ಇರಾನ್‌ನ ಹಿಜಾಬ್ ವಿರೋಧಿ ಹೋರಾಟಕ್ಕೆ ಬೆಂಬಲಿಸಿ ಫಿಫಾ ವಿಶ್ವಕಪ್‍ನಲ್ಲಿ ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್ ಫುಟ್‌ಬಾಲ್‌ ತಂಡ | ವೀಕ್ಷಿಸಿ

ಕತಾರ್: ಸೋಮವಾರ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ವಿಶ್ವಕಪ್ ಪಂದ್ಯಕ್ಕೂ ಮುನ್ನ, ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ಇರಾನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಾಕಾರರನ್ನು ಬೆಂಬಲಿಸಲು ತಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup) ಫುಟ್‍ಬಾಲ್ ಟೂರ್ನಿ ವಿವಾದಗಳಿಂದ ಸದ್ದು ಮಾಡುತ್ತಿದ್ದು, ಇರಾನ್ (Iran) ತಂಡ ತಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಿ ಇರಾನ್‌ ಹಿಜಾಬ್‌ ವಿರೋಧಿ ಪ್ರತಿಭಟನೆಗೆ ಬೆಂಬಲ ಸೂಚಿಸಿರುವುದು ಇರಾನ್‌ನ ಮುಜುಗರಕ್ಕೆ ಕಾರಣವಾಗಿದೆ.
ಪಂದ್ಯಕ್ಕೂ ಮುಂಚಿತವಾಗಿ ನಡೆದ ಮಾಧ್ಯಮಗೋಷ್ಠಿಯಲ್ಲಿ, ಇರಾನ್‌ನ ನಾಯಕ ಅಲಿರೆಜಾ ಜಹಾನ್‌ಬಕ್ಷ್, ಇರಾನ್‌ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನಾಕಾರರನ್ನು ಬೆಂಬಲಿಸಲು ಇರಾನ್‌ನ ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಬೇಕೇ ಅಥವಾ ಬೇಡವೇ ಎಂಬುದನ್ನು ತಂಡವು “ಸಾಮೂಹಿಕವಾಗಿ” ನಿರ್ಧರಿಸುತ್ತದೆ ಎಂದು ಹೇಳಿದ್ದರು. ಫುಟ್‍ಬಾಲ್ ಪಂದ್ಯ ಆರಂಭಕ್ಕೂ ಮುನ್ನ ಎರಡೂ ತಂಡಗಳ ರಾಷ್ಟ್ರಗೀತೆ ಹಾಡಿಸುವುದು ನಿಯಮ. ಆದರೆ ಇರಾನ್ ಆಟಗಾರರು ತಮ್ಮ ದೇಶದ ರಾಷ್ಟ್ರಗೀತೆ ಹಾಡದೇ ಪ್ರತಿಭಟಿಸಿದ್ದಾರೆ.

ಏತನ್ಮಧ್ಯೆ, ಎಹ್ಸಾನ್ ಹಜ್ಸಾಫಿಯನ್ನು ಸಮರ್ಥಿಸುತ್ತಾ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಭಾನುವಾರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಳವಳವನ್ನು ಅವರು ಎಚ್ಚರಿಕೆಯಿಂದ ಹೇಳಿದ್ದರು.
ನಮ್ಮ ದೇಶದಲ್ಲಿನ ಪರಿಸ್ಥಿತಿಗಳು ಸರಿಯಿಲ್ಲ ಮತ್ತು ನಮ್ಮ ಜನರು ಸಂತೋಷವಾಗಿಲ್ಲ. ನಾವು ಇಲ್ಲಿದ್ದೇವೆಂದರೆ ನಾವು ಅವರ ಧ್ವನಿಯಾಗಬಾರದು ಎಂದರ್ಥವಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಪರಿಸ್ಥಿತಿಗಳು ಬದಲಾಗುತ್ತವೆ ಎಂದು ನಾನು ಭಾವಿಸುತ್ತೇನೆ ಉಳಿದವುಗಳನ್ನು ನೇರವಾಗಿ ಉಲ್ಲೇಖಿಸದೆ. ಅವರು ಹೇಳಿದ್ದರು.

ನವೆಂಬರ್‌ನಲ್ಲಿ, ದುಬೈನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಪಂದ್ಯದ ಆರಂಭದಲ್ಲಿ ರಾಷ್ಟ್ರೀಯ ಬೀಚ್ ಫುಟ್‌ಬಾಲ್ ತಂಡವು ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದು ರಾಯಿಟರ್ಸ್ ವರದಿ ಉಲ್ಲೇಖಿಸಿದೆ. ಪಂದ್ಯದ ವೇಳೆ, ಸಯೀದ್ ಪಿರಾಮೂನ್ ಗೋಲು ಗಳಿಸಿದ ನಂತರ ಇರಾನ್‌ನಲ್ಲಿ ಪ್ರತಿಭಟನಾಕಾರರಿಗೆ ಒಗ್ಗಟ್ಟಿನ ಪ್ರದರ್ಶನವಾಗಿ ಕ್ಯಾಮರಾದಲ್ಲಿ ಸಾಂಕೇತಿಕವಾಗಿ ತನ್ನ ಕೂದಲನ್ನು ಕತ್ತರಿಸಿದರು.
ಆದಾಗ್ಯೂ, ಪ್ರತಿಭಟನೆಯ ಕಾರ್ಯವು ಗಮನಕ್ಕೆ ಬಂದಿಲ್ಲ ಮತ್ತು ಹೇಳಿಕೆಯಲ್ಲಿ ಇರಾನ್ ಫುಟ್ಬಾಲ್ ಫೆಡರೇಶನ್ ವೃತ್ತಿಪರ ಮತ್ತು ಕ್ರೀಡಾ ನೀತಿಗಳನ್ನು ಅನುಸರಿಸದವರ ಮೇಲೆ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದೆ.
ಹಿಜಬ್ ಧರಿಸಿಲ್ಲ ಎಂಬ ಕಾರಣಕ್ಕೆ ಸೆಪ್ಟೆಂಬರ್‌ 16 ರಂದು ಮಹ್ಸಾ ಅಮಿನಿ ಅವರನ್ನು ಬಂಧಿಸಲಾಗಿತ್ತು. ನಂತರ ಬಂಧನಲ್ಲಿದ್ದಾಗಲೇ ಆಕೆ ಸಾವಿಗೀಡಾದಳು. ಇದರ ಬೆನ್ನಲ್ಲೇ ಯುವತಿ ಸಾವಿನ ವಿರುದ್ಧ ಹಾಗೂ ಹಿಜಾಬ್ ವಿರುದ್ಧ ದೇಶಾದ್ಯಂತ ಭುಗಿಲೆದ್ದ ಆಕ್ರೋಶ ತೀವ್ರ ಸ್ವರೂಪ ಪಡೆದಿದ್ದು, ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement