ಅಫ್ತಾಬ್‌ ನನ್ನನ್ನು ಕೊಲ್ಲುತ್ತೇನೆ, ತುಂಡುತುಂಡಾ ಕತ್ತರಿಸ್ತೇನೆ ಎಂದು ಬೆದರಿಕೆ ಹಾಕ್ತಾನೆ : 2020ರಲ್ಲೇ ಪೊಲೀಸರಿಗೆ ದೂರು ನೀಡಿದ್ದ ಶ್ರದ್ಧಾ

ನವದೆಹಲಿ: ದೇಶವೇ ಬೆಚ್ಚಿ ಬೀಳುವಂತೆ ಮಾಡಿದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಾಹಿತಿ ಹೊರ ಬಂದಿದ್ದು, ಅಫ್ತಾಬ್‍ ತನ್ನನ್ನು ಕೊಂದು ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕಿದ್ದ ಎಂದು 2020ರಲ್ಲೇ ಶ್ರದ್ಧಾ ದೂರು ನೀಡಿರುವುದು ಬೆಳಕಿಗೆ ಬಂದಿದೆ.
ಶ್ರದ್ಧಾಳೊಂದಿಗೆ ಲಿವ್‌ ಇನ್‌ನಲ್ಲಿ ಸಹ ಜೀವನ ನಡೆಸುತ್ತಿದ್ದ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ಮೇ ತಿಂಗಳಿನಲ್ಲಿ ಕೊಲೆ ಮಾಡಿ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆದು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸ್ನೇಹಿತರ ಸುಳಿವಿನ ಮೇರೆಗೆ ಪ್ರಕರಣ ಬಯಲಿಗೆ ಬಂದಿತ್ತು.
ಈಗ ಮತ್ತೊಂದು ಮಾಹಿತಿ ಹೊರ ಬಿದ್ದಿದ್ದು, ಫ್ತಾಬ್‍ ತನ್ನನ್ನು ಕೊಂದು ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕಿದ್ದ ಎಂದು 2020ರ ನವೆಂಬರ್ 23ರಂದು ಶ್ರದ್ಧಾ ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ತುಳಿಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಇಂದು ಆತ ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ. ಅಫ್ತಾಬ್ ನನ್ನನ್ನು ನಿಂದಿಸುತ್ತಾನೆ ಹಾಗೂ ಹಲ್ಲೆ ಮಾಡುತ್ತಾನೆ. ನನ್ನನ್ನು ಬೆದರಿಸಿ ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ. ತುಂಡು ತುಂಡಾಗಿ ಕತ್ತರಿಸಿ ದೂರ ಎಸೆಯುವುದಾಗಿ ಬೆದರಿಕೆ ಹಾಕಿದ್ದಾನೆ. ನನಗೆ ಆತನ ಬೆದರಿಕೆಯಿಂದ ತುಂಬಾ ಭಯವಾಗಿದ್ದು, ಈವರೆಗೂ ಪೊಲೀಸರಿಗೆ ದೂರು ನೀಡುವ ಧೈರ್ಯ ಬಂದಿರಲಿಲ್ಲ ಎಂದು ದೂರಿನಲ್ಲಿ ಹೇಳಿದ್ದಳು

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

ಅಲ್ಲದೆ, ಶ್ರದ್ಧಾ ಬರೆದಿರುವ ಪತ್ರದಲ್ಲಿ ಅಫ್ತಾಬ್ ನನ್ನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಆತನ ಕುಟುಂಬದ ಸದಸ್ಯರಿಗೂ ಮಾಹಿತಿ ಇತ್ತು. ಆರು ತಿಂಗಳಿನಿಂದಲೂ ಆತ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾನೆ. ಮೊದಲಿನಿಂದಲೂ ನಾನು ಆತನ ಜತೆ ಸಹಜೀವನ ನಡೆಸುತ್ತಿದ್ದೇನೆ. ಕುಟುಂಬ ಸದಸ್ಯರ ಅನುಪತಿ ಪಡೆದು ಮದುವೆಯಾಗುವ ಸಾಧ್ಯತೆಗಳಿದ್ದವು. ಆದರೆ, ಆತನ ವರ್ತನೆಗಳನ್ನು ನೋಡಿದ ಮೇಲೆ ನನಗೆ ಅಫ್ತಾಬ್ ಜತೆ ಬದುಕು ನಡೆಸಲು ಇಷ್ಟವಿಲ್ಲ ಎಂದು ಎಂದು ಹೇಳಿದ್ದಾಳೆ.
ಒಂದು ವೇಳೆ ನನಗೆ ದೈಹಿಕವಾಗಿ ಹಾನಿಯಾದರೆ ಆತನೇ ಕಾರಣ. ನನ್ನನ್ನು ಬೆದರಿಸುತ್ತಿರುವ ಆತ ಯಾವಾಗ, ಎಲ್ಲಿ, ಯಾವ ರೀತಿಯಲ್ಲಾದರೂ ಗಾಯಗೊಳಿಸಬಹುದು ಎಂದು ಶ್ರದ್ಧಾ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಈ ದೂರು ಆಧರಿಸಿ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದರು. ಆದರೆ, ಶ್ರದ್ಧಾಳೇ ಮತ್ತೆ ಠಾಣೆಗೆ ಬಂದು ಹೇಳಿಕೆ ನೀಡಿ ದೂರನ್ನು ಹಿಂಪಡೆದಿದ್ದಾಳೆ ಎಂದು ಮುಂಬೈನ ಡಿಸಿಪಿ ಸುಹಾಸ್ ಬಾವಾಚೆ ತಿಳಿಸಿದ್ದಾರೆ.

ಪತ್ರ ಹೊರಬಿದ್ದ ನಂತರ, MBVV ಕಮಿಷನರೇಟ್‌ನ ಡಿಸಿಪಿ ಸುಹಾಸ್ ಬಾವಾಚೆ, “ದೂರು ಸ್ವೀಕರಿಸಿದ ತುಳಿಂಜ್ ಪೊಲೀಸ್ ಠಾಣೆಯು ತನಿಖೆಯನ್ನು ಪ್ರಾರಂಭಿಸಿತು ಮತ್ತು ನಂತರ ದೂರುದಾರರು ತಮ್ಮ ಹೇಳಿಕೆಯಲ್ಲಿ ಯಾರ ವಿರುದ್ಧವೂ ದೂರು ನೀಡಿಲ್ಲ ಮತ್ತು ಅವರು ತಮ್ಮ ದೂರನ್ನು ವಾಪಸ್ ಪಡೆದರು ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಶ್ರದ್ಧಾ ಅವರ ಮಾಜಿ ರಿಪೋರ್ಟಿಂಗ್ ಮ್ಯಾನೇಜರ್ ಕರಣ್ ಬ್ರಾರ್ ಅವರನ್ನು ತನಿಖಾಧಿಕಾರಿಗಳು ದೆಹಲಿಗೆ ಕರೆಸಿಕೊಂಡಿದ್ದಾರೆ. ಅಫ್ತಾಬ್ ಶ್ರದ್ಧಾಳ ಮೇಲೆ ಹಲ್ಲೆ ನಡೆಸಿರುವುದು ಕರಣ್‌ಗೆ ತಿಳಿದಿತ್ತು ಮತ್ತು ಆಕೆಯೂ ಆಸ್ಪತ್ರೆಗೆ ದಾಖಲಾಗಿದ್ದಳು. ಪೊಲೀಸ್ ದೂರು ದಾಖಲಿಸಲು ಕರಣ್ ಕೂಡ ಶ್ರದ್ಧಾಗೆ ಸಹಾಯ ಮಾಡಿದ್ದರು.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ನಾನು ಪತ್ರವನ್ನು ನೋಡಿದ್ದೇನೆ ಮತ್ತು ವಿಷಯ ಗಂಭೀರವಾಗಿದೆ, ಈ ಪ್ರಕರಣವನ್ನು ಏಕೆ ತನಿಖೆ ಮಾಡಲಿಲ್ಲ? ಈ ಬಗ್ಗೆ ತನಿಖೆಯಾಗಬೇಕು, ನಾನು ಯಾರನ್ನೂ ದೂಷಿಸಲು ಬಯಸುವುದಿಲ್ಲ, ಮುಂದೆಯೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ, ಈ ಬಗ್ಗೆ ತನಿಖೆ ನಡೆದಿದ್ದರೆ ಶ್ರದ್ಧಾ ಇಂದು ಬದುಕಿರುತ್ತಿದ್ದಳು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement