ಚೀನಾದಲ್ಲಿ ‘ಶೂನ್ಯ’ ಕೋವಿಡ್ ನೀತಿ ವಿರುದ್ಧ ಭುಗಿಲೆದ್ದ ಆಕ್ರೋಶ: ಕೋವಿಡ್ ನಿರ್ಬಂಧದ ವಿರುದ್ಧ ಬೀದಿಗಿಳಿದ ಜನ

ಶಾಂಘೈ: ಚೀನಾದಲ್ಲಿ ‘ಶೂನ್ಯ’ ಕೋವಿಡ್ ನೀತಿ ವಿರುದ್ಧದ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಶಾಂಘೈ ಸೇರಿದಂತೆ ಚೀನಾದ ಅನೇಕ ನಗರಗಳಲ್ಲಿ ನಿವಾಸಿಗಳು ಕೋವಿಡ್ 19 ಕಠಿಣ ನಿರ್ಬಂಧ ಕ್ರಮಗಳ ವಿರುದ್ಧ ಬೀದಿಗಿಳಿದಿದ್ದು, ದೇಶದ ಪಶ್ಚಿಮ ಭಾಗದಲ್ಲಿನ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದ ಘಟನೆ, ಪ್ರತಿಭಟನಾಕಾರರು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ.
ಚೀನಾದ ಕ್ಸಿಂಜಿಯಾಂಗ್ ಪ್ರದೇಶದ ರಾಜಧಾನಿ ಉರುಂಕಿಯಲ್ಲಿನ ಬೃಹತ್ ಕಟ್ಟಡದಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಹತ್ತು ಮಂದಿ ಮೃತಪಟ್ಟಿದ್ದರು. ಈ ಕಟ್ಟಡವನ್ನು ಭಾಗಶಃ ಲಾಕ್‌ಡೌನ್ ಮಾಡಿದ್ದರಿಂದಾಗಿ ಒಳಗಿದ್ದ ನಿವಾಸಿಗಳಿಗೆ ಬೆಂಕಿ ಹೊತ್ತಿಕೊಂಡರೂ ಅಲ್ಲಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಇದು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಚೀನಾದ ಅತಿ ಹೆಚ್ಚು ಜನಸಂಖ್ಯೆಯ ನಗರ ಮತ್ತು ಆರ್ಥಿಕ ಹಬ್ ಶಾಂಘೈನಲ್ಲಿನ ವುಲುಮುಖಿ ರಸ್ತೆಯಲ್ಲಿ ಭಾನುವಾರ ಮುಂಜಾನೆ ಬೃಹತ್ ಪ್ರತಿಭಟನೆ ಆರಂಭಿಸಿದರು.

ಚೀನಾದ ಎಲ್ಲ ಕಡೆಯೂ ಲಾಕ್‌ಡೌನ್ ತೆರವುಗೊಳಿಸಿ ಎಂದು ಶಾಂಘೈನಲ್ಲಿ ಸೇರಿದ ಜನರ ಗುಂಪು ಘೋಷಣೆ ಕೂಗಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಧಿಕ್ಕಾರ, ಕ್ಸಿ ಜಿನ್‌ಪಿಂಗ್‌ಗೆ ಧಿಕ್ಕಾರ, ಉರುಂಕಿಯನ್ನು ಸ್ವತಂತ್ರಗೊಳಿಸಿ” ಎಂದೂ ದೊಡ್ಡ ಗುಂಪೊಂದು ಘೋಷಣೆ ಕೂಗಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಪೊಲೀಸರು ಗುಂಪುಗಳನ್ನು ಚೆದುರಿಸಲು ಪ್ರಯತ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ಖಲಿಸ್ತಾನ್ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌ ಕೊಲ್ಲುವ ಸಂಚು ರೂಪಿಸಿದ್ದನೆಂದು ಅಮೆರಿಕ ಆರೋಪ ಹೊರಿಸಿದ ಈ ನಿಖಿಲ್ ಗುಪ್ತಾ ಯಾರು..?
https://twitter.com/ProfYangZhang/status/1596764502837661696?ref_src=twsrc%5Etfw%7Ctwcamp%5Etweetembed%7Ctwterm%5E1596764502837661696%7Ctwgr%5E31cda417d420d6e5dd423e1441ad487b23364955%7Ctwcon%5Es1_&ref_url=https%3A%2F%2Fwww.aljazeera.com%2Fnews%2F2022%2F11%2F27%2Fprotests-in-shanghai-as-anger-over-zero-covid-spreads-in-china

ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿದ್ದರಿಂದ ಲಾಕ್‌ಡೌನ್‌ನಂತಹ ಕಠಿಣ ನಿಯಮಗಳು ಪುನಃ ಜಾರಿಗೆ ಬಂದಿವೆ. ಶೆಂಝೆನ್ ಪ್ರಾಂತ್ಯದಲ್ಲಿ ರೆಸ್ಟೋರೆಂಟ್‌ಗಳಲ್ಲಿ ಮತ್ತು ಒಳಾಂಗಣ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದ್ದು, ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ. ಸಿನಿಮಾ ಮಂದಿರ, ಜಿಮ್ ಮತ್ತು ಸಾರ್ವಜನಿಕ ಸಭೆಗಳಿಗೆ ಎಂದು ನಿರ್ಬಂಧ ಹೇರಲಾಗಿದೆ.

‘ಶೂನ್ಯ ಕೋವಿಡ್ ನೀತಿ’ ಜಾರಿಗೆ ತಂದಿರುವ ಚೀನಾ ಸರ್ಕಾರ, ಸೋಂಕನ್ನು ಸಂಪೂರ್ಣವಾಗಿ ಸೊನ್ನೆಗೆ ಇಳಿಸುವವರೆಗೂ ಶೂನ್ಯ ಕೋವಿಡ್‌ ನೀತಿ ಹಿಂತೆಗುಯುವುದಿಲ್ಲ ಎಂದು ಹೇಳಿದೆ. ಇದರ ಪರಿಣಾಮ, ಜನರು ಈಗಲೂ ಕೋವಿಡ್ ನಿರ್ಬಂಧ ಕ್ರಮಗಳನ್ನು ಎದುರಿಸುವಂತಾಗಿದೆ. ಸಾರ್ವಜನಿಕರ ಆಕ್ರೋಶದ ನಡುವೆಯೂ ಅಧಿಕಾರಿಗಳು ತಮ್ಮ ನಿಲುವನ್ನು ಸಡಿಲಗೊಳಿಸಿಲ್ಲ.
ಶಾಂಘೈನ ಪ್ರತಿಭಟನೆ ವೀಡಿಯೊಗಳನ್ನು ಚೀನಾ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಲಾಗುತ್ತಿದೆ. “ಜನರ ಸೇವೆ ಮಾಡಿ”, “ನಮಗೆ ಆರೋಗ್ಯ ಸಂಹಿತೆಗಳು ಬೇಡ”, “ನಮಗೆ ಸ್ವಾತಂತ್ರ್ಯ ಬೇಕು” ಎಂದು ಜನರು ಆಕ್ರೋಶದಿಂದ ಕೂಗಿದ್ದಾರೆ.

ಪ್ರಮುಖ ಸುದ್ದಿ :-   ನಿತ್ಯಾನಂದನ ʼಕೈಲಾಸʼದ ಜೊತೆ ಜ್ಞಾಪಕ ಪತ್ರಕ್ಕೆ ಸಹಿ : ಕೆಲಸ ಕಳೆದುಕೊಂಡ ಪರಾಗ್ವೆ ಅಧಿಕಾರಿ...!

 

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement