ವಾಟ್ಸಾಪ್ ಡೇಟಾ ಸೋರಿಕೆ: ಭಾರತ ಸೇರಿದಂತೆ 84 ದೇಶಗಳ 50 ಕೋಟಿ ಬಳಕೆದಾರರ ಫೋನ್ ಸಂಖ್ಯೆಗಳ ಸೋರಿಕೆ..?

ಸರಿಸುಮಾರು 48.7 ಕೋಟಿ ವಾಟ್ಸಾಪ್ ಬಳಕೆದಾರರ ಫೋನ್ ಸಂಖ್ಯೆಗಳು ಸೋರಿಕೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೆಟಾ-ಮಾಲೀಕತ್ವದ ಇನ್‌ಸ್ಟೆಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ ಆಪ್‌ (WhatsApp) ಬಳಕೆದಾರರ ವೈಯಕ್ತಿಕ ಮಾಹಿತಿ ಪ್ರಸಿದ್ಧ ಹ್ಯಾಕಿಂಗ್ ಸಮುದಾಯ ಫೋರಮ್‌ನಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ ಎಂದು ವರದಿ ಹೇಳಿದೆ.
ಸೈಬರ್‌ನ್ಯೂಸ್ ವರದಿಯ ಪ್ರಕಾರ, ಕೆಲವರು ನವೆಂಬರ್ 16 ರಂದು ಹ್ಯಾಕಿಂಗ್ ಸಮುದಾಯದ ವೇದಿಕೆಯಲ್ಲಿ ಜಾಹೀರಾತನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಸುಮಾರು 487 ಮಿಲಿಯನ್ ವಾಟ್ಸಾಪ್ (WhatsApp) ಬಳಕೆದಾರರ ಮೊಬೈಲ್ ಸಂಖ್ಯೆಗಳ 2022 ಡೇಟಾಬೇಸ್ ಅನ್ನು ಮಾರಾಟ ಮಾಡುತ್ತಿದ್ದಾರೆ ಹಾಗೂ ಹಲವು ಮೂಲಗಳಿಂದ ದೃಢಪಟ್ಟಿರುವ ವರದಿ ನಿಜವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ವಾಟ್ಸಾಪ್ (WhatsApp) ಬಳಕೆದಾರರ ಈ ಡೇಟಾಬೇಸ್ 84 ದೇಶಗಳ (ಭಾರತ ಸೇರಿದಂತೆ) ಡೇಟಾವನ್ನು ಒಳಗೊಂಡಿದೆ ಮತ್ತು WhatsApp ನ ಅಂದಾಜು ಎರಡು ಶತಕೋಟಿ ಸಕ್ರಿಯ ಮಾಸಿಕ ಬಳಕೆದಾರರಲ್ಲಿ ನಾಲ್ಕನೇ ಒಂದು ಭಾಗವು ಸಂಭವನೀಯ ಅಪಾಯದಲ್ಲಿದೆ ಎಂದು ಸೂಚಿಸುತ್ತದೆ.
ವರದಿಯ ಪ್ರಕಾರ, ಭಾರತೀಯ ವಾಟ್ಸಾಪ್ ಬಳಕೆದಾರರ 60 ಲಕ್ಷಕ್ಕಿಂತಲೂ ಹೆಚ್ಚು ದಾಖಲೆಗಳು ಮಾರಾಟದಲ್ಲಿವೆ. ಭಾರತೀಯ ಬಳಕೆದಾರರಲ್ಲದೆ, ಅಮೆರಿಕ ಬಳಕೆದಾರರ 3.2 ಕೋಟಿಗಿಂತಲೂ ಹೆಚ್ಚು ಮೊಬೈಲ್ ಸಂಖ್ಯೆಗಳು, ಈಜಿಪ್ಟ್‌ನಿಂದ 4.5 ಕೋಟಿ, ಇಟಲಿಯಿಂದ 3.5 ಕೋಟಿ, ಸೌದಿ ಅರೇಬಿಯಾದಿಂದ 2.9 ಕೋಟಿ, ಫ್ರಾನ್ಸ್‌ನಿಂದ 2 ಕೋಟಿ ಮತ್ತು ಟರ್ಕಿಯಿಂದ ಸುಮಾರು 2 ಕೋಟಿ ಸಂಪರ್ಕಗಳಿವೆ ಎಂದು ವರದಿ ಹೇಳುತ್ತದೆ. .
ವರದಿಯ ಪ್ರಕಾರ, ಹ್ಯಾಕರ್‌ಗಳು ಅಮೆರಿಕದ ಡೇಟಾಸೆಟ್ ಅನ್ನು $7,000, UK $2,500 ಮತ್ತು ಜರ್ಮನಿ $2,000ಗೆ ಮಾರಾಟ ಮಾಡುತ್ತಿದ್ದಾರೆ.
ಸೋರಿಕೆಯಾದ ಫೋನ್ ಸಂಖ್ಯೆಗಳಂತಹ ಈ ರೀತಿಯ ವೈಯಕ್ತಿಕ ಬಳಕೆದಾರರ ಮಾಹಿತಿಯನ್ನು ಹೆಚ್ಚಾಗಿ ಮಾರ್ಕೆಟಿಂಗ್ ಮತ್ತು ಫಿಶಿಂಗ್, ಸೋಗು ಹಾಕುವಿಕೆ ಮತ್ತು ವಂಚನೆ ದಾಳಿಗಳಿಗೆ ಬಳಸಲಾಗುತ್ತದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement