ಪಾಲಿಗ್ರಾಫ್ ಪರೀಕ್ಷೆಯಲ್ಲಿ ಶ್ರದ್ಧಾಳನ್ನು ಕೊಂದಿದ್ದು ಒಪ್ಪಿಕೊಂಡ ಅಫ್ತಾಬ್ ಪೂನಾವಾಲಾ, ಆದ್ರೆ ಯಾವುದೇ ಪಶ್ಚಾತ್ತಾಪವಿಲ್ಲ: ವರದಿ

ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಪಾಲಿಗ್ರಾಫ್ ಪರೀಕ್ಷೆಯಲ್ಲಿ ಶ್ರದ್ಧಾ ವಾಕರಳನ್ನು ತಾನೇ ಕೊಂದಿರುವುದಾಗಿ ಆರೋಪಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ. ಹತ್ಯೆಯ ನಂತರ ಶ್ರದ್ಧಾಳ ದೇಹದ ಭಾಗಗಳನ್ನು ಕಾಡಿನಲ್ಲಿ ಎಸೆದಿದ್ದನ್ನು ಅಫ್ತಾಬ್ ಒಪ್ಪಿಕೊಂಡಿದ್ದಾನೆ ಮತ್ತು ಆಕೆಯನ್ನು ಕೊಲ್ಲಲು ಬಹಳ ಹಿಂದೆಯೇ ಯೋಜಿಸಿದ್ದೆ ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಅಫ್ತಾಬ್ ಅನೇಕ ಹುಡುಗಿಯರೊಂದಿಗೆ  ಸಂಬಂಧ ಹೊಂದಿದ್ದನ್ನು ಒಪ್ಪಿಕೊಂಡಿದ್ದಾನೆ. ಮೇ 18 ರಂದು ಶ್ರದ್ಧಾಳನ್ನು ಕೊಂದಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದು, ಆಕೆಯನ್ನು ಕೊಲ್ಲುವ ಉದ್ದೇಶದಿಂದ ಮುಂಬೈನಿಂದ ದೆಹಲಿಗೆ ಕರೆತಂದಿರುವುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪರೀಕ್ಷೆ ವೇಳೆ ಶ್ರದ್ಧಾನ್ನು ಕೊಂದಿದ್ದಕ್ಕೆ ಪಶ್ಚಾತ್ತಾಪ ಪಡುತ್ತೀರಾ ಎಂದು ಕೇಳಿದಾಗ, ಅಫ್ತಾಬ್ ‘ಇಲ್ಲ’ ಎಂದು ಹೇಳಿದ್ದಾನೆ. ಶ್ರದ್ಧಾಳನ್ನು ಹತ್ಯೆ ಮಾಡಿದ ನಂತರ ಅವಳ ಕುಟುಂಬಕ್ಕೆ ಏನನ್ನೂ ತಿಳಿಸಿಲ್ಲ ಎಂದು ಆತ ಹೇಳಿದ್ದಾರೆ.

ಈ ಹಿಂದೆ ಆತನಿಗೆ ಅನಾರೋಗ್ಯದ ಕಾರಣ ಪಾಲಿಗ್ರಾಫ್ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಲಿಲ್ಲ. ವಿಚಾರಣೆ ವೇಳೆ ಆರೋಪಿಗೆ ಮೃತನೊಂದಿಗಿನ ಸಂಬಂಧದ ಬಗ್ಗೆ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ. ಸದ್ಯ ಅಫ್ತಾಬ್ ತಿಹಾರ್ ಜೈಲಿನಲ್ಲಿದ್ದಾನೆ. ಎಲ್ಲಾ ಪರೀಕ್ಷೆಗಳನ್ನು ನಡೆಸಲು ಪೊಲೀಸರಿಗೆ ಮೂರು ದಿನಗಳ ಕಾಲಾವಕಾಶವಿದೆ, ಪಾಲಿಗ್ರಾಫ್‌ ಪರೀಕ್ಷೆ ಸಾಕ್ಷ್ಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಯೋಧ್ಯೆಯಲ್ಲಿ ರಾಮನವಮಿ ದಿನ ಬಾಲರಾಮನ ಹಣೆಗೆ ʼಸೂರ್ಯ ರಶ್ಮಿಯ ತಿಲಕ ʼ ; ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ

ಪಾಲಿಗ್ರಾಫ್ ಪರೀಕ್ಷೆಯ ನಂತರ ಆರೋಪಿ ಅಫ್ತಾಬ್ ನ ನಾರ್ಕೋ ಪರೀಕ್ಷೆಯನ್ನೂ ಈ ವಾರ ನಡೆಸಬಹುದು. ಮೂಲಗಳ ಪ್ರಕಾರ, ಅಫ್ತಾಬ್‌ನ ಉತ್ತರಗಳು ಮತ್ತು ದೊರೆತ ಸಾಕ್ಷ್ಯಗಳ ಆಧಾರದ ಮೇಲೆ ದೆಹಲಿ ಪೊಲೀಸರು ನಾರ್ಕೋ ಪರೀಕ್ಷೆಗಾಗಿ 70 ಪ್ರಶ್ನೆಗಳ ದೀರ್ಘ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆದರೆ, ಪಾಲಿಗ್ರಾಫ್ ಪರೀಕ್ಷೆಯ ಸಂಪೂರ್ಣ ವರದಿ ಇನ್ನಷ್ಟೇ ಬರಬೇಕಿದೆ. ಹೀಗಾಗಿ ನಾರ್ಕೋ ಪರೀಕ್ಷೆಗೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎಂದು ಊಹಿಸಲಾಗಿದೆ.
ಅಫ್ತಾಬ್‌ನನ್ನು ನವೆಂಬರ್ 12 ರಂದು ಬಂಧಿಸಲಾಯಿತು ಮತ್ತು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು, ಅದನ್ನು ನವೆಂಬರ್ 17 ರಂದು ಐದು ದಿನಗಳವರೆಗೆ ವಿಸ್ತರಿಸಲಾಯಿತು. ಕಳೆದ ವಾರ, ಅವರನ್ನು ಇನ್ನೂ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement