ನವದೆಹಲಿ: ದೆಹಲಿ ಆಮ್ ಆದ್ಮಿ ಪಾರ್ಟಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಹಳೆಯ ವೀಡಿಯೊವೊಂದನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ.
ತಿಹಾರ್ ದೆಹಲಿ ಸರ್ಕಾರದ ಅಡಿಯಲ್ಲಿದೆ ಮತ್ತು ಸತ್ಯೇಂದ್ರ ಜೈನ್ ಅರವಿಂದ್ ಕೇಜ್ರಿವಾಲ್ ಸಂಪುಟದಲ್ಲಿ ಜೈಲು ಸಚಿವರಾಗಿದ್ದರು ಎಂಬುದು ಉಲ್ಲೇಖನೀಯ. ಜೈನ್ ಅವರನ್ನು ಜೈಲಿನಲ್ಲಿ ವಿಐಪಿ ರೀತಿಯಲ್ಲಿ ನಡೆಸಿಕೊಂಡ ಆರೋಪದ ಮೇಲೆ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ ಕುಮಾರ್ ಅವರನ್ನು ಅಮಾನತುಗೊಳಿಸಿದ ಕೆಲವೇ ದಿನಗಳ ನಂತರ ಈ ವೀಡಿಯೊ ಹೊರಬಿದ್ದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಅವರಿಗೆ ಗುರುವಾರ ದೆಹಲಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ತಿಹಾರ ಜೈಲು ಡಿಜಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸಿನ ಮೇರೆಗೆ ಕೇಂದ್ರದ ಗೃಹ ಸಚಿವಾಲಯ (ಎಂಎಚ್‌ಎ) ನೇಮಿಸುತ್ತದೆ. ಅದು ದೆಹಲಿ ಸರ್ಕಾರ ಒದಗಿಸಿದ ಪಟ್ಟಿಯಿಂದ ಅಭ್ಯರ್ಥಿಯನ್ನು ಶಾರ್ಟ್‌ಲಿಸ್ಟ್ ಮಾಡುತ್ತದೆ. ತಿಹಾರ್ ಜೈಲಿನಲ್ಲಿ ಜೈನ್ ಅವರಿಗೆ ವಿಐಪಿ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ದೆಹಲಿಯ ನ್ಯಾಯಾಲಯದಲ್ಲಿ ಪ್ರತಿಪಾದಿಸಿತ್ತು. ದೆಹಲಿ ಸಚಿವರಿಗೆ ಜೈಲಿನಲ್ಲಿ ಐಷಾರಾಮಿ ವ್ಯಸ್ಥೆ ಕಲ್ಪಿಸಿಕೊಟ್ಟಿರುವುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಇಡಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದೆ.ಅಪರಿಚಿತ ವ್ಯಕ್ತಿಗಳು ಜೈನ್‌ಗೆ ಮಸಾಜ್‌ಮಾಡುತ್ತಿದ್ದಾರೆ. ಅವರಿಗೆ ವಿಶೇಷ ಆಹಾರ ನೀಡಲಾಗುತ್ತಿದೆ ಎಂದು ಇ.ಡಿ. ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್.ವಿ. ರಾಜು ನ್ಯಾಯಾಲಯಕ್ಕೆ ತಿಳಿಸಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿದೆ. ಜೈಲ್ ಜೈನ್ ತನ್ನ ಸೆಲ್‌ನೊಳಗೆ ಅಪರಿಚಿತ ವ್ಯಕ್ತಿಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನು ತನಿಖಾ ಸಂಸ್ಥೆ ಸಲ್ಲಿಸಿದೆ.
ಸಹ-ಆರೋಪಿ ಅಂಕುಶ್ ಜೈನ್ ಅವರ ಮೇಲ್ವಿಚಾರಣೆಯಲ್ಲಿ ವ್ಯಕ್ತಿಯೊಬ್ಬರು ಜೈನ್ ಅವರ ಸೆಲ್ ಸ್ವಚ್ಛಗೊಳಿಸುತ್ತಾರೆ, ಒರೆಸುತ್ತಾರೆ ಎಂದು ಸಹ ಇ.ಡಿ.ಸಂಸ್ಥೆ ಆರೋಪಿಸಿತ್ತು. ಸೆಲ್‌ನಲ್ಲಿ ಬೆಡ್‌ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳನ್ನು ಬದಲಾಯಿಸಲಾಗುತ್ತಿದೆ ಎಂದು ವರದಿ ಮಾಡಿತ್ತು. ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆಲವು ಸಿಸಿಟಿವಿ ಚಿತ್ರಗಳನ್ನು ನ್ಯಾಯಾಲಯದೊಂದಿಗೆ ಹಂಚಿಕೊಂಡಿದ್ದಾರೆ ಮತ್ತು ಹೆಚ್ಚಿನ ಸಮಯ ಜೈನ್ ಆಸ್ಪತ್ರೆಯಲ್ಲಿ ಅಥವಾ ಜೈಲಿನಲ್ಲಿ ವಿವಿಧ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದರು
ಸತ್ಯೇಂದ್ರ ಜೈನ್ ಹಾಗೂ ಆಮ್ ಆದ್ಮಿ ಪಕ್ಷವು ಈ ಆರೋಪವನ್ನು ಅಸಂಬದ್ಧ ಮತ್ತು ಆಧಾರರಹಿತ ಆರೋಪ ಎಂದು ತಳ್ಳಿ ಹಾಕಿದೆ. 58 ವರ್ಷದ ದೆಹಲಿ ಸಚಿವರನ್ನು ಮೇ 30 ರಂದು ಬಂಧಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ