ಮರಣೋತ್ತರ ಪರೀಕ್ಷೆ ವೇಳೆ ಸತ್ತ ದೇಹದಿಂದ ಹೊರಬಂದ ಹಾವು….!

ಮರಣೋತ್ತರ ಪರೀಕ್ಷೆಯ ವೇಳೆ ಮೃತ ದೇಹದಿಂದ ಹಾವೊಂದು ಹೊರಬಂದ ವಿಚಿತ್ರ ಘಟನೆ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಶವಪರೀಕ್ಷೆ ತಂತ್ರಜ್ಞರು ಪರೀಕ್ಷೆ ಮಾಡುವಾಗ ಮೃತದೇಹದೊಳಗಿಂದ ಜೀವಂತಹಾವು ಹೊರಬಂದಿದೆ ಎಂದು ಶವಪರೀಕ್ಷೆ ತಂತ್ರಜ್ಞರಾದ ಜೆಸ್ಸಿಕಾ ಲೋಗನ್ ಹೇಳೊಕೊಂಡಿದ್ದಾರೆ.
ಜೆಸ್ಸಿಕಾ ಲೋಗನ್ ಅವರು ಒಂಬತ್ತು ವರ್ಷಗಳಿಂದ ಶವಪರೀಕ್ಷೆ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಈ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಚರಂಡಿಯಲ್ಲಿ ಪತ್ತೆಯಾದ ಶವವೊಂದು ಮರಣೋತ್ತರ ಪರೀಕ್ಷೆಗೆ ಬಂದಿತ್ತು. ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಇತ್ತು. ನಾನು ಮೃತದೇಹವನ್ನು ಪರೀಕ್ಷೆ ಮಾಡುವಾಗ ಇದ್ದಕ್ಕಿದ್ದಂತೆ ಮೃತದೇಹದಿಂದ ಹಾವೊಂದು ಹೊರ ಬಂತು. ಅದನ್ನು ನೋಡಿದ ನಾನು ಹೆದರಿ ಕಿರುಚುತ್ತಾ ಕೋಣೆಯಿಂದ ಓಡಿ ಹೋದೆ. ಹಾವನ್ನು ಸೆರೆಹಿಡಿಯುವವರೆಗೂ ನಾನು ಆ ಕೋಣೆಗೆ ಹಿಂತಿರುಗಿ ಬರಲಿಲ್ಲ ಎಂದು ಜೆಸ್ಸಿಕಾ ಲೋಗನ್ ಹೇಳಿಕೊಂಡಿದ್ದಾರೆ.

ಮೃತ ದೇಹವನ್ನು ಹೊಕ್ಕುವ ಹುಳುಗಳನ್ನು ತಡೆಯಲು ಆಗುವುಲ್ಲ. ಮೃತದೇಹಕ್ಕೆ ಹುಳಗಳಾಗಿ ಹಾವು ಮೃತದೇಹದೊಳಗೆ ಸೇರಿಕೊಂಡಿರಬಹುದು ಎಂದು ಅವರು ಹೇಳಿದ್ದಾರೆ.
ದೇಹವು “ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿ ಚರಂಡಿಯಲ್ಲಿ ಕಂಡುಬಂದಿದೆ. ಇಂತಹ ದೇಹಗಳಿಗೆ ಆಗಾಗ್ಗೆ ಮಾಂಸವನ್ನು ತಿನ್ನುವ ಕೀಟಗಳು ಮತ್ತು ಹುಳುಗಳು ಮುತ್ತಿಕೊಳ್ಳುತ್ತವೆ. ಹೀಗೆ ಹುಳಗಳು ಮತ್ತಿಕೊಂಡು ದೇಹದ ಭಾಗಗಳನ್ನು ತಿಂದ ನಂತರ ಹಾವು ದೇಹದ ಒಳಗೆ ಸೇರಿರಬಹುದು ಎಂದು ಅವರು ಹೇಳಿದ್ದಾರೆ.
ಇದು ಸತ್ತವರು ಕಂಡುಬರುವ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. ಮೃತದೇಹ ತಂಪಾಗಿದ್ದರೆ ಸಾಮಾನ್ಯವಾಗಿ ಅದರಲ್ಲಿ ಹೆಚ್ಚಿನ ಕೀಟಗಳು ಅಥವಾ ಹುಳಗಳು ಕಂಡುಬರುವುದಿಲ್ಲ. ಆದರೆ ಅದು ಬಿಸಿಯಾಗಿದ್ದರೆ ಅಥವಾ ಸಾಮಾನ್ಯವಾಗಿದ್ದರೆ ದೇಹಕ್ಕೆ ಬಹಳಷ್ಟು ಹುಳುಗಳು ಬರುತ್ತವೆ ಎಂದು ಅವರು ಹೇಳಿದ್ದಾರೆ.

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement