ನವದೆಹಲಿ: ಗುಜರಾತ್‌ನ ಮೆಹ್ಸಾನಾದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡುತ್ತಿದ್ದಾಗ ದಾರಿ ತಪ್ಪಿದ ಗೂಳಿಯೊಂದು ನುಗ್ಗಿ ಕೋಲಾಹಲ ಎಬ್ಬಿಸಿದೆ..
ಸಮಾವೇಶಕ್ಕೆ ನುಗ್ಗಿದ ಗೂಳಿ ನಂತರ ಗೊಂದಲಕ್ಕೊಳಗಾಗಿ ಅತ್ತ ಇತ್ತ ಓಡುತ್ತಿರುವ ದೃಶ್ಯದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರೇಕ್ಷಕರನ್ನು ಶಾಂತವಾಗಿರುವಂತೆ ಸೂಚಿಸಿದ ಅಶೋಕ ಗೆಹ್ಲೋಟ್, ಇದೇವೇಳೆ ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಗೂಳಿಯನ್ನು ಜನಸಂದಣಿಯೊಳಗೆ ಕಳುಹಿಸಿದೆ ಎಂದು ಈ ಘಟನೆಗೆ ಬಿಜೆಪಿಯನ್ನು ದೂಷಿಸಿದರು.
ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು
ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189
ಇದು ಬಿಜೆಪಿಯ ಪಿತೂರಿಯಾಗಿದೆ. ಅವರು ಆಗಾಗ್ಗೆ ಕಾಂಗ್ರೆಸ್ ಸಭೆಗಳಿಗೆ ಅಡ್ಡಿಪಡಿಸಲು ಈ ತಂತ್ರವನ್ನು ಅನುಸರಿಸುತ್ತಾರೆ” ಎಂದು ಗೆಹ್ಲೋಟ್ ಹೇಳಿರುವುದನ್ನು ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದ ಚುನಾವಣೆಯ ಪ್ರಚಾರ ಇಂದು, ಮಂಗಳವಾರ ಕೊನೆಗೊಂಡಿದೆ. 19 ದಕ್ಷಿಣ ಗುಜರಾತ್ ಜಿಲ್ಲೆಗಳು ಮತ್ತು ಕಚ್-ಸೌರಾಷ್ಟ್ರ ಪ್ರದೇಶಗಳಲ್ಲಿ ಒಟ್ಟು 788 ಅಭ್ಯರ್ಥಿಗಳು 89 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ.
ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ, ಈ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (ಎಎಪಿ) ರೂಪದಲ್ಲಿ ಮೂರನೇ ಪಕ್ಷವಾಗಿ ಚುನಾವಣೆ ಎದುರಿಸುತ್ತಿದೆ. ಅದು ಚುನಾವಣೆ ನಡೆಯಲಿರುವ 182 ಸ್ಥಾನಗಳ ಪೈಕಿ ಎಎಪಿ 181 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ