿಕಾರ

ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ಸರ್ಕಾರ ಎಂಟು ಸದಸ್ಯರ ಆಡಳಿತ ಮಂಡಳಿ ರಚನೆ ಮಾಡಿ ಆದೇಶ ಹೊರಡಿಸಿದೆ. ಆಡಳಿತ ಮಂಡಳಿಗೆ ದತ್ತಪೀಠಕ್ಕೆ ಅರ್ಚಕರ ನೇಮಕ ಕುರಿತಂತೆ ನಿರ್ಧಾರ ಮಾಡುವ ಅಧಿಕಾರ ನೀಡಲಾಗಿದೆ. ರಾಜ್ಯ ಸರ್ಕಾರ ಇಂದು ಎಂಟು ಜನರ ಆಡಳಿತ ಮಂಡಳಿ ಸದಸ್ಯರನ್ನ ನೇಮಕ ಮಾಡಿದ್ದು, ಇದರಲ್ಲಿ ಇಬ್ಬರು ಮಹಿಳೆಯರು, ಒಬ್ಬರು ಮುಸ್ಲಿಂ ವ್ಯಕ್ತಿ … Continued

ತೆಲಂಗಾಣ: ತಾನು ಕಾಂಗ್ರೆಸ್‌ಗೆ ಸೇರುವುದಾಗಿ ಆರೋಪಿಸಿದ ಬಿಜೆಪಿ ಸಂಸದನಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ ಹಾಕಿದ ಕೆಸಿಆರ್ ಪುತ್ರಿ

ಹೈದರಾಬಾದ್‌ : ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಮತ್ತು ನಿಜಾಮಾಬಾದ್ ವಿಧಾನ ಪರಿಷತ್‌ ಸದಸ್ಯೆ ಕಲ್ವಕುಂಟ್ಲ ಕವಿತಾ ಅವರು ತಮ್ಮ ಮೊದಲಿನ ಪಕ್ಷವಾದ ಕಾಂಗ್ರೆಸ್‌ಗೆ ಸೇರಲು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪರ್ಕದಲ್ಲಿದ್ದಾರೆ ಎಂದು ತಮ್ಮ ವಿರುದ್ಧ ಆರೋಪಿಸಿರುವ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಮತ್ತು ತಮ್ಮ … Continued

ಏನಿದರ ಮರ್ಮ…? :ಚೀನಾದ ಮಂಗೋಲಿಯಾದಲ್ಲಿ 12 ದಿನಗಳಿಂದ ನಿರಂತರವಾಗಿ ವೃತ್ತಕಾರದಲ್ಲಿ ಸುತ್ತುತ್ತಿರುವ ಕುರಿಗಳ ಹಿಂಡು | ವೀಕ್ಷಿಸಿ

ಕುರಿಗಳ ಹಿಂಡು ಇಡೀ ಹನ್ನೆರಡು ದಿನಗಳ ಕಾಲ ನಿಲ್ಲದೆ ವೃತ್ತಾಕಾರದಲ್ಲಿ ಸುತ್ತುತ್ತಿವೆ. ನವೆಂಬರ್ ಆರಂಭದಲ್ಲಿ ತೆಗೆದ ತುಣುಕಿನಲ್ಲಿ ಉತ್ತರ ಚೀನಾದಲ್ಲಿ ಕುರಿಗಳು ನಿರಂತರ ಪ್ರದಕ್ಷಿಣಾಕಾರವಾಗಿ ಸುತ್ತುತ್ತಿರುವುದನ್ನು ಕಾಣಬಹುದು.ವೈರಲ್ ಕ್ಲಿಪ್‌ನಲ್ಲಿನ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಜನರು ಆಘಾತಕ್ಕೊಳಗಾಗಿದ್ದಾರೆ ಮತ್ತು ಗೊಂದಲಕ್ಕೊಳಗಾಗಿದ್ದಾರೆ. ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಪ್ರದೇಶದಲ್ಲಿ 12 ದಿನಗಳಿಂದ ನೂರಾರು ಕುರಿಗಳು ವೃತ್ತಾಕಾರವಾಗಿ ಸುತ್ತುತ್ತಿವೆ. ಕಣ್ಗಾವಲು … Continued

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ, ತೃತೀಯ ಲಿಂಗಿಗಳೂ ಆಯ್ಕೆ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ‘ತಾತ್ಕಾಲಿಕ ಆಯ್ಕೆ’ ಪಟ್ಟಿ ಬಿಡುಗಡೆ ಮಾಡಿದೆ. 13,363 ಪರೀಕ್ಷಾರ್ಥಿಗಳು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದು, 3 ತೃತೀಯ ಲಿಂಗಿಗಳು ಆಯ್ಕೆಯಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ ಅವರು, ಒಟ್ಟು 15000 … Continued

ಬಿ.ಇಡಿ. ಪರೀಕ್ಷೆಯಲ್ಲಿ ಧಾರವಾಡ ಜೆಎಸ್ಎಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ : ೨೦೨೧-೨೨ ನೇ ಸಾಲಿನ ಬಿ.ಇಡಿ.-೧ ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಧಾರವಾಡ ವಿದ್ಯಾಗಿರಿಯ ಶ್ರೀ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯರ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮಂದಸ್ಮಿತ ರಾಘುನವರ (೯೧.೮೩%), ಸಂಗೀತ ಹೆಚ್. ಆರ್. (೯೧.೩೩%) ಮತ್ತು ಸಾನುಬಾರ ಹಿತ್ತಲಮನಿ (೯೧%) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಉಳಿದೆಲ್ಲ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. … Continued

ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಮಹಾತ್ಮಾ ಗಾಂಧೀಜಿ ಮರಿ ಮೊಮ್ಮಗ : ‘ಐತಿಹಾಸಿಕ’ ಎಂದ ಕಾಂಗ್ರೆಸ್

ಭಾರತ ಜೋಡೋ ಯಾತ್ರೆಯು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರದಿಂದ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಪುನರಾರಂಭವಾಯಿತು ಹಾಗೂ ಆರಂಭವಾದ ಕೆಲವು ಗಂಟೆಗಳ ನಂತರ ಶೆಗಾಂವ್‌ನಲ್ಲಿ ಮಹಾತ್ಮಾ ಗಾಂಧೀಜಿ ಮರಿಮೊಮ್ಮಗ ತುಷಾರ್ ಗಾಂಧಿ ಯಾತ್ರೆಯನ್ನು ಸೇರಿಕೊಂಡರು. ಗುರುವಾರ ಟ್ವೀಟ್ ನಲ್ಲಿ ತುಷಾರ್ ಗಾಂಧಿ ಶೇಗಾಂವ್ ತನ್ನ ಜನ್ಮಸ್ಥಳ ಎಂದು ಹೇಳಿದ್ದರು. ನವೆಂಬರ್‌ 18 ರಂದು ಶೇಗಾಂವ್‌ನಲ್ಲಿ ಭಾರತ್ … Continued

ಬೆಂಗಳೂರಿನ ಚಿಲುಮೆ ಕಚೇರಿ ಮೇಲೆ ಪೊಲೀಸರ ದಾಳಿ; ನಾಲ್ವರು ವಶಕ್ಕೆ..?

ಬೆಂಗಳೂರು: ಬೆಂಗಳೂರಿನಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಕಳುವು ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆ ಮೇಲೆ ಪೊಲೀಸರು ಶುಕ್ರವಾರ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಚಿಲುಮೆ ಕಚೇರಿ ಮೇಲೆ ಹಲಸೂರು ಗೇಟ್​ ಪೊಲೀಸರು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದುಕೊಂಡು ಈ ಸಂಬಂಧ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. … Continued

ಪ್ರಯಾಣಿಕರೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡುವ ದೆಹಲಿ ಕಾರು ಚಾಲಕ: ಬೆರಗಾದ ಇಂಟರ್ನೆಟ್‌…ವೀಕ್ಷಿಸಿ

ದೊಡ್ಡ ದೊಡ್ಡ ನಗರಗಳಲ್ಲಿ ಕಾರು ಓಡಿಸುವ ಚಾಲಕರು ವಿಮಾನ ನಿಲ್ದಾಣಗಳಲ್ಲಿ ಬಂದಿಳಿದ ವಿದೇಶಿಗರ ಜೊತೆಗೆ ಇಂಗ್ಲೀಷ್ ನಲ್ಲಿ ಮಾತಾಡುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ ದೆಹಲಿಯ ಕ್ಯಾಬ್ ಚಾಲಕನೊಬ್ಬ ಉಳಿದವರಿಗಿಂತ ತೀರ ವಿಭಿನ್ನವಾಗಿದ್ದಾನೆ. ಈತ ತನ್ನ ಪ್ರಯಾಣಿಕನೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ವ್ಯಕ್ತಿಯೊಬ್ಬರು ಕ್ಯಾಬ್ ನಲ್ಲಿ ಚಾಲಕನ ಜೊತೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡಿದ ಸಂಭಾಷಣೆಯ ವೀಡಿಯೊವನ್ನು … Continued