ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಮಠಾಕೇರಿ ಕ್ರಾಸ್ ಬಳಿ ಕುಡಿಯುವ ನೀರಿನ ಬಾವಿಗಳಲ್ಲಿ ಡಿಸೇಲ್ ಅಂಶ ಕಂಡು ಬಂದಿದ್ದು ಕಂಗಾಲಾದ ಮನೆ ಮಾಲಿಕರು ಪುರಸಭೆಗೆ ದೂರು ನೀಡಿದ್ದಾರೆ.
ಕಳೆದ 3 ದಿನಗಳಿಂದ ಮಠಾಕೇರಿ ಕ್ರಾಸ್ ಬಳಿಯ ಗಣಪತಿ ವೆಂಕಟ್ರಮಣ ಕಿಣಿ ಮತ್ತು ಸಂತೋಷ ಗಣೇಶ ನಾಯಕ ಎನ್ನುವವರ ಎರಡು ಬಾವಿಗಳ ನೀರಿನಲ್ಲಿ ಡಿಸೇಲ್ ವಾಸನೆ ಬರಲಾರಂಭಿಸಿದೆ ಹಾಗೂ ನೀರನ್ನು ಕುಡಿಯಲಾಗದ ಪರಿಸ್ಥಿತಿ ಇದೆ. ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಎನ್. ಎಂ.ಮೇಸ್ತ, ಆಹಾರ ನಿರೀಕ್ಷಕ ನವೀನ ನಾಯ್ಕ, ಪುರಸಭೆ ನೀರು ಸರಬರಾಜು ಅಧಿಕಾರಿ ಆನಂದು ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಬಾವಿಗಳ ಪರಿಶೀಲನೆ ನಡೆಸಿದ್ದು ನೀರು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ನೀರಲ್ಲಿ ಡೀಸೆಲ್ ಅಂಶ ಯಾಕೆ ಬಂತು ಎನ್ನುವುದು ಪತ್ತೆಯಾಗಬೇಕಿದೆ. ಉಳಿದಿದೆ.
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ