ದಕ್ಷಿಣ ಕೊರಿಯಾದ ನಾಟಕ ನೋಡಿದ್ದಕ್ಕೆ ಇಬ್ಬರು ಅಪ್ರಾಪ್ತರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಉತ್ತರ ಕೊರಿಯಾ…!

ನವದೆಹಲಿ:ದಕ್ಷಿಣ ಕೊರಿಯಾದ ನಾಟಕ ಪ್ರದರ್ಶನಗಳನ್ನು ನೋಡಿದ್ದಕ್ಕೆ ಮತ್ತು ವ್ಯಾಪಕವಾಗಿ ಹಂಚಿಕೊಂಡಿದ್ದಕ್ಕಾಗಿ ಉತ್ತರ ಕೊರಿಯಾ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿದೆ ಎಂದು ವರದಿಯೊಂದು ತಿಳಿಸಿದೆ.
ಕಿಮ್ ಜಾಂಗ್ ಉನ್ ಆಡಳಿತದಲ್ಲಿ ಅಪರೂಪದ ಶಿಕ್ಷೆ ಜಾರಿಯಲ್ಲಿ ದಕ್ಷಿಣ ಕೊರಿಯಾದ ಚಲನಚಿತ್ರಗಳನ್ನು ವೀಕ್ಷಿಸಿದ ಮತ್ತು ಹಂಚಿಕೊಂಡ ಇಬ್ಬರು ಹದಿಹರೆಯದ ವಿದ್ಯಾರ್ಥಿಗಳನ್ನು ಗಲ್ಲಿಗೇರಿಸಲಾಯಿತು ಎಂದು ಇದನ್ನು ಪ್ರತ್ಯಕ್ಷರಾದ ಎರಡು ಮೂಲಗಳನ್ನು ಉಲ್ಲೇಖಿಸಿ ರೇಡಿಯೊ ಫ್ರೀ ಏಷ್ಯಾ ವರದಿ ಮಾಡಿದೆ.
ಹದಿಹರೆಯದವರು ಅಕ್ಟೋಬರ್ ಆರಂಭದಲ್ಲಿ ಉತ್ತರ ಕೊರಿಯಾದ ರಿಯಾಂಗ್‌ಗಾಂಗ್ ಪ್ರಾಂತ್ಯದ ಪ್ರೌಢಶಾಲೆಯಲ್ಲಿ ಭೇಟಿಯಾದರು, ಇದು ಚೀನಾದೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ, ಅಲ್ಲಿ ಅವರು ಹಲವಾರು ಕೊರಿಯನ್ ಮತ್ತು ಅಮೇರಿಕನ್ ನಾಟಕ ಪ್ರದರ್ಶನಗಳನ್ನು ವೀಕ್ಷಿಸಿದರು ಎಂದು ಕೊರಿಯನ್ ಮಾಧ್ಯಮವನ್ನು ಉಲ್ಲೇಖಿಸಿ ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. ಈ ಅಪ್ರಾಪ್ತರನ್ನು ಸಾರ್ವಜನಿಕರ ಮುಂದೆ ಕರೆತಂದರು, ಅವರಿಗೆ ಮರಣದಂಡನೆ ವಿಧಿಸಲಾಯಿತು ಮತ್ತು ತಕ್ಷಣವೇ ನಗರದ ಏರ್‌ಫೀಲ್ಡ್‌ನಲ್ಲಿ ಅವರನ್ನು ಅಧಿಕಾರಿಗಳು ಹೊಡೆದುರುಳಿಸಿದರು ಎಂದು ವರದಿ ತಿಳಿಸಿದೆ.

ಈ ಭಾಗವು ಚೀನಾ ಗಡಿ ಭಾಗದ ಸಮೀಪವಿದೆ. ಹೀಗಾಗಿ ಈ ಭಾಗದಲ್ಲಿ ಸುಲಭವಾಗಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕನ್ ಸಿನಿಮಾಗಳು ಅವರಿಗೆ ಲಭ್ಯವಾಗುತ್ತದೆ. ದಕ್ಷಿಣ ಕೊರಿಯಾದ ಕಾರ್ಯಕ್ರಮ ವೀಕ್ಷಿಸುವುದು ಉತ್ತರ ಕೊರಿಯಾ ನಿಯಮಕ್ಕೆ ವಿರುದ್ಧ ಹಾಗೂ ನಿಷಿದ್ಧ. ಆದರೆ ಇಬ್ಬರು ಅಪ್ರಾಪ್ತರು ದಕ್ಷಿಣ ಕೊರಿಯಾದ ನಾಟಕಗಳನ್ನು ವೀಕ್ಷಿಸಿದ್ದಾರೆ. ಹೀಗಾಗಿ ನಿಯಮ ಉಲ್ಲಂಘಿಸಿದ ಕಾರಣ ಅವರಿಗೆ ಮರಣದಂಡನೆ ಶಿಕ್ಷೆ ನೀಡಲಾಗಿದೆ.
ಈ ಇಬ್ಬರು ಬಾಲಕರು ಬೇರೆ ಬೇರೆ ಶಾಲೆಯಲ್ಲಿ ಹೈಸ್ಕೂಲ್ ನಲ್ಲಿ ಓದುತ್ತಿದ್ದರು. ಒಮ್ಮೆ ಇವರು ಉತ್ತರ ಕೊರಿಯಾದ ಚೀನಾ ಗಡಿಭಾಗದ ಶಾಲೆಯೊಂದರಲ್ಲಿ ಭೇಟಿಯಾಗಿದ್ದ ಇವರು ಆಗಿನಿಂದಲೂ ಕೊರಿಯನ್ ಡ್ರಾಮಾ, ಕೊರಿಯನ್ ಪಾಪ್ ಗಳನ್ನು ಪರಸ್ಪರ ಹಂಚಿಕೊಂಡು ವೀಕ್ಷಿಸುತ್ತಿದ್ದರು. ಹಾಗೆಯೇ ಬೇರೆ ಕೆಲ ಹುಡುಗರಿಗೂ ಮೊಬೈಲ್ ಮೂಲಕ ಕಳಿಸಿದ್ದರು. ಉತ್ತರ ಕೊರಿಯಾ ನಿಯಮಕ್ಕೆ ವಿರುದ್ಧವಾಗಿ ದಕ್ಷಿಣ ಕೊರಿಯಾದ ಡ್ರಾಮಾಗಳನ್ನು ವೀಕ್ಷಿಸಿದ್ದಕ್ಕೆ ಪ್ರತಿಯಾಗಿ ಮರಣದಂಡನೆ ವಿಧಿಸಲಾಗಿದೆ.

ದಕ್ಷಿಣ ಕೊರಿಯಾದ ಕೆ-ಡ್ರಾಮಾ, ಕೆ-ಪಾಪ್ ಸಂಗೀತಗಳು ಉತ್ತರ ಕೊರಿಯಾದಲ್ಲಿ ನಿಷೇಧಿಸಲ್ಪಟ್ಟಿವೆ. ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಅಧ್ಯಕ್ಷ ಕಿಂಗ್ ಉನ್ ಜಾನ್ 2021ರಲ್ಲಿ ನಿಷೇಧಗೊಳಿಸಿದ್ದಾರೆ. 2018ರಿಂದ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾದ ನಡುವೆ ಸಂಬಂಧ ಹದಗೆಟ್ಟ ಬಳಿಕ ಉತ್ತರ ಕೊರಿಯಾದಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕೂ ಮೊದಲು ಇಲ್ಲಿನ ಜನರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಲಾಗಿತ್ತು.ಅವರ ಆದೇಶ ಮೀರಿ ಕಾರ್ಯಕ್ರಮಗಳನ್ನು ವೀಕ್ಷಿಸಿದರೆ ಅಂಥವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಉತ್ತರ ಕೊರಿಯಾದ ಜನರಿಗೆ ಸ್ವಾತಂತ್ರ್ಯವಿಲ್ಲ. ಸಾರ್ವಜನಿಕವಾಗಿ ಪ್ರೀತಿಯನ್ನು ವ್ಯಕ್ತಪಡಿಸಲು ಅವಕಾಶವಿಲ್ಲ. ಆದರೆ ದಕ್ಷಿಣ ಕೊರಿಯಾದಲ್ಲಿ ಇರುವ ಸ್ವಾತಂತ್ರ್ಯವನ್ನು ನಾಟಕಗಳಲ್ಲಿ ತೋರಿಸಲಾಗುತ್ತದೆ. ಹೀಗಾಗಿ ಉತ್ತರ ಕೊರಿಯಾದ ಜನರು ಆ ಡ್ರಾಮಾಗಳನ್ನು ನೋಡಿದರೆ ದಂಗೆ ಏಳಬಹುದು ಎಂಬ ಆತಂಕದಲ್ಲಿ ಕಿಂಗ್ ಉನ್ ಜಾನ್ ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement