ಅರುಣ್ ಗೋಯೆಲ್‍ ನೇಮಕಕ್ಕೆ ಮಿಂಚಿನ ವೇಗದಲ್ಲಿ ಕಡತ ಯಾಕೆ ಕ್ಲಿಯರ್‌ ಆಗಿದೆ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ನವದೆಹಲಿ: 1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲು ಸಂಬಂಧಿಸಿದ ಕಡತವನ್ನು ‘ಮಿಂಚಿನ ವೇಗದಲ್ಲಿ’ ಕ್ಲಿಯರ್‌ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಗಮನಿಸಿದೆ.
“ಮೇ 15ರಿಂದ ಈ ಹುದ್ದೆ ಖಾಲಿಯಿತ್ತು. ನವೆಂಬರ್‌ನಲ್ಲಿ ಮಾತ್ರ ಸರ್ಕಾರ ಏಕೆ ಅಷ್ಟು ಆತುರ ತೋರಿಸಿದೆ ಎಂದು ನಮಗೆ ತೋರಿಸಬಹುದೇ? ಅದೇ ದಿನ ಕ್ಲಿಯರೆನ್ಸ್‌, ಅದೇ ದಿನ ಅಧಿಸೂಚನೆ, ಅದೇ ದಿನ ಸ್ವೀಕಾರ? ಕಡತ ಪ್ರಯಾಣಿಸಲು 24 ಗಂಟೆಯನ್ನೂ ತೆಗೆದುಕೊಂಡಿಲ್ಲ. ಅದು ಮಿಂಚಿನ ವೇಗದಲ್ಲಿ ಚಲಿಸಿತು. ನೀವು ಅದನ್ನು ಸಮರ್ಥಿಸಿಕೊಳ್ಳಬೇಕು ಎಂದು ನ್ಯಾಯಾಲಯವು ಹೇಳಿತು.
ಚುನಾವಣಾ ಆಯುಕ್ತರನ್ನು ನೇಮಿಸಲು ಸ್ವತಂತ್ರ ಕಾರ್ಯವಿಧಾನವನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಇತ್ತೀಚೆಗೆ ಚುನಾವಣಾ ಆಯುಕ್ತರಾಗಿ ಅರುಣ್ ಗೋಯೆಲ್ ಅವರನ್ನು ನೇಮಿಸಿದ್ದಕ್ಕೆ ಸಂಬಂಧಿಸಿದ ಕಡತಗಳನ್ನು ಬುಧವಾರ ಕೇಳಿತ್ತು.
ಕೇಂದ್ರದ ಯಾವುದೇ ಆಡಳಿತಾರೂಢ ಪಕ್ಷವು “ತಾನೇ ಅಧಿಕಾರದಲ್ಲಿ ಉಳಿಯಲು ಇಷ್ಟಪಡುತ್ತದೆ” ಮತ್ತು ಪ್ರಸ್ತುತ ವ್ಯವಸ್ಥೆಯ ಅಡಿಯಲ್ಲಿ ಹುದ್ದೆಗೆ ‘ಹೌದು’ ಎನ್ನುವವರನ್ನು ನೇಮಕ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ಆದರೆ 1991 ರ ಕಾಯಿದೆಯು ಚುನಾವಣಾ ಆಯೋಗವು ತನ್ನ ಸದಸ್ಯರಿಗೆ ಸಂಬಳ ಮತ್ತು ಅಧಿಕಾರಾವಧಿಯಲ್ಲಿ ಸ್ವತಂತ್ರವಾಗಿರುವುದನ್ನು ಖಚಿತಪಡಿಸುತ್ತದೆ ಮತ್ತು ನ್ಯಾಯಾಲಯದಿಂದ ಹಸ್ತಕ್ಷೇಪವನ್ನು ಸಮರ್ಥಿಸುವ ಯಾವುದೇ “ಪ್ರಚೋದಕ ಅಂಶ” ಇಲ್ಲ ಎಂದು ಕೇಂದ್ರವು ವಾದಿಸಿತು.
ನಾವು ಗೋಯೆಲ್ ಸಾಮರ್ಥ್ಯ ಪ್ರಶ್ನಿಸ್ತಿಲ್ಲ. ನಾವು ಪ್ರಕ್ರಿಯೆ ಬಗ್ಗೆ ಕೇಳುತ್ತಿದ್ದೇವೆ. ಚುನಾವಣೆ ಆಯುಕ್ತರ ಹುದ್ದೆಗಾಗಿ ನಾಲ್ವರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಈ ಕಡತವನ್ನು ಕಾನೂನು ಇಲಾಖೆ ನವೆಂಬರ್‌ರಂದು ಪಿಎಂಒಗೆ ಕಳಿಸಿತ್ತು. ಅದೇ ದಿನ ಪ್ರಧಾನಮಂತ್ರಿಗಳು ಒಂದು ಹೆಸರನ್ನು ಪ್ರತಿಪಾದಿಸಿದರು. ನಾಲ್ವರಲ್ಲಿ ಕಿರಿಯರಾದ ಗೋಯೆಲ್ ಹೆಸರನ್ನು ಯಾವ ಆಧಾರದ ಮೇಲೆ ಅಂತಿಮಗೊಳಿಸಿದ್ದೀರಿ. ಹೇಗೆ ಮೌಲ್ಯಮಾಪನ ಮಾಡಿದ್ದೀರಿ. ಇದಕ್ಕೆ ಅನುಸರಿಸಿದ ಪದ್ಧತಿ ಏನು ಎಂದು ಚಾಟಿ ಬೀಸಿತು.

ಚುನಾವಣಾ ಆಯುಕ್ತರ ನೇಮಕದಲ್ಲಿ ತಪ್ಪು ನಡೆದಿಲ್ಲ. ಈ ಹಿಂದೆಯೂ 12 ರಿಂದ 24 ಗಂಟೆಯಲ್ಲಿ ನೇಮಕಾತಿ ಆಗಿದೆ. ಕಾನೂನು ಇಲಾಖೆ ಪ್ರತಿಪಾದಿಸಿದ 4 ಹೆಸರುಗಳನ್ನು ಡಿಓಪಿಟಿ ಡೇಟಾ ಬೇಸ್‍ನಿಂದಲೇ ತೆಗೆದುಕೊಳ್ಳಲಾಗಿದೆ. ಈ ವಿವರಗಳು ಬಹಿರಂಗವಾಗಿ ಎಲ್ಲರಿಗೂ ಲಭ್ಯವಾಗುವಂತಿವೆ. ನೇಮಕ ವೇಳೆ ಸೀನಿಯಾರಿಟಿ, ನಿವೃತ್ತಿ ವಯಸ್ಸು ಪರಿಗಣಿಸಲಾಗುತ್ತದೆ. ವಯಸ್ಸಿಗೆ ಬದಲಾಗಿ ಬ್ಯಾಚ್ ಆಧಾರವಾಗಿ ಸೀನಿಯಾರಿಟಿ ಪರಿಗಣಿಸಲಾಗಿದೆ. ಈ ನೇಮಕಾತಿ ವಿಚಾರದಲ್ಲಿ ಎಲ್ಲಾ ಅಂಶಗಳನ್ನು ಸುಪ್ರೀಂ ಪರಿಶೀಲಿಸಬೇಕು ಎಂದು ವಾದ ಆಗ ಅಟಾರ್ನಿ ಜನರಲ್‌ ಮನವಿ ಮಾಡಿದರು.
ಕೇಂದ್ರವು ಅರುಣ್ ಗೋಯೆಲ್ ಅವರ ನೇಮಕಾತಿಯ ಮೂಲ ಕಡತವನ್ನು ಸುಪ್ರೀಂ ಕೋರ್ಟ್‌ಸಾಂವಿಧಾನಿಕ ಪೀಠದ ಮುಂದೆ ಇರಿಸಿತು.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement