ಕುಮಟಾ: ಕೂಜಳ್ಳಿಯಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಕೂಜಳ್ಳಿಯಲ್ಲಿ ಮಗನಿಂದಲೇ ತಾಯಿಯ ಹತ್ಯೆ ನಡೆದ ಘಟನೆ ನಡೆದಿದೆ.
ಗೀತಾ ಭಟ್ಟ (64) ಎಂಬ ಮಹಿಳೆ ಮಗನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದಾಳೆ. ಈ ಘಟನೆ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿಯ ಬಚ್ಕಂಡ ಎಂಬಲ್ಲಿ ನಡೆದಿದ್ದು, ಮಗ ಕುಡಿತದ ಚಟಕ್ಕೆ ದಾಸನಾಗಿದ್ದ ಎಂದು ತಿಳಿದು ಬಂದಿದ್ದು, ಇದೇ ಕಾರಣಕ್ಕೆ ತಾಯಿಯ ಕೊಲೆ ನಡೆದಿದೆ ಎನ್ನಲಾಗಿದೆ. ಮಗ ಮಧುಕರ ಭಟ್ಟ ನಿರುದ್ಯೋಗಿಯಾಗಿದ್ದು ಜೊತೆಗೆ ಕುಡಿತದ ದಾಸನಾಗಿದ್ದರಿಂದ ಆಗಾಗ ಮನೆಯಲ್ಲಿ ಜಗಳ ಮಾಡುತ್ತಿದ್ದ ಎಂದು ಎನ್ನಲಾಗಿದೆ. ಸಾರಾಯಿ ಕುಡಿಯಲು ಹಣ ನೀಡುವಂತೆ ದಿನವೂ ತಾಯಿಯನ್ನು ಪೀಡಿಸುತ್ತಿದ್ದ. ಮಂಗಳವಾರ ರಾತ್ರಿ ಕೂಡ ಕೂಡ ಈ ಸಂಬಂಧ ತಾಯಿ ಜೊತೆ ಜಗಳವಾಡಿದ್ದು, ಹಣ ಕೊಡದ ಕಾರಣ ಕೋಪಗೊಂಡು ತಾಯಿಗೆ ರೀಪಿನ ತುಂಡು ಹಾಗೂ ಸ್ಟೂಲಿನಿಂದ ಹೊಡೆದಿದ್ದಾನೆ, ಏಟಿಗೆ ತೀವ್ರವಾಗಿ ಗಾಯಗೊಂಡು ಕುಸಿದು ಬಿದ್ದ ತಾಯಿ ಗೀತಾ, ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗುದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಗೀತಾ ಅವರ ಗಂಡ ವಿಶ್ವೇಶ್ವರ ಭಟ್‌ ಹಾಗೂ ಮಗ ಮಧುಕರ ಇವರಿರು ಕುಡಿದು ಬಂದು ಗೀತಾ ವಾರ ಜೊತೆ ಜಗಳ ತೆಗೆದಿದ್ದಾರೆ ಹಾಗೂ ನಂತರ ರೀಪಿನ ತುಂಡು ಹಾಗೂ ಸ್ಟೂಲ್‌ನಲ್ಲಿ ಹೊಡೆದಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ಕುಮಟಾ ಪಿಎಸ್ಐ ನವೀನ ನಾಯ್ಕ್, ಡಿವೈಎಸ್‌ಪಿ ಬೆಳ್ಳಿಯಪ್ಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಸಂಬಂಧ ಮೃತ ಗೀತಾ ಅವರ ಪತಿ ವಿಶ್ವೇಶ್ವರ ಭಟ್ಟ (69 ) ಹಾಗೂ ಹಾಗೂ ಮಗ ಮಧುಕರ ಭಟ್ಟ (33) ಇಬ್ಬರನ್ನು ವಶಕ್ಕೆ ಪಡೆದಿದ್ದು ಪಿ ಎಸ್ ಐ ನವೀನ್ ನಾಯ್ಕ್ ಮುಂದಿನ ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ತನಿಖೆಯ ನಂತರದಲ್ಲಿ ಸತ್ಯಾಸತ್ಯತೆ ತಿಳಿಯಲಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಪ್ರಕಟ

4 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement